ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯ ರದ್ದು: ಪರಿಹಾರ ನೀಡುವಂತೆ ಇಂಗ್ಲೆಂಡ್ ಐಸಿಸಿಗೆ ಮೊರೆ- ವಕ್ತಾರರು

ಭಾರತ- ಇಂಗ್ಲೆಂಡ್ ತಂಡಗಳ ನಡುವೆ ಸೆಪ್ಟೆಂಬರ್ 10 ರಂದು ಮ್ಯಾಂಚೆಸ್ಟರ್ ನಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಮಂಡಳಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೊರೆ ಹೋಗಿದೆ.
ಜೋ ರೂಟ್, ವಿರಾಟ್ ಕೊಹ್ಲಿ
ಜೋ ರೂಟ್, ವಿರಾಟ್ ಕೊಹ್ಲಿ

ಲಂಡನ್: ಭಾರತ- ಇಂಗ್ಲೆಂಡ್ ತಂಡಗಳ ನಡುವೆ ಸೆಪ್ಟೆಂಬರ್ 10 ರಂದು ಮ್ಯಾಂಚೆಸ್ಟರ್ ನಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಮಂಡಳಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೊರೆ ಹೋಗಿದೆ. ಸಂದಿಗ್ಧತೆಗೆ ಸಿಲುಕಿರುವ ಈ ವಿಷಯದಲ್ಲಿ ಯಾವುದಾದರೂ ಪರಿಹಾರ ನೀಡುವಂತೆ ಐಸಿಸಿಯನ್ನು ಕೋರಿದೆ.

5ನೇ ಪಂದ್ಯದೊಂದಿಗೆ  ಸರಣಿ ಫಲಿತಾಂಶದ ಬಗ್ಗೆ ಎರಡೂ ಮಂಡಳಿಗಳಲ್ಲಿ ಒಮ್ಮತ  ಸಾಧ್ಯವಾಗದ ಕಾರಣ  ಐಸಿಸಿ ವಿವಾದ ಪರಿಹಾರ ಸಮಿತಿಗೆ (ಡಿಆರ್‌ಸಿ) ಪತ್ರ ಬರೆಯಲಾಗಿದೆ ಎಂದು ಇಸಿಬಿಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.  

ಕೋವಿಡ್ -19 ಪ್ರಕರಣದಿಂದಾಗಿ  ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು  ಪ್ರಕಟಿಸಿದರೆ ತಮಗೆ  40 ಮಿಲಿಯನ್ ಪೌಂಡ್‌ ನಷ್ಟವಾಗಲಿದೆ. ಇಂತಹ  ಸಂದರ್ಭಗಳಲ್ಲಿ ಸರಿಯಾದ  ಪರಿಹಾರ ಕಂಡುಕೊಂಡರೆ ವಿಮಾ ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ ಎಂದು ಇಂಗ್ಲೀಷ್‌  ಮಂಡಳಿ  ಹೇಳಿದೆ.

ಆದರೆ, ಈ ಸಮಸ್ಯೆಯನ್ನು ಪರಿಹರಿಸಲು ಐಸಿಸಿ ಮುಂದೆ ಎರಡು ಪರ್ಯಾಯಗಳಿವೆ. ಒಂದು ವೇಳೆ ಐದನೇ ಟೆಸ್ಟ್ ರದ್ದಾದರೆ (ಮರು ವೇಳಾಪಟ್ಟಿ ನಿಗದಿಪಡಿಸದೆ), ಭಾರತ ಸರಣಿಯನ್ನು 2-1ರಿಂದ ಗೆಲ್ಲುತ್ತದೆ. ಆಗ ಇದನ್ನು ನಾಲ್ಕು ಟೆಸ್ಟ್‌ಗಳ ಸರಣಿ ಎಂದು ಪರಿಗಣಿಸಬೇಕು. ಆದರೆ, ಈ ಪ್ರಸ್ತಾಪವನ್ನು ಇಸಿಬಿ ಒಪ್ಪುಕೊಳ್ಳದಿರಬಹುದು. 

ಎರಡನೆಯದಾಗಿ, ಟೀಮ್ ಇಂಡಿಯಾವೇ ಈ ಪಂದ್ಯವನ್ನು ಆಡಲು ಹಿಂಜರಿದರೆ  ಇಂಗ್ಲೆಂಡ್ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇಂಗ್ಲೆಂಡ್ ತಂಡ ಪಂದ್ಯ ಆಡಲು ಸಿದ್ಧವಾಗಿದ್ದರೂ ಕೊರೊನಾ ಕಾರಣ ಭಾರತ ಒಪ್ಪದಿದ್ದಾಗ ಇಂಗ್ಲೆಂಡ್ ಪರವಾಗಿ ಫಲಿತಾಂಶ ಘೋಷಿಸುವ ಅವಕಾಶವೂ  ಇದೆ. ಇದು ಸಂಭವಿಸಿದಲ್ಲಿ, ಸರಣಿ  2-2ರಲ್ಲಿ ಸಮನಾಗಿರುತ್ತದೆ.  ಆಗ ಇಸಿಬಿ  ವಿಮೆಯನ್ನು ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com