ಧೋನಿ ವಿರುದ್ಧ ಹಿತಾಸಕ್ತಿ ಸಂಘರ್ಷದ ದೂರು
ಟಿ-20 ವಿಶ್ವಕಪ್ ಗಾಗಿ ಟೀಂ ಇಂಡಿಯಾದ ಮಾರ್ಗದರ್ಶಕರಾಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ನೇಮಕ ಮಾಡಿರುವುದರ ವಿರುದ್ಧ ಗುರುವಾರ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಗೆ ಹಿತಾಸಕ್ತಿ ಸಂಘರ್ಘ ದೂರು ದಾಖಲಾಗಿದೆ.
Published: 09th September 2021 05:26 PM | Last Updated: 09th September 2021 06:14 PM | A+A A-

ಮಹೇಂದ್ರ ಸಿಂಗ್ ಧೋನಿ
ನವದೆಹಲಿ: ಟಿ-20 ವಿಶ್ವಕಪ್ ಗಾಗಿ ಟೀಂ ಇಂಡಿಯಾದ ಮಾರ್ಗದರ್ಶಕರಾಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ನೇಮಕ ಮಾಡಿರುವುದರ ವಿರುದ್ಧ ಗುರುವಾರ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಗೆ ಹಿತಾಸಕ್ತಿ ಸಂಘರ್ಘ ದೂರು ದಾಖಲಾಗಿದೆ.
ಈ ಹಿಂದೆ ಆಟಗಾರರು ಹಾಗೂ ಆಡಳಿತಗಾರರ ವಿರುದ್ಧ ಸರಣಿ ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಿದ್ದ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಸದಸ್ಯ ಸಂಜೀವ್ ಗುಪ್ತಾ, ಅಪೆಕ್ಸ್ ಕೌನ್ಸಿಲ್ ಸದಸ್ಯರಿಗೆ ಪತ್ರ ಕಳುಹಿಸಿದ್ದು, ಧೋನಿ ನೇಮಕ ಹಿತಾಸಕ್ತಿ ಸಂಘರ್ಷ ಷರತ್ತಿನ ಉಲ್ಲಂಘನೆಯಾಗಿದೆ. ಇದರಡಿ ಒಬ್ಬರು ಎರಡು ಹುದ್ದೆಗಳನ್ನು ಹೊಂದುವಂತಿಲ್ಲ ಎಂದಿದ್ದಾರೆ.
ಧೋನಿ ಸದ್ಯ ಐಪಿಎಲ್ ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಪರಿಣಾಮಗಳನ್ನು ಪರಿಶೀಲಿಸಲು ಅಪೆಕ್ಸ್ ಕೌನ್ಸಿಲ್ ತನ್ನ ಕಾನೂನು ತಂಡವನ್ನು ಸಂಪರ್ಕಿಸಬೇಕಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿ ಅವರನ್ನು ಇದೀಗ ಟೀಂ ಇಂಡಿಯಾ ಮಾರ್ಗದರ್ಶಕರಾಗಿ ನೇಮಕ ಮಾಡಿರುವುದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.