'ಓವರ್ ಸ್ಮಾರ್ಟ್ ಬೇಡ' ಲೈವ್ ಟಿವಿ ಶೋನಲ್ಲಿ ಶೋಯೆಬ್ ಅಖ್ತರ್ ಗೆ 'ಗೆಟ್ ಔಟ್' ಎಂದ ನಿರೂಪಕ; ವಿಡಿಯೋ ವೈರಲ್!
ಟೀಮ್ ಇಂಡಿಯಾ ವಿರುದ್ಧ ಗೆದ್ದ ಮೇಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಟಿವಿ ಶೋಗಳಲ್ಲಿ ಠಿಕಾಣಿ ಹೂಡಿದ್ದಾರೆ. ಲೈವ್ ಕಾರ್ಯಕ್ರಮಗಳಲ್ಲಿ ತಾವೇ ದೊಡ್ಡ ಸ್ಟಾರ್ ಗಳು ಅನ್ನೋ ಕೊಂಬುಗಳು ಅವರಿಗೆ ಬಂದ್ಬಿಟ್ಟಿವೆ. ಭಾರತದ ಕೊಹ್ಲಿ ಪಡೆ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
Published: 27th October 2021 03:38 PM | Last Updated: 27th October 2021 03:38 PM | A+A A-

ಶೋಯೆಬ್ ಅಖ್ತರ್
ಇಸ್ಲಾಮಾಬಾದ್: ಟೀಮ್ ಇಂಡಿಯಾ ವಿರುದ್ಧ ಗೆದ್ದ ಮೇಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಟಿವಿ ಶೋಗಳಲ್ಲಿ ಠಿಕಾಣಿ ಹೂಡಿದ್ದಾರೆ. ಲೈವ್ ಕಾರ್ಯಕ್ರಮಗಳಲ್ಲಿ ತಾವೇ ದೊಡ್ಡ ಸ್ಟಾರ್ ಗಳು ಅನ್ನೋ ಕೊಂಬುಗಳು ಅವರಿಗೆ ಬಂದ್ಬಿಟ್ಟಿವೆ. ಭಾರತದ ಕೊಹ್ಲಿ ಪಡೆ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಹೌದು., ಅಕ್ಟೋಬರ್ 24ರಂದು ಭಾರತ ಕ್ರಿಕೆಟ್ ತಂಡವನ್ನು ಬಾಬರ್ ನೇತೃತ್ವದ ಕ್ರಿಕೆಟ್ ತಂಡ ಹೀನಾಯವಾಗಿ ಸೋಲಿಸಿತು. ಭಾರತದ ಆ ಸೋಲನ್ನು ನಾಲ್ಕು ದಿನ ಕಳೆದ್ರೂ ಪಾಕಿಸ್ತಾನ ನ್ಯೂಸ್ ಗಳು ಸುದ್ದಿ ಮಾಡೋದನ್ನು ಬಿಡ್ತಿಲ್ಲ. ಹೀಗಾಗಿ, ಟಿ-20 ವಿಶ್ವಕಪ್ ಕುರಿತು ಚರ್ಚೆಗಳು ಎಗ್ಗಿಲ್ಲದೆ ಪಾಕ್ ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿವೆ.
ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್, ಪಾಕಿಸ್ತಾನದ ಖ್ಯಾತ ನ್ಯೂಸ್ ಚಾನೆಲ್ ಪಿಟಿವಿಯಲ್ಲಿ ಮಾಜಿ ಕ್ರಿಕೆಟಿಗರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ್ದರು. ಈ ಚರ್ಚೆಯಲ್ಲಿ ಶೋಯೆಬ್ ಅಖ್ತರ್ ಜೊತೆ ವಿವಿಯನ್ ರಿಚರ್ಡ್ಸ್, ಸನಾ ಮೀರ್ ಸೇರಿದಂತೆ ಅನೇಕ ಕ್ರಿಕೆಟಿಗರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿರೂಪಕ ಡಾ.ನೊಮಾನ್ ನಡೆಸಿಕೊಡುತ್ತಿದ್ದರು.
ಲೈವ್ ಕಾರ್ಯಕ್ರಮದಿಂದ ಶೋಯೆಬ್ ಅಖ್ತರ್ ಹೊರ ನಡೆದಿದ್ದರು. ಈ ವೇಳೆ ನೊಮನ್ ಅಖ್ತರ್ ರನ್ನು ತಡೆಯುವ ಪ್ರಯತ್ನ ಮಾಡದೆ ಕಾರ್ಯಕ್ರಮವನ್ನು ಮುನ್ನಡೆಸಿದರು.
ಇನ್ನು ತಾವು ಹೊರಬಂದಿರುವ ಕುರಿತು ಟ್ವೀಟರ್ ನಲ್ಲಿ ಸ್ಪಷ್ಟನೆ ನೀಡಿರುವ ಶೋಯಬ್ ಅಖ್ತರ್, ನಿರೂಪಕ ನೊಮನ್ ನಿಯಾಜ್ ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡು ಅಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Multiple clips are circulating on social media so I thought I shud clarify. pic.twitter.com/ob8cnbvf90
— Shoaib Akhtar (@shoaib100mph) October 26, 2021
ನಿಯಾಜ್ ಕಾರ್ಯಕ್ರಮದ ನೇರ ಪ್ರಸಾರದ ವೇಳೆ ಅಸಭ್ಯವಾಗಿ ವರ್ತಿಸಿದರು. ಜತಗೆ ನನ್ನನ್ನು ಕಾರ್ಯಕ್ರಮದಿಂದ ಹೊರಹೊಗುವಂತೆ ಸೂಚಿಸಿದರು. ಇದು ನನಗೆ ಬೇಸರ ತಂದಿತು. ಹೀಗಾಗಿ ಕಾರ್ಯಕ್ರಮದಿಂದ ಹೊರಬಂದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು ನಿಯಾಜ್ ಕೂಡಲೇ ಅಖ್ತರ್ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
Oh boy Fight between Shoaib Akhtar n Dr NN: pic.twitter.com/tEJvzo9NQy
— Hassan (@iamhassan9) October 26, 2021