ಪಾಕ್ ಆತಿಥ್ಯ ವಹಿಸುವ ಸರಣಿಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸುವುದಿಲ್ಲ: ಪಿಸಿಬಿ

ಪಾಕಿಸ್ತಾನ ಆತಿಥ್ಯ ವಹಿಸುವ ಸರಣಿಗಳನ್ನು ಇನ್ನು ಮುಂದೆ ತಟಸ್ಥ ಸ್ಥಳಗಳಲ್ಲಿ ನಡೆಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 
ಪಿಸಿಬಿ
ಪಿಸಿಬಿ

ಇಸ್ಲಾಮಾಬಾದ್‌: ಪಾಕಿಸ್ತಾನ ಆತಿಥ್ಯ ವಹಿಸುವ ಸರಣಿಗಳನ್ನು ಇನ್ನು ಮುಂದೆ ತಟಸ್ಥ ಸ್ಥಳಗಳಲ್ಲಿ ನಡೆಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 

ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ತಮ್ಮ ದೇಶ ತುಂಬಾ ಸುರಕ್ಷಿತವಾಗಿದೆ ಎಂದು ಪಿಸಿಬಿ  ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  

2005ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸಕ್ಕೆ ಆಗಮಿಸಿದ ನ್ಯೂಜಿಲೆಂಡ್‌ ಭದ್ರತಾ ಕಾರಣಗಳಿಗಾಗಿ ಒಂದೂ ಪಂದ್ಯ ಆಡದೆ ಸರಣಿ ರದ್ದುಪಡಿಸಿಕೊಂಡಿತ್ತು

ಅದೇ ರೀತಿಯಲ್ಲಿ, ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ನ ಹಾದಿಯನ್ನೇ ಅನುಸರಿಸಿತು. ಪಾಕಿಸ್ತಾನದೊಂದಿಗೆ ಸರಣಿಯನ್ನು ರದ್ದುಗೊಳಿಸಿಕೊಂಡಿರುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಘೋಷಿಸಿದೆ. 

2009ರಲ್ಲಿ ಶ್ರೀಲಂಕಾ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಎಲ್ಲ ದೇಶಗಳ ಕ್ರಿಕೆಟ್ ತಂಡಗಳು ಪಾಕಿಸ್ತಾನ ಪ್ರವಾಸ ಮಾಡಲು ಹಿಂಜರಿಯುತ್ತಿವೆ. ಇದರಿಂದ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸರಣಿಗಳನ್ನು ತಟಸ್ಥ  ಸ್ಥಳವಾಗಿ ಯುಎಇಯಲ್ಲಿ ಪಿಸಿಬಿ ನಿರ್ವಹಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com