ಆಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿ ಪ್ರಸಾರಕ್ಕೆ ತಾಲಿಬಾನ್ ನಿಷೇಧ!

ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಇದೀಗ ತನ್ನ ಆಡಳಿತದ ಮೂಲಕ ನಿತ್ಯವೂ ಸುದ್ದಿಯಾಗುತ್ತಿದ್ದು, ಈ ಹಿಂದೆ ಮಹಿಳಾ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ್ದ ತಾಲಿಬಾನ್ ಇದೀಗ ಆಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಗೆ ನಿಷೇಧ ಹೇರಿದೆ.
ಆಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಗೆ ನಿಷೇಧ
ಆಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಗೆ ನಿಷೇಧ

ಕಾಬೂಲ್: ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಇದೀಗ ತನ್ನ ಆಡಳಿತದ ಮೂಲಕ ನಿತ್ಯವೂ ಸುದ್ದಿಯಾಗುತ್ತಿದ್ದು, ಈ ಹಿಂದೆ ಮಹಿಳಾ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ್ದ ತಾಲಿಬಾನ್ ಇದೀಗ ಆಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಗೆ ನಿಷೇಧ ಹೇರಿದೆ.

ಹೌದು..  ಈ ಹಿಂದೆ ಮಹಿಳಾ ಕ್ರಿಕೆಟ್​ ಅನ್ನು ನಿಷೇಧಿಸಿ ಸುದ್ದಿಯಲ್ಲಿದ್ದ ತಾಲಿಬಾನಿಗಳು ಈ ಬಾರಿ ಅಫ್ಘಾನಿಸ್ತಾನದಲ್ಲಿ ಐಪಿಎಲ್​ ಪ್ರಸಾರ ಮಾಡಕೂಡದು ಎಂದು ಆದೇಶ ಹೊರಡಿಸಿದ್ದಾರೆ. ಐಪಿಎಲ್​ ಇಸ್ಲಾಂ ವಿರೋಧಿಯಾಗಿದ್ದು, ಐಪಿಎಲ್​ ಟೂರ್ನಿ ವೇಳೆ ತುಂಡುಡುಗೆಯಲ್ಲಿ ಮಹಿಳೆಯರು ನೃತ್ಯ ಮಾಡುತ್ತಾರೆ. ಅಲ್ಲದೆ ಐಪಿಎಲ್​ ವೇಳೆ ಕ್ರೀಡಾಂಗಣದಲ್ಲಿ ತುಂಡುಡುಗೆಯಲ್ಲಿ ಮತ್ತು ಇಸ್ಲಾಂ ಕಾನೂನಿಗೆ ವಿರುದ್ಧವಾಗಿ ಮಹಿಳೆಯರು ಕಾಣಿಸಿಕೊಳ್ಳುತ್ತಾರೆ. ಇದು ಇಸ್ಲಾಂಗೆ ವಿರುದ್ದವಾಗಿದ್ದು, ಹಾಗಾಗಿ ಅಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಯ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ ಎಂದು ಮಾಜಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಧ್ಯಮ ವ್ಯವಸ್ಥಾಪಕ ಮತ್ತು ಪತ್ರಕರ್ತ, ಎಂ. ಇಬ್ರಾಹಿಂ ಮೊಮಾಂಡ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಅಫ್ಘಾನಿಸ್ತಾನ ಆಟಗಾರರಾದ ಮುಜೀಬ್​ ಉರ್ ರೆಹಮಾನ್, ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಸ್ಥಾನ ಪಡೆದಿದ್ದು, ಇವರ ಆಟವನ್ನು ವೀಕ್ಷಿಸಲು ಈಗ ಅಫ್ಘಾನಿಸ್ತಾನ್​ ಕ್ರಿಕೆಟ್ ಪ್ರೇಮಿಗಳಿಗೆ ಭಾಗ್ಯವಿಲ್ಲದಂತಾಗಿದೆ.

ಈ ಹಿಂದೆ ಸಿನಿಮಾ ಹಾಗೂ ಇನ್ನಿತರ ಮನರಂಜನೆಗಳಿಗೆ ನಿಷೇಧ ಹೇರಿದ್ದ ತಾಲಿಬಾನಿಗಳು, ಇದೀಗ ಐಪಿಎಲ್ ಟೂರ್ನಿ​ಗೂ ನಿಷೇಧ ಹೇರುವ ಮೂಲಕ ಅಫ್ಘಾನ್ ಕ್ರಿಕೆಟ್​ ಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡಿದ್ದಾರೆ. ಅತ್ತ ಅಫ್ಘಾನ್​ ಮಹಿಳಾ ತಂಡಕ್ಕೆ ನಿಷೇಧ ಹೇರಿದ್ದ ಬೆನ್ನಲ್ಲೇ ಆಸ್ಟ್ರೇಲಿಯಾ ಅಫ್ಘಾನಿಸ್ತಾನ್​ ತಂಡದ ಜೊತೆ ಸರಣಿ ಆಡುವುದಿಲ್ಲ ಎಂದು ತಿಳಿಸಿತ್ತು. ಈ ಮೂಲಕ ಅಫ್ಘಾನ್ ಮಹಿಳಾ ಸ್ವಾತಂತ್ರ್ಯ ಹರಣದ ವಿರುದ್ದ ಪರೋಕ್ಷವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕಿಡಿಕಾರಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com