ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಿಂದ ಟೀಂ ಇಂಡಿಯಾ ಮಾಜಿ ನಾಯಕ ಅಜರುದ್ದೀನ್ ಅಮಾನತು: ಪ್ರತೀಕಾರದ ಕ್ರಮ ಎಂದ ಕ್ರಿಕೆಟಿಗ!

ಅಪೆಕ್ಸ್ ಕೌನ್ಸಿಲ್ ಆಫ್ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​(ಎಚ್‌ಸಿಎ) ತನ್ನ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪದ ಮೇಲೆ ತನ್ನದೇ ಅಧ್ಯಕ್ಷ, ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು "ಅಮಾನತುಗೊಳಿಸಿದೆ".
ಅಜರುದ್ದೀನ್
ಅಜರುದ್ದೀನ್

ಹೈದರಾಬಾದ್: ಅಪೆಕ್ಸ್ ಕೌನ್ಸಿಲ್ ಆಫ್ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​(ಎಚ್‌ಸಿಎ) ತನ್ನ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪದ ಮೇಲೆ ತನ್ನದೇ ಅಧ್ಯಕ್ಷ, ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು "ಅಮಾನತುಗೊಳಿಸಿದೆ".

ಅಜರುದ್ದೀನ್ ವಿರುದ್ಧ ಸಂಘರ್ಷಕ್ಕೆ ಕಾರಣಕರ್ತರಾಗುತ್ತಾರೆ ಎನ್ನುವ ಆರೋಪಗಳನ್ನು ಹೊರಿಸಲಾಗಿದೆ. ಆದಾಗ್ಯೂ, ಅಮಾನತುಗೊಳಿಸುವಿಕೆಯ ಸಿಂಧುತ್ವವನ್ನುಅಜರುದ್ದೀನ್ ಪ್ರಶ್ನಿಸಬಹುದು ಏಕೆಂದರೆ ರಾಜ್ಯ ಘಟಕದ ಸಾಮಾನ್ಯ ಸಂಸ್ಥೆಗೆ ಹಾಲಿ ಅಧ್ಯಕ್ಷರನ್ನು ಅಮಾನತುಗೊಳಿಸುವ ಅಧಿಕಾರವಿದೆ ಮತ್ತು ಅಪೆಕ್ಸ್ ಕೌನ್ಸಿಲ್ ಗೆ ಅಲ್ಲ ಇದಲ್ಲದೆ ಅವರ ಐದು ಸದಸ್ಯರನ್ನು ಈಗಾಗಲೇ ಎಚ್‌ಸಿಎಯ ಒಂಬುಡ್ಸ್ಮನ್ ವಿಚಾರಿಸಿದ್ದಾರೆ.

ಎಚ್‌ಸಿಎ ಅಪೆಕ್ಸ್ ಕೌನ್ಸಿಲ್ ಮಾಜಿ ನಾಯಕನೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿತ್ತು ಮತ್ತು ಇತ್ತೀಚಿನ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ (ಎಸ್‌ಜಿಎಂ) ಶಿವಲಾಲ್ ಯಾದವ್ ಅವರನ್ನು ತಮ್ಮ ಪ್ರತಿನಿಧಿಯಾಗಿ ಬಯಸಿತು ಆದರೆ ಬಿಸಿಸಿಐ ಮಧ್ಯಪ್ರವೇಶಿಸಿ, ಅಜರುದ್ದೀನ್‌ಗೆ ಸಭೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು.

ಟೀಂ ಇಂಡಿಯಾ  ಮಾಜಿ ನಾಯಕ ಈ ಕ್ರಮವನ್ನು "ಲಾಬಿ", ತನ್ನ ವಿರುದ್ಧ ಪ್ರತೀಕಾರದ ಕ್ರಮ  ಎಂದು ಕರೆದರು ಮತ್ತು ಈ ಕುರಿತು ಹೋರಾಡಲು ಶಪಥ ಮಾಡಿದರು.

"ನಿಮ್ಮ ವಿರುದ್ಧ (ಅಜರುದ್ದೀನ್) ಸದಸ್ಯರು ಮಾಡಿದ ದೂರುಗಳನ್ನು ಪರಿಗಣಿಸಿದ ನಂತರ, ಈ ತಿಂಗಳ 10 ರಂದು ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಶೋಕಾಸ್ ನೋಟೀಸ್ ನೀಡಲು ನಿರ್ಧರಿಸಲಾಯಿತು. ನೀವು ನಿಯಮಗಳನ್ನು ಉಲ್ಲಂಘಿಸಿ ವರ್ತಿಸಿದ್ದೀರಿ ಎಂದು ಗಮನಿಸಿ ಈ ತೀರ್ಮಾನ ಮಾಡಲಾಗಿದೆ.

"ಅಪೆಕ್ಸ್ ಕೌನ್ಸಿಲ್ ನಿಮ್ಮನ್ನು ಅಮಾನತುಗೊಳಿಸುತ್ತಿದೆ ಮತ್ತು ಈ ದೂರುಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ನಿಮ್ಮ ಎಚ್‌ಸಿಎ ಸದಸ್ಯತ್ವವನ್ನು ರದ್ದುಗೊಳಿಸಲಾಗುತ್ತಿದೆ".

ಅಪೆಕ್ಸ್ ಕೌನ್ಸಿಲ್ 80 ಮತ್ತು 90 ರ ದಶಕದ ಟ್ಸ್‌ಮನ್ ವಿರುದ್ಧ "ದುಷ್ಕೃತ್ಯ" ಮತ್ತು "ಲೋಪ ಮತ್ತು ವಿವಿಧ ಆರೋಪಗಳನ್ನು ಹೊರಿಸಿತು. "ನೀವು ದುಬೈನ ಖಾಸಗಿ ಕ್ರಿಕೆಟ್ ಕ್ಲಬ್‌ನ ಮಾರ್ಗದರ್ಶಕರಾಗಿದ್ದೀರಿ ಎಂದು ದೂರಿನಲ್ಲಿ ತಿಳಿಸಲಾಗಿದೆ, ಇದು ಟಿ 10 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ನಾರ್ದರ್ನ್ ವಾರಿಯರ್ಸ್, ಇದು ಬಿಸಿಸಿಐನಿಂದ ಗುರುತಿಸಲ್ಪಟ್ಟಿಲ್ಲ. ನೀವು ಮಾರ್ಗದರ್ಶಕರಾಗಿದ್ದೀರಿ ಎಂಬ ಅಂಶವನ್ನು ಯಾವುದೇ ಸಮಯದಲ್ಲಿ ಎಚ್‌ಸಿಎಗೆ ತಿಳಿಸಲಾಗಿಲ್ಲ".

"ನೀವು ಬಿಸಿಸಿಐಗೆ ಅದೇ ರೀತಿ ಹೇಳಿಲ್ಲ ಎಂಬುದು ಸಹ ಸ್ಪಷ್ಟವಾಗಿದೆ. ಆದ್ದರಿಂದ ನೀವು ಗುರುತಿಸಲಾಗದ ಪಂದ್ಯಾವಳಿಯ ಮಾರ್ಗದರ್ಶಕರಾಗಿರುವುದು ಸಂಘರ್ಷದ ವ್ಯಾಪ್ತಿಗೆ ಒಳಪಟ್ಟಿದೆ, ಇದು ಜ್ಞಾಪಕ ಪತ್ರದ ನಿಯಮ 38 (1) (iii) ರ ಪ್ರಕಾರ ಮತ್ತು ಎಚ್‌ಸಿಎ ನಿಯಮಗಳು ಮತ್ತು ನಿಯಮಗಳು 2018ರ ಅನುಸಾರ ಅನುಚಿತ” ಎಂದು ಎಚ್‌ಸಿಎ ಅಮಾನತು ನೋಟಿಸ್ ನಲ್ಲಿ ಹೇಳಲಾಗಿದೆ.

ಅಜರುದ್ದೀನ್ ತಮ್ಮ ಕಡೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದರು ಮತ್ತು ಕಾನೂನಿನ ನಿಯಮವನ್ನು ಪರಿಗಣಿಸಿ ಇದನ್ನು "ಯುದ್ಧದ ರೀತಿ ಎಂದು ಕರೆದರು. "ಇಂದು, ಈ ಸುಳ್ಳು ನಿರೂಪಣೆಗಳು ಮಾಧ್ಯಮಗಳಲ್ಲಿ ಪ್ರಕಟವಾಗುವುದರಿಂದ ಕ್ರಿಕೆಟ್ ಆಡಳಿತದ ಸಂಸ್ಥೆಯು ಸ್ವತಃ ಅಪಾಯಕ್ಕೆ ಸಿಲುಕಲಿದೆ. "ದಯವಿಟ್ಟು ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಇನ್ನೊಂದು ಕಡೆಯವರ ವಾದವನ್ನೂ ಕೇಳಿ ನಂತರ ನೀವು ಏನನ್ನಾದರೂ ಪ್ರಕಟಿಸುವ ಮೊದಲು ಎಚ್‌ಸಿಎ ಸಂವಿಧಾನಕ್ಕೆ ಅನುಗುಣವಾಗಿ ತರ್ಕಬದ್ಧ ದೃಷ್ಟಿಕೋನವನ್ನು ತೆಗೆದುಕೊಳ್ಳಿ ಏಕೆಂದರೆ ನೀವು ಬರೆಯುವದನ್ನು ಸಮಾಜವು ನಂಬುತ್ತದೆ" ಎಂದು ಅಜರುದ್ದೀನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com