ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಕುಂಬ್ಳೆ ಬಗ್ಗೆ ಲಂಕಾ, ಪಾಕ್ ಆಟಗಾರರ ಪ್ರಶಂಸೆ!

“ಐಸಿಸಿ ಹಾಲ್ ಆಫ್ ಫೇಮ್‌” ಆಯ್ಕೆಗೊಂಡಿರುವ ಟೀಮ್ ಇಂಡಿಯಾ ಸ್ಪಿನ್ ದಂತ ಕಥೆ ಅನಿಲ್ ಕುಂಬ್ಳೆ ಅವರ ಬಗ್ಗೆ ಶ್ರೀಲಂಕಾ ಹಾಗೂ ಪಾಕಿಸ್ತಾನಕ್ಕೆ ಸೇರಿದ ಮಾಜಿ ಕ್ರಿಕೆಟಿಗರು ಪ್ರಶಂಸೆಯ ಸುರಿಮಳೆ ಹರಿಸಿದ್ದಾರೆ.
ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ

ನವದೆಹಲಿ: “ಐಸಿಸಿ ಹಾಲ್ ಆಫ್ ಫೇಮ್‌” ಆಯ್ಕೆಗೊಂಡಿರುವ ಟೀಮ್ ಇಂಡಿಯಾ ಸ್ಪಿನ್ ದಂತ ಕಥೆ ಅನಿಲ್ ಕುಂಬ್ಳೆ ಅವರ ಬಗ್ಗೆ ಶ್ರೀಲಂಕಾ ಹಾಗೂ ಪಾಕಿಸ್ತಾನಕ್ಕೆ ಸೇರಿದ ಮಾಜಿ ಕ್ರಿಕೆಟಿಗರು ಪ್ರಶಂಸೆಯ ಸುರಿಮಳೆ ಹರಿಸಿದ್ದಾರೆ.

ಕುಂಬ್ಳೆ ಕಾರಣದಿಂದಾಗಿ ಹಲವು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾಗಿ ಶ್ರೀ ಲಂಕಾ ಆಲ್-ಟೈಮ್ ಶ್ರೇಷ್ಠ ಆಟಗಾರ ಸಂಗಕ್ಕಾರ ಶ್ಲಾಘಿಸಿದ್ದಾರೆ. ವೇಗ ಹಾಗೂ ನಿಖರತೆ ಅವರ ಬೌಲಿಂಗ್‌ ನ ಪ್ರಧಾನ ಆಸ್ತ್ರಗಳು ಎಂದು ಅವರು ಹೇಳಿದ್ದಾರೆ, ಇದರೊಂದಿಗೆ ತಮ್ಮ ವೃತ್ತಿಜೀವನದುದ್ದಕ್ಕೂ ಬಹಳಷ್ಟು ಹೆಣಗಾಡಬೇಕಾಯಿತು. ಕುಂಬ್ಳೆ ಎತ್ತರ ಅವರಿಗೆ ಅನುಕೂಲಕರ ಅಂಶವಾಗಿತ್ತು. ಅವರು ಎಸೆದ ಚೆಂಡುಗಳು ಚೆನ್ನಾಗಿ ಪುಟಿದೇಳುತ್ತಿದ್ದವು ಎಂದು ನೆನಪಿಸಿಕೊಂಡಿದ್ದಾರೆ.

ಅವರು ಬೌಲರ್ ಆಗಿ ತಮ್ಮನ್ನು ತೊಂದರೆಗೊಳಪಡಿಸಿದರೂ ಅವರು ವೈಯಕ್ತಿಕವಾಗಿ ತುಂಬಾ ಒಳ್ಳೆಯವರು ಎಂದು ಶ್ಲಾಘಿಸಿದ್ದಾರೆ.
ಬ್ಯಾಟ್ಸ್‌ಮನ್‌ ಗಳನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಕುಂಬ್ಳೆ ನಿಶ್ಚಿತ ಯೋಜನೆ ಹೊಂದಿರುತ್ತಿದ್ದರು. ಅದನ್ನು, ಅವರು ವಿಫಲಗೊಳಿಸದೆ ಕಾರ್ಯಗತಗೊಳಿಸಿ ಉತ್ತಮ ಫಲಿತಾಂಶ ಪಡೆದುಕೊಂಡಿದ್ದರು ಎಂದು ಹೇಳಿದ್ದಾರೆ. ಶ್ರೀಲಂಕಾದ ಮತ್ತೊಬ್ಬ ಬ್ಯಾಟ್ಸ್‌ಮನ್ ಜಯವರ್ಧನೆ, ಕುಂಬ್ಳೆ ಅವರ ಶಕ್ತಿ ಏನು ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಅವರು ತಮ್ಮ ಚೆಂಡುಗಳ ಮೂಲಕ ಬ್ಯಾಟ್ಸ್‌ಮನ್‌ನನ್ನು ಪ್ರಶ್ನಿಸುತ್ತಲೇ ಇದ್ದರು ಎಂದು ಅವರು ಹೇಳಿದ್ದಾರೆ.

ಬೌಲರ್‌ಗಳು ಕೂಡ ಕುಂಬ್ಳೆ ಅವರನ್ನು ಹೊಗಳಿ ಅಟ್ಟಕೇರಿಸಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ಬ್ಯಾಟ್ಸ್‌ಮನ್ ವಾಸಿಮ್ ಅಕ್ರಮ್ ಕುಂಬ್ಳೆ ಅವರನ್ನು ಕೊಂಡಾಡಿದ್ದಾರೆ ದೆಹಲಿಯಲ್ಲಿ, ಕುಂಬ್ಳೆ ತಮ್ಮ ವಿರುದ್ಧ 10 ವಿಕೆಟ್ ತೆಗೆದುಕೊಂಡಿದ್ದು ನನ್ನ ಕಣ್ಣೆದುರು ನಡೆಯಿತು.

ಅವರ 10ನೇ ವಿಕೆಟ್ ನಾನೇ ಆಗಿದ್ದೇ. ಈ ಐತಿಹಾಸಿಕ ಘಟನೆ ವೀಕ್ಷಿಸಲು ನನಗೆ ಅವಕಾಶ ಲಭಿಸಿತ್ತು ಎಂದು ಹೇಳಿದ್ದಾರೆ. ಏತನ್ಮಧ್ಯೆ, ಕುಂಬ್ಳೆ ಭಾರತಕ್ಕಾಗಿ 132 ಟೆಸ್ಟ್, 271 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 619 ಹಾಗೂ ಏಕದಿನ ಪಂದ್ಯಗಳಲ್ಲಿ 337 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಟೀಮ್‌ ಇಂಡಿಯಾ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com