ಕಾನ್ಪುರ ಟೆಸ್ಟ್: ಮೈದಾನಕ್ಕೆ ಇಳಿದಿದ್ದ ಕನ್ನಡಿಗ, ಆದರೆ ಟೀಂ ಇಂಡಿಯಾ ಪರ ಆಡುವುದಕಲ್ಲ; ರಚಿನ್‌ ರವೀಂದ್ರ ಯಾರೀತಾ?

ಪ್ರವಾಸಿ ನ್ಯೂಜಿಲ್ಯಾಂಡ್ ಮತ್ತು ಟೀಂ ಇಂಡಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಕಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ರಚಿನ್ ರವೀಂದ್ರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ. ಇದಕ್ಕೆ ಕಾರಣ ಆತ ಕನ್ನಡಿಗ ಎಂಬುದು.
ರಚಿನ್ ರವೀಂದ್ರ
ರಚಿನ್ ರವೀಂದ್ರ

ಬೆಂಗಳೂರು: ಪ್ರವಾಸಿ ನ್ಯೂಜಿಲ್ಯಾಂಡ್ ಮತ್ತು ಟೀಂ ಇಂಡಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಕಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ರಚಿನ್ ರವೀಂದ್ರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ. ಇದಕ್ಕೆ ಕಾರಣ ಆತ ಕನ್ನಡಿಗ ಎಂಬುದು.

ಕಾನ್ಪುರ ಟೆಸ್ಟ್ ನಲ್ಲಿ 22 ವರ್ಷದ ರಚಿನ್ ರವೀಂದ್ರ ಮೈದಾನಕ್ಕೆ ಇಳಿದಿದ್ದಾರೆ. ಆದರೆ ಟೀಂ ಇಂಡಿಯಾ ಪರ ಆಡಲಿಕಲ್ಲ. ಆತ ನ್ಯೂಜಿಲ್ಯಾಂಡ್ ತಂಡ ಆಟಗಾರ. ಇನ್ನು ವಿಶೇಷವೆಂದರೆ ರಚಿನ್ ಹೆಸರು. ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಹೆಸರನ್ನು ಪ್ರತಿನಿಧಿಸುವಂತಿದೆ. 'ರ' ರಾಹುಲ್ ದ್ರಾವಿಡ್. 'ಚಿನ್' ಸಚಿನ್ ತೆಂಡೂಲ್ಕರ್ ಆಗಿದೆ. 

ಇನ್ನು ಸೌತಾಂಪ್ಟನ್‌ನಲ್ಲಿ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದ್ದ ನ್ಯೂಜಿಲೆಂಡ್‌ ತಂಡದ ಭಾಗವಾಗಿ ರಚಿನ್‌ ರವೀಂದ್ರ ಕೂಡ ಇದ್ದರು.

ರಚಿನ್ ತಂದೆ ರವಿ ಕೃಷ್ಣಮೂರ್ತಿ ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿದ್ದು 1990ರ ದಶಕದಲ್ಲಿ ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ತೆರಳಿದ್ದು ಅಲ್ಲಿಯೇ ನೆಲೆಸಿದರು. ರವಿ ಕೃಷ್ಣಮೂರ್ತಿ ಅವರು ನ್ಯೂಜಿಲ್ಯಾಂಡ್ ಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟ್ ನಲ್ಲಿ ಮಾಜಿ ಟೀಂ ಇಂಡಿಯಾ ಆಟಗಾರ ಜಾವಗಲ್ ಶ್ರೀನಾಥ್ ಜೊತೆ ಆಡುತ್ತಿದ್ದರು.

ರವಿ ಕೃಷ್ಣಮೂರ್ತಿ ಅವರು ನ್ಯೂಜಿಲೆಂಡ್‌ನ 'ಹಟ್ ಹಾಕ್ಸ್ ಕ್ಲಬ್‌'ನ ಸಂಸ್ಥಾಪಕರು. ಈ ಕ್ಲಬ್‌ ಪ್ರತಿ ಬೇಸಿಗೆಯಲ್ಲಿ ನ್ಯೂಜಿಲೆಂಡ್‌ನ ಆಟಗಾರರನ್ನು ಭಾರತಕ್ಕೆ ಕರೆತರುತ್ತದೆ. 'ಹಟ್ ಹಾಕ್ಸ್' ತಂಡದೊಂದಿಗೆ 2011ರಿಂದಲೂ ರಚಿನ್‌ ರವೀಂದ್ರ ಭಾರತಕ್ಕೆ ಬರುತ್ತಿದ್ದು ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ಕ್ರಿಕೆಟ್‌ ಆಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com