ಐಸಿಸಿ ಕ್ರಿಕೆಟ್ ಪುರಷರ ಸಮಿತಿ ಮುಖ್ಯಸ್ಥರಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇಮಕ

ಬಂಗಾಳದ ಹುಲಿ ಹಾಗೂ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಹೊಸ ಜವಾಬ್ದಾರಿ ನೀಡಿದೆ. ಕಳೆದ 9 ವರ್ಷಗಳಿಂದ ಐಸಿಸಿ ಕ್ರಿಕೆಟ್ ಪುರುಷರ ಸಮಿತಿಯ ಮುಖ್ಯಸ್ಥರಾಗಿದ್ದ ಅನಿಲ್ ಕುಂಬ್ಳೆ ಅವರ ಜಾಗವನ್ನು ಸೌರವ್ ಗಂಗೂಲಿ ತುಂಬಲಿದ್ದಾರೆ.
ಅನಿಲ್ ಕುಂಬ್ಳೆ-ಗಂಗೂಲಿ
ಅನಿಲ್ ಕುಂಬ್ಳೆ-ಗಂಗೂಲಿ

ಬೆಂಗಳೂರು: ಬಂಗಾಳದ ಹುಲಿ ಹಾಗೂ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಹೊಸ ಜವಾಬ್ದಾರಿ ನೀಡಿದೆ. ಕಳೆದ 9 ವರ್ಷಗಳಿಂದ ಐಸಿಸಿ ಕ್ರಿಕೆಟ್ ಪುರುಷರ ಸಮಿತಿಯ ಮುಖ್ಯಸ್ಥರಾಗಿದ್ದ ಅನಿಲ್ ಕುಂಬ್ಳೆ ಅವರ ಜಾಗವನ್ನು ಸೌರವ್ ಗಂಗೂಲಿ ತುಂಬಲಿದ್ದಾರೆ.

ಭಾರತದ ಸಕ್ಸಸ್ ಫುಲ್ ಕ್ಯಾಪ್ಟನ್ ಆಗಿ ಹಾಗೂ ಸದ್ಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಇನ್ಮುಂದೆ ಐಸಿಸಿ ಕ್ರಿಕೆಟ್ ಪುರುಷರ ಸಮಿತಿಯ ಚೇರ್ಮನ್ ಆಗಲಿದ್ದಾರೆ.

ಕುಂಬ್ಳೆ ಅಧ್ಯಕ್ಷರಾಗಿ 2012 ರಲ್ಲಿ ಅಧಿಕಾರ!
2012 ರಲ್ಲಿ ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್ ಬದಲಿಗೆ ಅನಿಲ್ ಕುಂಬ್ಳೆ ಅವರನ್ನು ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. 2016ರಲ್ಲಿ ಕುಂಬ್ಳೆ ಅಧ್ಯಕ್ಷರಾಗಿ ಮರು ಆಯ್ಕೆಯಾದರು. ಇದರ ನಂತರ, 2019 ರಲ್ಲಿ ಅವರ ಅವಧಿಯನ್ನು ಮತ್ತೆ 3 ವರ್ಷಗಳವರೆಗೆ ವಿಸ್ತರಿಸಲಾಯಿತು. ಕನ್ನಡಿಗ ಹಾಗೂ ಭಾರತೀಯ ಕ್ರಿಕೆಟ್ ನ ಮಾಜಿ ಆಟಗಾರ ಅನಿಲ್ ಕುಂಬ್ಳೆ ಅವರು ಒಟ್ಟು 9 ವರ್ಷಗಳ ಕಾಲ ಐಸಿಸಿಯ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಗಂಗೂಲಿ ಸ್ವಾಗತಿಸಿದ ಐಸಿಸಿ ಅಧ್ಯಕ್ಷ!
ಇನ್ನು 9 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನಿಲ್ ಕುಂಬ್ಳೆ ಅವರಿಗೆ ಐಸಿಸಿ ಅಧ್ಯಕ್ಷರಾಗಿರುವ ಗ್ಲೆಗ್ ಬಾರ್ಕ್ಲೇ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಅವರನ್ನು ಸ್ವಾಗತಿಸಲು ಸಂತೋಷವಾಗುತ್ತದೆ ಅಂತಾ ಬಾರ್ಕ್ಲೇ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com