ಟೀಂ ಇಂಡಿಯಾ ಈ ವೇಗಿ ವಿಶ್ವದ ಅತ್ಯುತ್ತಮ ಟಿ20 ಬೌಲರ್‌: ಪಾಕ್‌ ಮಾಜಿ ವೇಗಿ ಹೊಗಳಿದ್ದು ಯಾರನ್ನ ಗೊತ್ತ?

ಟಿ20 ವಿಶ್ವಕಪ್‌ 202ರಲ್ಲಿ ಸಾಂಪ್ರಾದಾಯಿಕ ಎದುರಾಳಿಗಳ ನಡುವೆ ನಾಳೆ ನಡೆಯಲಿರುವ ಪಂದ್ಯದ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳಲ್ಲಿ ತೀವ್ರ ಕಾತುರ ಮನೆ ಮಾಡಿದೆ.
ಮೊಹಮ್ಮದ್ ಅಮೀರ್
ಮೊಹಮ್ಮದ್ ಅಮೀರ್

ಇಸ್ಲಾಮಾಬಾದ್‌: ಟಿ20 ವಿಶ್ವಕಪ್‌ 202ರಲ್ಲಿ ಸಾಂಪ್ರಾದಾಯಿಕ ಎದುರಾಳಿಗಳ ನಡುವೆ ನಾಳೆ ನಡೆಯಲಿರುವ ಪಂದ್ಯದ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳಲ್ಲಿ ತೀವ್ರ ಕಾತುರ ಮನೆ ಮಾಡಿದೆ.

ಟೀಂ ಇಂಡಿಯಾ, ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದುಕೊಂಡಿದ್ದು, ಈ ಕ್ರಮದಲ್ಲಿ ಹೈ ವೋಲ್ಟೇಜ್ ಪಂದ್ಯದ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. 

ಟೀಂ ಇಂಡಿಯಾ ವಿರುದ್ಧ ಆಡಲಿರುವ ತನ್ನ ತಂಡವನ್ನು ಪಾಕಿಸ್ತಾನ ಪ್ರಕಟಿಸಿದೆ. ಆದರೆ, ವಿಶ್ವಕಪ್‌ನಲ್ಲಿ ಪಾಕಿಸ್ತಾನ ಈವರೆಗೆ ಭಾರತದ ವಿರುದ್ಧ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಈ ಬಾರಿ ಪಂದ್ಯ ಗೆದ್ದು ತನ್ನ ಘನತೆ ಉಳಿಸಿಕೊಳ್ಳಲು ಪಾಕಿಸ್ತಾನ ಬಯಸುತ್ತಿದೆ. ಆದರೆ, ಮತ್ತೊಮ್ಮೆ ದಾಯಾದಿ ದೇಶದ ತಂಡದ ಮೇಲೆ ವಿಜಯ  ಸಾಧಿಸಿ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಲು ಭಾರತ ಉತ್ಸುಕವಾಗಿದೆ.

ಆದರೆ, ಈ ಪಂದ್ಯದ ಹಿನ್ನಲೆಯಲ್ಲಿ ಭಾರತೀಯ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರನ್ನು ಪಾಕಿಸ್ತಾನದ ಮಾಜಿ ವೇಗಿ ಮಹಮ್ಮದ್‌ ಅಮೀರ್‌ ಪ್ರಶಂಸೆಯ ಮಳೆ ಹರಿಸಿದ್ದಾರೆ. ಬುಮ್ರಾ ಅವರನ್ನು ಪಾಕಿಸ್ತಾನದ ವೇಗದ ಬೌಲರ್‌ ಶಾಹೀನ್ ಅಫ್ರಿದಿಯೊಂದಿಗೆ ಹೋಲಿಸುವುದು ಅವಿವೇಕ ಎಂದು ಅಮೀರ್ ಹೇಳಿದ್ದಾರೆ.

ಬುಮ್ರಾಗಿರುವ ಅನುಭವ ಅಫ್ರಿದಿ ಅವರಿಗಿಲ್ಲ. ಶಾಹೀನ್ ಇನ್ನೂ ಕಲಿಯುವುದು ಬಹಳಷ್ಟು ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬುಮ್ರಾ ವಿಶ್ವದ ಅತ್ಯುತ್ತಮ ಟಿ20 ಬೌಲರ್ ಎಂದು ಕೊಂಡಾಡಿದ್ದಾರೆ. ವಿಶೇಷವಾಗಿ ಡೆತ್ ಓವರ್‌ ವಿಷಯಗಳಿಗೆ ಬಂದಾಗ. ಎದುರಾಳಿ ಬ್ಯಾಟ್ಸ್‌ಮನ್‌ ಗಳು ಬೆವರುವಂತೆ ಮಾಡುವುದು ಬುಮ್ರಾ ಅವರ ವಿಶೇಷ ಎಂದು ಅಮೀರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com