ಕೇನ್ ವಿಲಿಯಮ್ಸನ್-ಕೊಹ್ಲಿ
ಕೇನ್ ವಿಲಿಯಮ್ಸನ್-ಕೊಹ್ಲಿ

T20 World Cup: ನ್ಯೂಜಿಲ್ಯಾಂಡ್ ವಿರುದ್ಧ ತತ್ತರಿಸಿದ ಟೀಂ ಇಂಡಿಯಾ, ಕಿವೀಸ್ ಗೆ 111 ರನ್ ಟಾರ್ಗೆಟ್!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ತತ್ತರಿಸಿದ್ದು ನಿಗದಿತ ಓವರ್ ನಲ್ಲಿ 110 ರನ್ ಪೇರಿಸಿದೆ. 
Published on

ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ತತ್ತರಿಸಿದ್ದು ನಿಗದಿತ ಓವರ್ ನಲ್ಲಿ 110 ರನ್ ಪೇರಿಸಿದೆ. 

ದುಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 110 ರನ್ ಪೇರಿಸಿದ್ದು ನ್ಯೂಜಿಲ್ಯಾಂಡ್ ಗೆ 111 ರನ್ ಗಳ ಸಾಧಾರಣ ಮೊತ್ತದ ಗುರಿ ನೀಡಿದೆ. 

ಅನುಭವಿ ಬ್ಯಾಟ್ಸ್ ಮನ್ ಗಳಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಮತ್ತೆ ಎಡವಿದ್ದಾರೆ. ರಾಹುಲ್ 18 ರನ್ ಗೆ ಔಟ್ ಆದರೆ ರೋಹಿತ್ ಶರ್ಮಾ 14 ರನ್ ಗಳಿಗೆ ಔಟಾದರು. ಇನ್ನು ಯುವ ಬ್ಯಾಟ್ಸ್ ಮನ್ ಇಶನ್ ಕಿಶನ್ ಕೇವಲ 4 ರನ್ ಗಳಿಗೆ ಔಟಾಗಿ ಪೆವಿಲಿಯನ್ ಸೇರಿದರು. 

ಪಾಕಿಸ್ತಾನ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡಿ ಅರ್ಧ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕೇವಲ 9 ರನ್ ಕಲೆ ಹಾಕಿದರು. ರಿಷಬ್ ಪಂತ್ 12 ರನ್ ಗಳಿಸಿದರೆ ಹಾರ್ದಿಕ್ ಪಾಂಡ್ಯ 23 ರನ್ ಬಾರಿಸಿದ್ದಾರೆ. ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾ ಅಜೇಯ 26 ರನ್ ಗಳಿಸಿದ್ದು ತಂಡ 100ರ ಗಡಿ ದಾಟಲು ಸಾಧ್ಯವಾಯಿತು. 

ನ್ಯೂಜಿಲ್ಯಾಂಡ ಪರ ಬೌಲಿಂಗ್ ನಲ್ಲಿ ಟ್ರೆಂಟ್ ಬೌಲ್ಟ್ 3, ಸೋಧಿ 2, ಟೀಮ್ ಸೌಥಿ ಮತ್ತು ಮಿಲನ್ ತಲಾ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com