ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಗೆ ಮೂರು ಪಂದ್ಯ ಸೂಕ್ತ: ರವಿಶಾಸ್ತ್ರಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಒಂದೇ ಪಂದ್ಯದಿಂದ ವಿಜೇತರನ್ನು ನಿರ್ಧರಿಸಬಾರದು, ಮೂರು ಫೈನಲ್ ಪಂದ್ಯ ನಡೆದರೆ ಒಳ್ಳೆಯದು ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ರವಿ ಶಾಸ್ತ್ರಿ
ರವಿ ಶಾಸ್ತ್ರಿ

ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಒಂದೇ ಪಂದ್ಯದಿಂದ ವಿಜೇತರನ್ನು ನಿರ್ಧರಿಸಬಾರದು, ಮೂರು ಫೈನಲ್ ಪಂದ್ಯ ನಡೆದರೆ ಒಳ್ಳೆಯದು ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕ್ರಿಕೆಟ್ ತಂಡ ಬುಧವಾರ ರಾತ್ರಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ. ಇಲ್ಲಿ ಐಸಿಸಿ ಆಯೋಜಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಫೈನಲ್ ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ಕಾದಾಟ ನಡೆಸಲಿವೆ. ಇಂಗ್ಲೆಂಡ್ ಗೆ ತೆರಳುವ ಮೊದಲು ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ತರಬೇತುದಾರ ರವಿಶಾಸ್ತ್ರಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಡೆಸುವ ಬಗ್ಗೆ ಕೋಚ್ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಒಂದೇ ಪಂದ್ಯದಿಂದ ವಿಜೇತರನ್ನು ನಿರ್ಧರಿಸಬಾರದು ಎಂದು ಅವರು ನಂಬುತ್ತಾರೆ.

"ಐಸಿಸಿ ಚಾಂಪಿಯನ್ ಶೀಪ್ ಇನ್ನು ಮುಂದುವರೆಸಲು ಬಯಸಿದರೆ ಮೂರು ಫೈನಲ್ ಇದ್ದರೆ ಅತ್ಯುತ್ತಮವಾದುದು ಎಂದು ನಾನು ಭಾವಿಸುತ್ತೇನೆ. ವೇಳಾ ಪಟ್ಟಿಯ ಕಾರಣ, ನಾವು ಮಾಡಬೇಕು ಸಾಧ್ಯವಾದಷ್ಟು ಬೇಗ ಮುಗಿಸಬೇಕು. ಎಲ್ಲಾ ಆಟಗಾರರು ತಮ್ಮ ಘನತೆಗೆ ತಕ್ಕ ಆಟ ಆಡಿದರ ಪರಿಣಾಮ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ" ಎಂದು ತಿಳಿಸಿದ್ದಾರೆ. 

ಈ ಫೈನಲ್ ಪಂದ್ ಎರಡೂ ತಂಡಗಳಿಗೆ ಮುಖ್ಯ ಎಂದು ಕೋಚ್ ಒಪ್ಪಿಕೊಂಡರು. ಭಾರತ ಮತ್ತು ನ್ಯೂಜಿಲೆಂಡ್ ಇಲ್ಲಿಗೆ ತಲುಪಲು ಶ್ರಮಿಸಿದೆ. "ಇದು ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಆಗಲಿದೆ. ಈ ಒಂದು ಪಂದ್ಯದ ಮಹತ್ವದ ಬಗ್ಗೆ ನೀವು ಯೋಚಿಸಿದಾಗ ಅದು ದೊಡ್ಡದಾಗಿದೆ. ಈ ತಂಡಗಳು ಪ್ರಪಂಚದಾದ್ಯಂತ ಎಲ್ಲಾ ತಂಡಗಳೊಂದಿಗೆ  ಆಡಿ ಸ್ಥಿರ ಪ್ರದರ್ಶನ ನೀಡಿ ಫೈನಲ್ ನಲ್ಲಿ ಆಡುವ ಹಕ್ಕನ್ನು ಪಡೆದರು". 

ಭಾರತ ತಂಡದ ಪ್ರಮುಖ ಆಟಗಾರರು ಇಂಗ್ಲೆಂಡ್ ನಲ್ಲಿದ್ದರೆ, ಈ ಮಧ್ಯೆ ಶ್ರೀಲಂಕಾದಲ್ಲಿ, ಟೀಮ್ ಇಂಡಿಯಾದ ಉಳಿದ ಆಟಗಾರರು ಏಕದಿನ ಮತ್ತು ಟಿ 20 ಪಂದ್ಯಗಳನ್ನು ಆಡಲಿದ್ದಾರೆ. "ನೋಡಿ, ನೀವು ಟಿ-20 ಯನ್ನು ಇಡೀ ಜಗತ್ತಿಗೆ ಹರಡಲು ಬಯಸಿದರೆ, ಅದು ಒಂದು ಹೆಜ್ಜೆ ಮುಂದಿದೆ. ಒಲಿಂಪಿಕ್ಸ್ ನಲ್ಲಿ ನೀವು ಕ್ರಿಕೆಟ್ ನೋಡಲು ಬಯಸಿದರೆ, ಹೆಚ್ಚಿನ ತಂಡಗಳು ಬೇಕಾಗುತ್ತವೆ" ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com