ವಾಷಿಂಗ್ಟನ್ ಸುಂದರ್
ವಾಷಿಂಗ್ಟನ್ ಸುಂದರ್

ಐಪಿಎಲ್ 2021: ಆರ್ ಸಿಬಿಗೆ ಆಘಾತ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಟೂರ್ನಿಯಿಂದಲೇ ಔಟ್

ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅರ್ಧಕ್ಕೇ ನಿಂತಿದ್ದ ಐಪಿಎಲ್ 2021 ಟೂರ್ನಿ ಮುಂದುವರೆಯುವ ಕುರಿತ ಸಂತಸದಲ್ಲಿರುವ ಆರ್ ಸಿಬಿ ಅಭಿಮಾನಿಗಳಿಗೆ ಆಘಾತವೊಂದು ಎದುರಾಗಿದ್ದು, ತಂಡದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅರ್ಧಕ್ಕೇ ನಿಂತಿದ್ದ ಐಪಿಎಲ್ 2021 ಟೂರ್ನಿ ಮುಂದುವರೆಯುವ ಕುರಿತ ಸಂತಸದಲ್ಲಿರುವ ಆರ್ ಸಿಬಿ ಅಭಿಮಾನಿಗಳಿಗೆ ಆಘಾತವೊಂದು ಎದುರಾಗಿದ್ದು, ತಂಡದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.

ಹೌದು.. ಇಂಡಿಯನ್ ಪ್ರೀಮಿಯರ್ ಲೀಗ್ 14ನೇ (IPL 2021) ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಬಹುತೇಕ ಎಲ್ಲ ಫ್ರಾಂಚೈಸಿಗಳು ಟೂರ್ನಿ ನಡೆಯುವ ಯುಎಇಗೆ ತೆರಳಿದ್ದು ಕೆಲವು ತಂಡಗಳು ಕ್ವಾರಂಟೈನ್​ನಲ್ಲಿದ್ದರೆ, ಇನ್ನೂ ಕೆಲ ತಂಡದ ಆಟಗಾರರು ಅಭ್ಯಾಸ ಶುರು ಮಾಡಿದ್ದಾರೆ. ಆರ್​ಸಿಬಿ (RCB) ಫ್ರಾಂಚೈಸಿ ನಿನ್ನೆಯಷ್ಟೆ ದುಬೈ ಫ್ಲೈಟ್ ಏರಿದೆ. ಆದರೆ, ಸದ್ಯ ಕೊಹ್ಲಿ ಪಡೆಗೆ ದೊಡ್ಡ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ 2021 ಟೂರ್ನಿಯಿಂದಲೇ ಹೊರಬಿದ್ದಾರೆ. ಕೈ ಬೆರಳಿಗೆ ಗಾಯವಾದ ಕಾರಣ ಇವರು ಐಪಿಎಲ್ 2021 ಟೂರ್ನಿಗೆ ಲಭ್ಯರಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. 

21 ವರ್ಷದ ಸುಂದರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಂಗ್ಲರ ನಾಡಿಗೆ ತೆರಳಿದ್ದರು. ಇಲ್ಲಿ ಅಭ್ಯಾಸ ಪಂದ್ಯದ ವೇಳೆ ಕೈಗೆ ಪೆಟ್ಟುಮಾಡಿಕೊಂಡಿದ್ದರು. ಹೀಗಾಗಿ ಈ ಸಂದರ್ಭ ಇಂಜುರಿಗೆ ತುತ್ತಾದ ಶುಭ್ಮನ್ ಗಿಲ್, ಆವೇಶ್ ಖಾನ್ ಜೊತೆ ಸುಂದರ್ ಕೂಡ ಭಾರತಕ್ಕೆ ಹಿಂತಿರುಗಿದ್ದರು. 

ಆಕಾಶ್ ದೀಪ್ ಸಿಂಗ್ ಆಯ್ಕೆ
ಇನ್ನು ವಾಷಿಂಗ್ಟನ್ ಸುಂದರ್ ರಿಂದ ತೆರವಾದ ಸ್ಥಾನಕ್ಕೆ ನೆಟ್ ಬೌಲರ್ ಆಗಿದ್ದ ಆಕಾಶ್ ದೀಪ್ ಸಿಂಗ್ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊರೊನಾ ವೈರಸ್ ಕಾರಣದಿಂದ ಕಳೆದ ಮೇ ತಿಂಗಳಲ್ಲಿ ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ (IPL 2021) ಇದೇ ಸೆಪ್ಟೆಂಬರ್ 19 ರಂದು ಕ್ವಿಕ್ ಸ್ಟಾರ್ಟ್ ಸಿಗಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುವ ಮೂಲಕ ಐಪಿಎಲ್ 2021ಕ್ಕೆ ಮತ್ತೆ ಚಾಲನೆ ಸಿಗಲಿದೆ.
 

Related Stories

No stories found.

Advertisement

X
Kannada Prabha
www.kannadaprabha.com