ಐಪಿಎಲ್ 2023 ಹರಾಜು: ಕನ್ನಡಿಗ ಮನೋಜ್ ಬಾಂಡಗ ಸೇರಿ ಆರ್ ಸಿಬಿ ಖರೀದಿಸಿದ ಆಟಗಾರರು

ಐಪಿಎಲ್ 2023ರ ಹರಾಜಿನಲ್ಲಿ ಕನ್ನಡಿಗ ಮನೋಜ್ ಬಾಂಡಗೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಲಕ್ಷ ರೂ.ಗೆ ಖರೀದಿಸಿದೆ. ಇದರೊಂದಿಗೆ ಆರ್ ಸಿಬಿಯಲ್ಲಿ ಕನ್ನಡಿಗರು ಇಲ್ಲ ಎಂಬ ಕೊರಗು ನೀಗಿದಂತಾಗಿದೆ.
ಮನೋಜ್ ಬಾಂಡಗ
ಮನೋಜ್ ಬಾಂಡಗ
Updated on

ಬೆಂಗಳೂರು: ಐಪಿಎಲ್ 2023ರ ಹರಾಜಿನಲ್ಲಿ ಕನ್ನಡಿಗ ಮನೋಜ್ ಬಾಂಡಗೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಲಕ್ಷ ರೂ.ಗೆ ಖರೀದಿಸಿದೆ. ಇದರೊಂದಿಗೆ ಆರ್ ಸಿಬಿಯಲ್ಲಿ ಕನ್ನಡಿಗರು ಇಲ್ಲ ಎಂಬ ಕೊರಗು ನೀಗಿದಂತಾಗಿದೆ.

ರಾಯಚೂರು ಜಿಲ್ಲೆ ಸಿಂಧನೂರಿನ ಮನೋಜ್ ಬಾಂಡಗೆ ಆಲ್ ರೌಂಡರ್ ಆಗಿದ್ದು, ಇದೀಗ ಅವರ ಆಯ್ಕೆ ಕುಟುಂಬ ಸದಸ್ಯರು, ಅಭಿಮಾನಿಗಳು, ಕ್ರಿಕೆಟ್ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ. ಉಳಿದಂತೆ ರೀಸ್ ಟೋಪ್ಲಿ ( 1.9 ಕೋಟಿ), ಹಿಮಾಂಶು ಶರ್ಮಾ ( 20 ಲಕ್ಷ), ವಿಲ್ ಜಾಕ್ಸ್ ( 3.2 ಕೋಟಿ) ರಾಜನ್ ಕುಮಾರ್ ( 70 ಲಕ್ಷ) ಅವಿನಾಶ್ ಸಿಂಗ್ ( 60 ಲಕ್ಷ) ಸೋನು ಯಾದವ್ ( 20 ಲಕ್ಷ)  ಆರ್ ಸಿಬಿ ಪಾಲಾಗಿದ್ದಾರೆ.

2023 ಆರ್ ಸಿಬಿ ತಂಡ ಇಂತಿದೆ: ಫಾಫ್ ಡು ಪ್ಲೆಸಿಸ್ (ನಾಯಕ) ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ವಿಲ್ ಜಾಕ್ಸ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com