ಧನಾತ್ಮಕ ಮನೋಭಾವ ಹೊಂದಿದ್ದಾರೆ: ತಾಲಿಬಾನಿಗಳ ಹೊಗಳಿದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ

ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ರಚನೆಯಾಗಿದ್ದ ಘನಿ ಸರ್ಕಾರವನ್ನು ಉರುಳಿಸಿ ಆಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಕುರಿತಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಶಾಹಿದ್ ಅಫ್ರಿದಿ
ಶಾಹಿದ್ ಅಫ್ರಿದಿ

ಕಾಬೂಲ್: ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ರಚನೆಯಾಗಿದ್ದ ಘನಿ ಸರ್ಕಾರವನ್ನು ಉರುಳಿಸಿ ಆಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಕುರಿತಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಅಮೆರಿಕದ ಸೇನಾಪಡೆಗಳು ಸಂಪೂರ್ಣವಾಗಿ ಆಫ್ಘಾನಿಸ್ತಾನವನ್ನು ತೊರೆದ ಬೆನ್ನಲ್ಲೇ ತಾಲಿಬಾನ್ ಪಡೆಗಳು ಆಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಅಂತಿಮ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ತಾಲಿಬಾನ್ ಪರ ಬ್ಯಾಟ್ ಬೀಸಿದ್ದಾರೆ.

ಹೌದು.. ಈ ಕುರಿತು ಟ್ವೀಟ್ ಮಾಡಿರುವ ಅಫ್ರಿದಿ, ತಾಲಿಬಾನಿಗಳು ಈಗ ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ. ಮಹಿಳೆಯರಿಗೆ ಹೊರಗೆ ಹೋಗಲು ಅನುಮತಿ ನೀಡುತ್ತಿದ್ದಾರೆ. ಅವರು ಕ್ರಿಕೆಟ್ ಅನ್ನೂ ಇಷ್ಟಪಡುತ್ತಾರೆ ಮತ್ತು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಮುಂದಿನ ಪಾಕಿಸ್ತಾನ ಸೂಪರ್ ಲೀಗ್ ಬಗ್ಗೆ ಮಾತನಾಡಿದ ಇವರು, ಇದು ನನ್ನ ಕೊನೆಯ ಕ್ರಿಕೆಟ್ ಪಂದ್ಯಾವಳಿಯಾಗಿರಲಿದೆ. ಕ್ವೆಟ್ಟಾ ಗ್ಲಾಡಿಯೇಟರ್ಸ್‌ಗಾಗಿ ಆಡಲು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಸೀಮಿತ ಕ್ರಿಕೆಟ್ ಆಡುತ್ತಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆಫ್ರೀದಿ ಬಯೋ ಬಬಲ್ ಒಳಗೆ ಅಭ್ಯಾಸ ಮಾಡುವುದು ಆಟಗಾರರಿಗೆ ತುಂಬಾ ಕಷ್ಟ ಎಂದು ಹೇಳಿದರು. 

ಅಫ್ರಿದಿ ಅವರ ಈ ಹೇಳಿಕೆ ಇದೀಗ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ಈ ಹಿಂದೆ ಪಾಕ್ ಪ್ರಧಾನಿ ಮತ್ತು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಕೂಡ ತಾಲಿಬಾನ್ ಪರವಾಗಿ ಹೇಳಿಕೆ ನೀಡಿದ್ದರು. 

41 ವರ್ಷದ ಪಾಕ್ ಮಾಜಿ ಆಲ್‌ರೌಂಡರ್ ಆಫ್ರೀದಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಪಾಕಿಸ್ತಾನ ಪರ 37 ಟೆಸ್ಟ್, 398 ಏಕದಿನ ಮತ್ತು 99 ಟಿ-20 ಪಂದ್ಯಗಳನ್ನು ಆಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com