ಟಿ20 ವಿಶ್ವಕಪ್ ನಲ್ಲಿ ಭಾರತದ ಭವಿಷ್ಯ: ಪ್ರತಿ ಪಂದ್ಯ ಗೆಲ್ಲಲೇಬೇಕಾ?; ಸೋತರೆ ಏನಾಗಲಿದೆ? ಫೈನಲ್ ಗೆ ಹೋಗುತ್ತಾ ಟೀಂ ಇಂಡಿಯಾ?

ಪಾಕಿಸ್ತಾನದ ವಿರುದ್ಧದ ಐತಿಹಾಸಿಕ ಪಂದ್ಯ ಸೋಲು ಟೀಂ ಇಂಡಿಯಾ ತಂಡಕ್ಕೆ ಸಂಕಷ್ಟ ತಂದಿಟ್ಟಿದೆ. ನಿನ್ನೆಯ ಪಂದ್ಯ ಸೋಲಿನ ನಂತರ, ಟೂರ್ನಿಯ ಮುಂಬರುವ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ದುಬೈ: ಪಾಕಿಸ್ತಾನದ ವಿರುದ್ಧದ ಐತಿಹಾಸಿಕ ಪಂದ್ಯ ಸೋಲು ಟೀಂ ಇಂಡಿಯಾ ತಂಡಕ್ಕೆ ಸಂಕಷ್ಟ ತಂದಿಟ್ಟಿದೆ. ನಿನ್ನೆಯ ಪಂದ್ಯ ಸೋಲಿನ ನಂತರ, ಟೂರ್ನಿಯ ಮುಂಬರುವ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ನಮೀಬಿಯಾ, ಸ್ಕಾಟ್ ಲೆಂಡ್ ನೊಂದಿಗೆ ಗೆಲುವು ಸುಲಭ:
ಪಾಕಿಸ್ತಾನದ ಹೊರತಾಗಿಯೂ ಭಾರತ ತಂಡದ ಗುಂಪಿನಲ್ಲಿ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ನಮೀಬಿಯಾ ಮತ್ತು ಸ್ಕಾಟ್ ಲೆಂಡ್ ತಂಡಗಳಿವೆ. ಟೀಮ್ ಇಂಡಿಯಾ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ನಮೀಬಿಯಾ ಹಾಗೂ ಸ್ಟಾಟ್ ಲೆಂಡ್ ಟೀಮ್ ಗಳ ವಿರುದ್ಧ ಸುಲಭವಾಗಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚು. ಇದರೊಂದಿಗೆ ಈ ಮೂರು ತಂಡಗಳು ಎರಡೆರಡು ಅಂಕಗಳನ್ನು ಪಡೆಯುವುದು ಖಚಿತ.

ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಕಠಿಣ ಎದುರಾಳಿ:
ಆದರೆ ಅಫ್ಘಾನಿಸ್ತಾನದೊಂದಿಗಿನ ಸೆಣಸಾಟ ಸುಲಭವಲ್ಲ. ಯಾವುದೇ ಹಂತದಲ್ಲಿ ಭಾರತ, ನ್ಯೂಜಿಲೆಂಡ್, ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನ ಅಚ್ಚರಿಯ ಫಲಿತಾಂಶ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಅಫ್ಘಾನಿಸ್ತಾನದೊಂದಿಗಿನ ಪಂದ್ಯಗಳನ್ನು ಮೂರು ತಂಡಗಳು ಗೆಲುವು ಸಾಧಿಸಲಿವೆ ಅಂತಾ ಭಾವಿಸಿದರೆ, ಪಾಕಿಸ್ತಾನ 8 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲಿದೆ. ಇನ್ನೊಂದೆಡೆ ಭಾರತ ಹಾಗೂ ನ್ಯೂಜಿಲೆಂಡ್ 6-6 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಇರಲಿವೆ.

ಭಾರತ 2ನೇ ಸ್ಥಾನಕ್ಕೆ ಹೇಗೆ ಜಿಗಿಯಲಿದೆ?
ಭಾರತ ಸೆಮಿ ಫೈನಲ್ ಹಂತ ತಲುಪಬೇಕಾದರೆ ಬಲಿಷ್ಠ ನ್ಯೂಜಿಲೆಂಡ್ ತಂಡದ ವಿರುದ್ಧ ಗೆಲುವು ಸಾಧಿಸಿ 8 ಅಂಕ ಸಂಪಾದಿಸಬೇಕು. ಇನ್ನೊಂದೆಡೆ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯವೂ ಭಾರತದ ಪಾಲಿಗೆ ನಿರ್ಣಾಯಕವಾಗಲಿದೆ. ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಗೆದ್ದರೆ, ಭಾರತ 8 ಅಂಕಗಳೊಂದಿಗೆ 2ನೇ ಸ್ಥಾನ ಭದ್ರಪಡಿಸಿಕೊಳ್ಳಲಿದೆ.

ಒಂದು ವೇಳೆ ನ್ಯೂಜಿಲೆಂಡ್, ಪಾಕಿಸ್ತಾನ ತಂಡವನ್ನು ಸೋಲಿಸಿದರೆ ಮೂರು ತಂಡಗಳು 8 - 8 - 8 ಅಂಕಗಳನ್ನು ಹೊಂದಲಿವೆ. ಈ ಸನ್ನಿವೇಶದಲ್ಲಿ ಸೆಮಿಫೈನಲ್ ಗೆ ಆಯ್ಕೆಯಾಗುವ ತಂಡಗಳನ್ನು ರನ್ ಸರಾಸರಿ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದರಲ್ಲಿ ಯಾವ ತಂಡದ ಪ್ರದರ್ಶನ ಉತ್ತಮವಾಗಿರುತ್ತೆದೆಯೋ ಆ ತಂಡದ ಸೆಮಿಫೈನಲ್ ಗೆ ಏರಲಿವೆ.

ಸೆಮಿಫೈನಲ್ ನಲ್ಲಿ ಬಲಿಷ್ಠ ಇಂಗ್ಲೆಂಡ್ ಎದುರಾಳಿ?
ಇನ್ನು ಸೂಪರ್ 12ರ ಘಟ್ಟದಲ್ಲಿ ಭಾರತ 2ನೇ ಸ್ಥಾನ ಪಡೆದುಕೊಂಡರೆ, ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ಜೊತೆ ಸೆಣಸಾಟ ಮಾಡಬೇಕಿದೆ. ಇಂಥ ಪರಿಸ್ಥಿತಿಯಲ್ಲಿ ಭಾರತದ ಫೈನಲ್ ಹಾದಿ ಕಠಿಣವಾಗಲಿದೆ. ಏಕೆಂದರೆ ಐಸಿಸಿ ಟಿ-20 ಶ್ರೇಯಾಂಕದಲ್ಲಿ ಇಂಗ್ಲೆಂಡ್ ತಂಡ ಟಾಪ್ ಒನ್ ಟೀಮ್ ಆಗಿದೆ. ಹೀಗಾಗಿ, ಇಂಗ್ಲೆಂಡ್, ತನ್ನ ಗುಂಪಿನ ಎಲ್ಲ ಪಂದ್ಯಗಳನ್ನು ಗೆಲ್ಲುವ ಚಾನ್ಸಸ್ ಸಹ ಹೆಚ್ಚಿದೆ. ಆದ್ದರಿಂದ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ಮೊದಲ ಸ್ಥಾನ ಅಲಂಕರಿಸಿದರೆ, ಭಾರತ ಫೈನಲ್ ಹಾದಿ ಕಠಿಣವಾಗಲಿದೆ.

ಇನ್ನೊಂದೆಡೆ ಗ್ರೂಪ್ 1ರಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ಅಥವಾ ದಕ್ಷಿಣ ಆಫ್ರಿಕಾ ಎದುರಾದರೆ. ಭಾರತದ ಫೈನಲ್ ಹಾದಿ ಸುಗಮವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com