ಟಿ20 ವಿಶ್ವಕಪ್: ಕೆಎಲ್ ರಾಹುಲ್, ರಿಷಬ್ ಪಂತ್ ರಿಂದ ಪಾಕಿಸ್ತಾನಕ್ಕೆ ದೊಡ್ಡ ಅಪಾಯ- ಮ್ಯಾಥ್ಯೂ ಹೇಡನ್

ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಕುರಿತಂತೆ ಆಸಿಸ್ ಕ್ರಿಕೆಟ್ ದೈತ್ಯ ಮ್ಯಾಥ್ಯೂ ಹೇಡನ್ ಮಾತನಾಡಿದ್ದು, ಕೆಎಲ್ ರಾಹುಲ್, ರಿಷಬ್ ಪಂತ್ ಅಪಾಯದ ಕುರಿತು ಮಾತನಾಡಿದ್ದಾರೆ.
ಕೆಎಲ್ ರಾಹುಲ್-ರಿಷಬ್ ಪಂತ್
ಕೆಎಲ್ ರಾಹುಲ್-ರಿಷಬ್ ಪಂತ್

ದುಬೈ: ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಕುರಿತಂತೆ ಆಸಿಸ್ ಕ್ರಿಕೆಟ್ ದೈತ್ಯ ಮ್ಯಾಥ್ಯೂ ಹೇಡನ್ ಮಾತನಾಡಿದ್ದು, ಕೆಎಲ್ ರಾಹುಲ್, ರಿಷಬ್ ಪಂತ್ ಅಪಾಯದ ಕುರಿತು ಮಾತನಾಡಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದ್ದು, ದುಬೈನಲ್ಲಿ ಭಾನುವಾರ (ಅಕ್ಟೋಬರ್ 24) ನಡೆಯಲಿರುವ ಈ ಪಂದ್ಯಕ್ಕೆ ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ ಈ ಕುತೂಹಲಕಾರಿ ಪಂದ್ಯದ ಕುರಿತು ಪಾಕಿಸ್ತಾನ ಬ್ಯಾಟಿಂಗ್ ಸಲಹೆಗಾರರಾಗಿ ಆಯ್ಕೆಯಾಗಿರುವ ಆಸಿಸ್ ಕ್ರಿಕೆಟ್ ದೈತ್ಯ ಮ್ಯಾಥ್ಯೂ ಹೇಡನ್ ಮಾತನಾಡಿದ್ದು, ಪಾಕಿಸ್ತಾನಕ್ಕೆ ಭಾರತದ ಕೆಎಲ್ ರಾಹುಲ್, ರಿಷಬ್ ಪಂತ್ ದೊಡ್ಡ ಅಪಾಯವಾಗಿ ಕಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಭಾರತದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಪಾಕಿಸ್ತಾನಕ್ಕೆ ಪ್ರಮುಖ ಸವಾಲಾಗಿ ಪರಿಣಮಿಸಲಿದ್ದಾರೆ. ಕೆ.ಎಲ್.ರಾಹುಲ್ ಅವರು ಪಾಕಿಸ್ತಾನಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಟಿ-20 ಕ್ರಿಕೆಟ್‌ನಲ್ಲಿ ಅವರ ಪ್ರಾಬಲ್ಯ ದೊಡ್ಡದಿದೆ. ನಗುಮೊಗದ ರಿಷಭ್ ಪಂತ್ ಸಹ ಸವಾಲನ್ನು ಒಡ್ಡಬಹುದು ಎಂದು ಹೇಡನ್ ಹೇಳಿದ್ದಾರೆ.

'ಭಾರತ ಮತ್ತು ಪಾಕ್ ನಂತಹ ದೊಡ್ಡ ಪಂದ್ಯದಲ್ಲಿ ತಪ್ಪುಗಳ ಅಂತರವು ತುಂಬಾ ಕಡಿಮೆ ಇರುತ್ತದೆ ಆದ್ದರಿಂದ ನಾಯಕತ್ವವು ಪಂದ್ಯದ ಫಲಿತಾಂಶಕ್ಕೆ ಪ್ರಮುಖವಾಗಿರುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ವೈಯಕ್ತಿಕ ಪ್ರದರ್ಶನಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದಾಗ ತಮ್ಮ ಐಪಿಎಲ್ ಫ್ರಾಂಚೈಸಿಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಎಂಎಸ್ ಧೋನಿ ಮತ್ತು ಇಯೋನ್ ಮಾರ್ಗನ್ ಅವರ ಉದಾಹರಣೆಗಳನ್ನು ಉಲ್ಲೇಖಿಸಿದ ಹೇಡನ್, ಅವರ ವೈಯಕ್ತಿಕ ಪ್ರದರ್ಶನಗಳು ಈ ಹಿಂದೆ ಅವರ ಅಂಕಿಅಂಶಗಳ ದಾಖಲೆಗಳಂತೆ ಉತ್ತಮವಾಗಿರಲಿಲ್ಲ. ಆದರೆ ಅವರು ತಮ್ಮ ತಂಡವನ್ನು ಮುನ್ನಡೆಸಿದ ರೀತಿ ಮತ್ತು ಯುಎಇ ಪರಿಸ್ಥಿತಿಗಳಲ್ಲಿ ಐಪಿಎಲ್ ಫೈನಲ್ ತಲುಪುವಲ್ಲಿ ತಮ್ಮ ತಂಡಗಳು ಪ್ರಮುಖ ಪಾತ್ರವಹಿಸಿವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com