ಬಿಸಿಸಿಐನ ಆ ವ್ಯಕ್ತಿಗೆ 'ಬುದ್ದು' ಪ್ರಶಸ್ತಿ ನೀಡಬೇಕು; ಪಾಕ್ ಜೊತೆ ಟೀಂ ಇಂಡಿಯಾ ಆಡಲೇಬಾರದು: ಸುಬ್ರಮಣಿಯನ್ ಸ್ವಾಮಿ

ಭಯೋತ್ಪಾದಕ ದೇಶವಾಗಿರುವ ಪಾಕಿಸ್ತಾನದೊಂದಿಗೆ, ನಮ್ಮ ಟೀಮ್ ಇಂಡಿಯಾ ಕ್ರಿಕೆಟ್ ಆಡಬಾರದು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. 
ಭಾರತ-ಪಾಕಿಸ್ತಾನ
ಭಾರತ-ಪಾಕಿಸ್ತಾನ

ನವದೆಹಲಿ: ಭಯೋತ್ಪಾದಕ ದೇಶವಾಗಿರುವ ಪಾಕಿಸ್ತಾನದೊಂದಿಗೆ, ನಮ್ಮ ಟೀಮ್ ಇಂಡಿಯಾ ಕ್ರಿಕೆಟ್ ಆಡಬಾರದು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. 

ನಿತ್ಯ ಅಮಾಯಕರ ಮಾರಣ ಹೋಮ ನಡೆಸುವ ದುರಾಕ್ರಮಿಗಳಾಗಿರುವ ಪಾಕಿಸ್ತಾನದೊಂದಿಗೆ ನಾವು ಕ್ರಿಕೆಟ್‌ ಆಡಬಾರದು. ಬಿಸಿಸಿಐನಲ್ಲಿ ಈ ಸಂಬಂಧ ನಿರ್ಧಾರ ಕೈಗೊಂಡ ವ್ಯಕ್ತಿಗೆ 2021 ವರ್ಷದ "ಬುದ್ದು" ಪ್ರಶಸ್ತಿ ನೀಡಬೇಕು ಎಂದು ಸ್ವಾಮಿ ಟ್ವೀಟ್ ನಲ್ಲಿ ವ್ಯಂಗ್ಯವಾಡಿದ್ದಾರೆ.

ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಸೋತ ನಂತರ ಹಲವಾರು ರಾಜಕಾರಣಿಗಳು ಟ್ವೀಟ್ ಮಾಡಿದ್ದಾರೆ. "ಗೆಲುವು ಹಾಗೂ ಸೋಲು ಆಟದ ಭಾಗವಾಗಿದೆ.

ಮೈಕೊಡವಿ ಎದ್ದುನಿಂತಿ ನಿಂತು ವಿಶ್ವಕಪ್ ಗೆಲ್ಲಲು ಟೀಮ್ ಇಂಡಿಯಾಗೆ ಮುಂಬರುವ ಪಂದ್ಯಗಳಿಗೆ ಆಲ್‌ ದಿ ಬೆಸ್ಟ್‌ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್‌ ಮಾಡಿದ್ದಾರೆ.

ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಫಲಿತಾಂಶವನ್ನು ಹಿಮ್ಮೆಟ್ಟಿಸಲಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com