ಮುಂಬೈ ಪರ ಆಡುವ ಮೂಲಕ ಭಾರತ, ವಿಶ್ವದ ಅನೇಕ ಅಭಿಮಾನಿಗಳನ್ನು ಗಳಿಸಿದ್ದೇನೆ; ಮಾಲಿಂಗ

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಫ್ರಾಂಚೈಸ್ ಮುಂಬೈ ಇಂಡಿಯನ್ಸ್ ಪರ ಆಡುವ ಮೂಲಕ ಭಾರತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದೇನೆ ಎಂದು ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಹೇಳಿದ್ದಾರೆ.
ಲಸಿತ್ ಮಾಲಿಂಗ
ಲಸಿತ್ ಮಾಲಿಂಗ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಫ್ರಾಂಚೈಸ್ ಮುಂಬೈ ಇಂಡಿಯನ್ಸ್ ಪರ ಆಡುವ ಮೂಲಕ ಭಾರತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದೇನೆ ಎಂದು ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಹೇಳಿದ್ದಾರೆ.

ಇತ್ತೀಚೆಗಷ್ಟೆ ಮಾಲಿಂಗ ಎಲ್ಲಾ ರೀತಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದರು. ಮುಂಬೈ ಇಂಡಿಯನ್ಸ್ ನೊಂದಿಗಿನ ಮಾಲಿಂಗನ ಸಹಭಾಗಿತ್ವವು ಸ್ಮರಣೀಯವಾಗಿ ಕೊನೆಗೊಂಡಿತು. 2019ರಲ್ಲಿ ಕೊನೆಯ ಬಾಲ್ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ದಾಖಲೆಯ ನಾಲ್ಕನೇ ಐಪಿಎಲ್ ಟ್ರೋಫಿಯನ್ನು ಗಳಿಸಿತು.

'ಮುಂಬೈ ಇಂಡಿಯನ್ಸ್ ಪರ ಆಡಿದಾಗ, ನಾನು ಭಾರತ ಮತ್ತು ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದೆ. ಎಲ್ಲಾ ಯುವ ಕ್ರಿಕೆಟಿಗರಿಗೆ ಒಂದು ಕನಸು ಇರುತ್ತದೆ ಎಂದು ನಾನು ಭಾವಿಸುತ್ತೇನೆ. ವಿಶೇಷವಾಗಿ ಐಪಿಎಲ್ ಮತ್ತು ರಾಷ್ಟ್ರೀಯ ತಂಡದಲ್ಲಿ ಆಡಲು. ಅತ್ಯುತ್ತಮ ಬೆಂಬಲ ಸಿಬ್ಬಂದಿಯನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ಜೊತೆಗಿನ ನನ್ನ ಅನುಭವವನ್ನು ಅದಕ್ಕಾಗಿಯೇ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಜೊತೆಗೆ ನಾನು ಐಪಿಎಲ್ ತಂಡಕ್ಕೆ ಹೇಗೆ ಪ್ರವೇಶಿಸಿದೆ ಎಂಬುದನ್ನು ವಿವರಿಸಲು ಬಯಸುತ್ತೇನೆ ಎಂದು ಮುಂಬೈ ಇಂಡಿಯನ್ಸ್‌ನ ಅಧಿಕೃತ ವೆಬ್‌ಸೈಟ್ ಮಾಲಿಂಗರನ್ನು ಉಲ್ಲೇಖಿಸಿದೆ.

'2008ರ ಐಪಿಎಲ್ ನಲ್ಲಿ ನನ್ನ ಹೆಸರನ್ನು ಹರಾಜಿಗೆ ಹಾಕಲು ನನಗೆ ಅವಕಾಶ ಸಿಕ್ಕಿತು. ಆದಾದ ನಂತರ, ನನ್ನ ಮ್ಯಾನೇಜರ್‌ನಿಂದ ನನಗೆ ಕರೆ ಬಂದಿತು. ಆ ವರ್ಷ ಮುಂಬೈ ಇಂಡಿಯನ್ಸ್‌ನೊಂದಿಗೆ ಆಡಲು ನನಗೆ ಅವಕಾಶ ಸಿಕ್ಕಿರುವುದಾಗಿ ಹೇಳಿದರು. ಇನ್ನು ನೀವು ಚಿಂತೆ ಮಾಡಬೇಡಿ. ಕಾರಣ ಇನ್ನು ಇಬ್ಬರು ಶ್ರೀಲಂಕಾ ಕ್ರಿಕೆಟಿಗರು ಅಲ್ಲಿ ಇದ್ದರು. ಇದೇ ವೇಳೆ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅಂತ ಒಳ್ಳೆಯ ಮಾಲೀಕರನ್ನು ಸಿಕ್ಕಿದ್ದಾರೆ ಎಂದು ಹೇಳಿದರು. 

'ಮ್ಯಾನೇಜರ್ ತಂಡದ ಸಹಾಯಕ ಸಿಬ್ಬಂದಿಯ ಬಗ್ಗೆ ಮತ್ತು ಆ ಕಾಲದ ಅತ್ಯಂತ ಅನುಭವಿ ಆಟಗಾರರನ್ನು ಹೊಂದಿರುವ ತಂಡದ ಬಗ್ಗೆ ಉಲ್ಲೇಖಿಸಿದರು. ಆಗ ನನಗೆ ಕೇವಲ 3.5 ವರ್ಷಗಳ ಅಂತಾರಾಷ್ಟ್ರೀಯ ಅನುಭವವಿತ್ತು. ನಾನು ಅಲ್ಲಿಗೆ ಹೋಗಿ ಆಡಲು ಸ್ವಲ್ಪ ಅನುಭವ ಪಡೆದಿದ್ದೇನೆ ಎಂದು ನನಗೆ ಅನಿಸಿತು. 2008ರಲ್ಲಿ ನಾನು ನಿಜವಾಗಿಯೂ ದುರಾದೃಷ್ಟವಂತ. ಮೊದಲು ನನಗೆ ಮೊಣಕಾಲಿನ ಗಾಯವಾಯಿತು. ಇದರಿಂದ ನಾನು ಐಪಿಎಲ್ ತಪ್ಪಿಸಿಕೊಂಡೆ. ಜೊತೆಗೆ ಶ್ರೀಲಂಕಾದ ವಾರ್ಷಿಕ ಒಪ್ಪಂದವನ್ನು ಕಳೆದುಕೊಂಡೆ ಎಂದರು. 

'2009ರಲ್ಲಿ ಒಂದೂವರೆ ವರ್ಷಗಳ ನಂತರ, ವೈದ್ಯರ ಸಲಹೆಯಂತೆ ಕ್ರಿಕೆಟ್ ಪ್ರಯಾಣವನ್ನು ಮುಂದುವರಿಸಲು ನಾನು ಚುಟುಕು ಆಟಗಳನ್ನು ಆರಂಭಿಸಬೇಕಿತ್ತು. ಇದರರ್ಥ ನಾನು ಟಿ20 ಪಂದ್ಯಗಳನ್ನು ಆಡಬೇಕಿತ್ತು. ಆದರೆ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ಇರಲಿಲ್ಲ. ಕೊನೆಗೆ ನನಗೆ ಒಂದೇ ಒಂದು ಆಯ್ಕೆ ಇತ್ತು. ಅದು ದಕ್ಷಿಣ ಆಫ್ರಿಕಾಗೆ ಹೋಗಿ ಐಪಿಎಲ್‌ನಲ್ಲಿ ಆಡಲು. ನಾನು ಇದನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ವಿವರಿಸಿದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು. ನಾನು ಮುಂಬೈ ತಂಡವನ್ನು ಸೇರಿಕೊಳ್ಳಲು ಆಫ್ರಿಕಾಗೆ ತೆರಳಿದೆ ಎಂದರು. 

ಶ್ರೀಲಂಕಾದ 2014 ಟಿ20 ವಿಶ್ವಕಪ್ ವಿಜೇತ ನಾಯಕ ಲಸಿತ್ ಮಾಲಿಂಗ ಮಂಗಳವಾರ ಎಲ್ಲಾ ಪ್ರಕಾರದ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.

ಜುಲೈ 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಾಲಿಂಗ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. ಟೆಸ್ಟ್ ಗೆ ಪದಾರ್ಪಣೆ ಮಾಡಿದ 16 ದಿನಗಳ ನಂತರ, ಮಾಲಿಂಗ ಏಕದಿನ ಕ್ರಿಕೆಟ್ ನಲ್ಲಿ ಮೊದಲ ಪಂದ್ಯವನ್ನು ಆಡಿದರು.

ಟೋ-ಕ್ರಶಿಂಗ್ ಯಾರ್ಕರ್‌ಗಳಿಗೆ ಹೆಸರುವಾಸಿಯಾದ ಮಾಲಿಂಗ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 4 ಬಾರಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದಿದ್ದಾರೆ. ಕಡಿಮೆ ಅವಧಿಯಲ್ಲಿ 107 ವಿಕೆಟ್ ಪಡೆದ ದಾಖಲೆಯನ್ನು ಮಾಡಿದರು. ಜೂನ್ 2006ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಯಲ್ಲಿ ಪಾದಾರ್ಪಣೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com