ಆಲ್ ರೌಂಡರ್ ಅನ್ಶುಲಾಗೆ 4 ವರ್ಷ ಕಾಲ ನಿಷೇಧ; ಡೋಪಿಂಗ್ ನಿಂದ ಬ್ಯಾನ್ ಆದ ಭಾರತದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ!
ಡೋಪಿಂಗ್ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿದ್ದ ಯುವ ಆಟಗಾರ ಪೃಥ್ವಿ ಶಾ ಬಳಿಕ ಇದೀಗ ಮತ್ತೊರ್ವ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ನಿಷೇಧಕ್ಕೆ ಒಳಗಾಗಿದ್ದಾರೆ.
Published: 28th June 2021 05:52 PM | Last Updated: 28th June 2021 08:15 PM | A+A A-

ಅನ್ಶುಲ್ ರಾವ್
ನವದೆಹಲಿ: ಡೋಪಿಂಗ್ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿದ್ದ ಯುವ ಆಟಗಾರ ಪೃಥ್ವಿ ಶಾ ಬಳಿಕ ಇದೀಗ ಮತ್ತೊರ್ವ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ನಿಷೇಧಕ್ಕೆ ಒಳಗಾಗಿದ್ದಾರೆ.
ಮಧ್ಯಪ್ರದೇಶದ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್ ಅನ್ಶುಲಾ ರಾವ್ ಡೋಪಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದು ನಾಲ್ಕು ವರ್ಷಗಳ ಕಾಲ ನಿಷೇಧಕ್ಕೆ ಒಳಗಾದ ಭಾರತದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ.
ಬಿಸಿಸಿಐ ಆಯೋಜಿಸಿದ್ದ ಅಂಡರ್ 23 ಟಿ20 ಪಂದ್ಯಾವಳಿಯಲ್ಲಿ ಕೊನೆಯದಾಗಿ ತಮ್ಮ ರಾಜ್ಯವನ್ನು ಪ್ರತಿನಿಧಿಸಿದರು. ಅನ್ಶುಲಾ ನಿಷೇಧಿತ ವಸ್ತು ಅನಾಬೊಲಿಕ್ ಸ್ಟೀರಾಯ್ಡ್ 19 ನೊರಾಂಡ್ರೊಸ್ಟೆರಾನ್ ಅನ್ನು ಸೇವಿಸಿದ್ದರು ಎಂದು ವರದಿಯಾಗಿದೆ.