ಒಬ್ಬಿಬ್ಬರಲ್ಲ ಇಡೀ ತಂಡವೇ ನಮಗೆ ಅಪಾಯ: ಭಾರತ ವಿರುದ್ಧದ ಡಬ್ಲ್ಯುಟಿಸಿ ಫೈನಲ್‌ ಕುರಿತು ಉಪನಾಯಕ ಲಾಥಮ್ ಉವಾಚ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕಿರೀಟಕ್ಕಾಗಿ ತಮ್ಮ ಮೇಲಿರುವ ಸವಾಲುಗಳ ಬಗ್ಗೆ ನ್ಯೂಜಿಲೆಂಡ್ ಉಪನಾಯಕ ಟಾಮ್ ಲಾಥಮ್ ಮಾತನಾಡಿದ್ದಾರೆ.  
ನ್ಯೂಜಿಲ್ಯಾಂಡ್ ತಂಡ
ನ್ಯೂಜಿಲ್ಯಾಂಡ್ ತಂಡ

ಬರ್ಮಿಂಗ್ಹ್ಯಾಮ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕಿರೀಟಕ್ಕಾಗಿ ತಮ್ಮ ಮೇಲಿರುವ ಸವಾಲುಗಳ ಬಗ್ಗೆ ನ್ಯೂಜಿಲೆಂಡ್ ಉಪನಾಯಕ ಟಾಮ್ ಲಾಥಮ್ ಮಾತನಾಡಿದ್ದಾರೆ.  

ಇಂಗ್ಲೆಂಡ್ ಗಿಂತ ವಿರಾಟ್ ಕೊಹ್ಲಿ ಪಡೆ ಸಂಪೂರ್ಣ ವಿಭಿನ್ನ ಎಂದು ಬಣ್ಣಿಸಿದ್ದಾರೆ. ಗಾಯಗೊಂಡಿರುವ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳಿಗೆ ಲಾಥಮ್ ನಾಯಕತ್ವ ವಹಿಸಿದ್ದು 1-0 ಅಂತರದಿಂದ ಟೆಸ್ಟ್ ಸರಣಿ ಗೆಲುವು ಸಾಧಿಸಿತ್ತು. ಇದು 1999ರ ನಂತರ ಇಂಗ್ಲೆಂಡ್ ನಲ್ಲಿ ಗೆದ್ದ ಮೊದಲ ಟೆಸ್ಟ್ ಸರಣಿಯಾಗಿದೆ. 

ಭಾರತದಿಂದ ಬರುವ ದೊಡ್ಡ ಅಪಾಯ ಎಲ್ಲಿದೆ ಎಂದು ಕೇಳಿದ ಪ್ರಶ್ನೆಗೆ ಲಾಥಮ್ ಇಡೀ ತಂಡವೇ ನಮಗೆ ಸವಾಲು ಎಂದು ಹೇಳಿದರು. ಟೀಂ ಇಂಡಿಯಾ ಅದ್ಭುತವಾದ ಬೌಲರ್‌ಗಳನ್ನು ಹೊಂದಿದ್ದಾರೆ. ಪ್ರಪಂಚದಾದ್ಯಂತ ವಿವಿಧ ಪರಿಸ್ಥಿತಿಗಳಲ್ಲಿ ಆಡಿ ರನ್ ಗಳಿಸಿರುವ ಸಾಕಷ್ಟು ಗುಣಮಟ್ಟದ ಬ್ಯಾಟ್ಸ್‌ಮನ್‌ಗಳಿದ್ದಾರೆ. 

ಭಾರತ ತಂಡ ಕೆಲ ವರ್ಷಗಳ ಹಿಂದೆ ಇಲ್ಲಿ ಉತ್ತಮವಾಗಿ ಆಡಿದ್ದರು. ಆದ್ದರಿಂದ ನಾವು ಹೇಗೆ ಆಡಬೇಕು ಎಂಬುದು ನಮಗೆ ತಿಳಿದಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಗೆಲುವು ವಿಜಯೋತ್ಸವವನ್ನು ಆಚರಿಸಿದರೆ, ಇನ್ನು ಎರಡು ದಿನಗಳಲ್ಲಿ ನಮ್ಮ ಗಮನವು ಭಾರತದ ಕಡೆ ಬದಲಾಗುತ್ತದೆ ಎಂದು ಲಾಥಮ್ ಹೇಳಿದರು.

2018ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶ ನೀಡಿ 4-1 ಅಂತರದಿಂದ ಸರಣಿ ಗೆಲುವು ಸಾಧಿಸಿದ್ದು ಆ ಮೂಲಕ ಏಗಾಸ್ ಬೌಲ್‌ನಲ್ಲಿ ಅವರನ್ನು ಸೋಲಿಸುವುದು ಕಠಿಣ ಎಂದು ತೋರಿಸಿದ್ದಾರೆ. 

ಡಬ್ಲ್ಯೂಟಿಸಿ ಫೈನಲ್ ಉದ್ಘಾಟನಾ ಪಂದ್ಯ ಜೂನ್ 18ರಿಂದ 23ರವರೆಗೆ ಸೌತಾಂಪ್ಟನ್ನಲ್ಲಿ ನಡೆಯಲಿದೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯ ನಾಲ್ಕು ದಿನಗಳೊಳಗಾಗಿ ಮುಗಿಯುವುದರೊಂದಿಗೆ ಕಿವೀಸ್ ವಿಶ್ರಾಂತಿ ಪಡೆಯಲು ಮತ್ತು ಭಾರತ ಸವಾಲಿಗೆ ತಯಾರಿ ನಡೆಸಲು ಒಂದು ದಿನ ಹೆಚ್ಚುವರಿವಾಗಿ ಸಿಕ್ಕಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com