ಇರ್ಫಾನ್ ಪಠಾಣ್ ಕುಟುಂಬ
ಕ್ರಿಕೆಟ್
ಮುಖ ಬ್ಲರ್ ಮಾಡಿ ಫೋಟೋ ಶೇರ್: ಟ್ರೋಲ್ ಮಾಡಿದ ನೆಟ್ಟಿಗರ ವಿರುದ್ಧ ಇರ್ಫಾನ್ ಗರಂ
ತನ್ನ ಪತ್ನಿಯ ಬ್ಲರ್ ಫೋಟೋ ಹಾಕಿದ್ದ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ತನ್ನನ್ನು ಟ್ರೋಲ್ ಮಾಡಿದ ನೆಟ್ಟಿಗರಿಗೆ ತಿರುಗೇಟು ನೀಡಿದ್ದಾರೆ.
ನವದೆಹಲಿ: ತನ್ನ ಪತ್ನಿಯ ಬ್ಲರ್ ಫೋಟೋ ಹಾಕಿದ್ದ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ತನ್ನನ್ನು ಟ್ರೋಲ್ ಮಾಡಿದ ನೆಟ್ಟಿಗರಿಗೆ ತಿರುಗೇಟು ನೀಡಿದ್ದಾರೆ.
ಇರ್ಫಾನ್ ಪಠಾಣ್ ತನ್ನ ಪತ್ನಿ ಸಫಾ ಹಾಗೂ ಮಗ ಇಮ್ರಾನ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ಫೋಟೋವನ್ನು ನೋಡಿದ ನೆಟ್ಟಿಗರು ಪಠಾಣ್ ವಿರುದ್ಧ ಗರಂ ಆಗಿದ್ದರು. ಅದಕ್ಕೆ ಕಾರಣ ಫೋಟೋದಲ್ಲಿನ ಪತ್ನಿಯ ಮುಖಕ್ಕೆ ಬಣ್ಣ ಬಳಿಯಲಾಗಿತ್ತು.
ಇದಕ್ಕೆ ನೆಟ್ಟಿಗರು ಫೋಟೋಗಳಲ್ಲಿ ಸಫಾ ಬುರ್ಖಾ ಧರಿಸಿರುತ್ತಾರೆ. ಇಲ್ಲದಿದ್ದರೆ ಕೈಗಳಿಂದ ಮುಖವನ್ನು ಮುಚ್ಚಿಕೊಂಡಿರುತ್ತಾರೆ. ಆದರೆ ಈ ಫೋಟೋದಲ್ಲಿ ಮುಖವನ್ನು ಬ್ಲರ್ ಮಾಡಲಾಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಇರ್ಫಾನ್ ಪಠಾಣ್, ನಾನು ಆಕೆಯ ಜೀವನ ಸಂಗಾತಿಯೇ ಹೊರತು ಮಾಲೀಕನಲ್ಲ. ಆಕೆಯ ಜೀವನ ಅವಳ ಆಯ್ಕೆ ಎಂದು ಹ್ಯಾಶ್ ಟ್ಯಾಗ್ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ