ಚೊಚ್ಚಲ ನಾಯಕತ್ವದಲ್ಲೇ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದ ಮೊದಲ ಪಾಕ್ ನಾಯಕ ಬಾಬರ್ ಅಜಂ!
ಸತತ ಆರನೇ ಸರಣಿ ಗೆಲುವು ಸಾಧಿಸಿದ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಭಿನಂದಿಸಿದೆ. ಇದೇ ವೇಳೆ ಆರಂಭಿಕ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದ ಮೊದಲ ಪಾಕಿಸ್ತಾನ ನಾಯಕ ಎಂಬ ಹೆಗ್ಗಳಿಕೆಗೆ ಬಾಬರ್ ಅಜಂ ಪಾತ್ರರಾಗಿದ್ದಾರೆ.
Published: 11th May 2021 12:57 PM | Last Updated: 11th May 2021 01:07 PM | A+A A-

ಬಾಬರ್ ಅಜಂ
ಹರಾರೆ: ಸತತ ಆರನೇ ಸರಣಿ ಗೆಲುವು ಸಾಧಿಸಿದ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಭಿನಂದಿಸಿದೆ. ಇದೇ ವೇಳೆ ಆರಂಭಿಕ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದ ಮೊದಲ ಪಾಕಿಸ್ತಾನ ನಾಯಕ ಎಂಬ ಹೆಗ್ಗಳಿಕೆಗೆ ಬಾಬರ್ ಅಜಂ ಪಾತ್ರರಾಗಿದ್ದಾರೆ.
ಪಾಕಿಸ್ತಾನವು ಈ ವರ್ಷದ ಆರಂಭದಲ್ಲಿ ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ನಂತರ ರಿಟರ್ಸ್ ಸರಣಿಯಲ್ಲಿ ಟಿ20 ಮತ್ತು ಏಕದಿನ ಸರಣಿಯನ್ನು ಗೆದ್ದುಕೊಂಡಿತು.
ಪಾಕಿಸ್ತಾನವು ಆರು ಅಥವಾ ಹೆಚ್ಚಿನ ಸರಣಿಗಳನ್ನು ಗೆದ್ದಿರುವುದು ಇದು ಆರನೇ ಬಾರಿಗೆ. ಪಾಕಿಸ್ತಾನವು 2011-12ರಲ್ಲಿ 13 ನೇರ ಸರಣಿಗಳನ್ನು, 2015-16ರಲ್ಲಿ ಸತತ ಒಂಬತ್ತು ಸರಣಿಗಳನ್ನು, 2001-02ರಲ್ಲಿ ಸತತ ಎಂಟು ಸರಣಿಗಳನ್ನು, 1993-94 ಮತ್ತು 2017-18ರಲ್ಲಿ ಆರು ನೇರ ಸರಣಿಗಳನ್ನು ಗೆದ್ದಿತ್ತು.
ಹರಾರೆಯಲ್ಲಿ ಬಾಬರ್ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಇನ್ನಿಂಗ್ಸ್ ಅಂತರದಲ್ಲಿ ಗೆಲುವು ತಂದುಕೊಟ್ಟಿದ್ದರು. ಆಫ್ರಿಕಾ ಪ್ರವಾಸದಲ್ಲಿ ಗೆಲುವು ಸಾಧಿಸುವ ಮೂಲಕ ಯಶಸ್ಸು ದಾಖಲಿಸಿರುವುದಕ್ಕೆ ಪಿಸಿಬಿ ಅಧ್ಯಕ್ಷ ಎಹ್ಸಾನ್ ಮಣಿ ಅಭಿನಂದಿಸಿದರು.