5ನೇ ಟೆಸ್ಟ್: ಸಿರಾಜ್, ಬುಮ್ರಾ ಮಾರಕ ಬೌಲಿಂಗ್ ದಾಳಿ; 284 ರನ್ ಗಳಿಗೆ ಇಂಗ್ಲೆಂಡ್ ಆಲೌಟ್, 132 ರನ್ ಹಿನ್ನಡೆ!

ಪ್ರವಾಸಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 284 ರನ್ ಗಳಿಗೆ ಆಲೌಟ್ ಆಗಿದ್ದು 132 ರನ್ ಗಳ ಹಿನ್ನಡೆ ಅನುಭವಿಸಿದೆ. 
ಟೀಂ ಇಂಡಿಯಾ ತಂಡ
ಟೀಂ ಇಂಡಿಯಾ ತಂಡ

ಬರ್ಮಿಂಗ್ಹ್ಯಾಮ್: ಪ್ರವಾಸಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 284 ರನ್ ಗಳಿಗೆ ಆಲೌಟ್ ಆಗಿದ್ದು 132 ರನ್ ಗಳ ಹಿನ್ನಡೆ ಅನುಭವಿಸಿದೆ. 

ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 416 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ್ದ ಇಂಗ್ಲೆಂಡ್ ಓಟಕ್ಕೆ ಮೊಹಮ್ಮದ್ ಸಿರಾಜ್, ವೇಗಿ ಜಸ್ ಪ್ರೀತ್ ಬುಮ್ರಾ ಬ್ರೇಕ್ ಹಾಕಿದ್ದರು. ಪರಿಣಾಮ ಇಂಗ್ಲೆಂಡ್ 284 ರನ್ ಗಳಿಗೆ ಆಲೌಟ್ ಆಗಿದೆ.

ಇಂಗ್ಲೆಂಡ್ ಪರ ಜಾನಿ ಬೈರ್ಸ್ಟೋವ್ 106 ರನ್ ಗಳಿಸಿದ್ದರೆ ಬೆನ್ ಸ್ಟೋಕ್ಸ್ 25, ಸ್ಯಾಮ್ ಬಿಲ್ಲಿಂಗ್ಸ್ 36 ಹಾಗೂ ಮ್ಯಾಥ್ಯೂ ಪೋಟ್ಸ್ 19 ರನ್ ಗಳಿಸಿದ್ದಾರೆ.

ಟೀಂ ಇಂಡಿಯಾ ಪರ ರಿಷಬ್ ಪಂತ್ 146 ರನ್, ರವೀಂದ್ರ ಜಡೇಜಾ 104, ಮೊಹಮ್ಮದ್ ಶಮಿ 16 ಹಾಗೂ ಜಸ್ ಪ್ರೀತ್ ಬುಮ್ರಾ ಅಜೇಯ 31 ರನ್ ಗಳಿಸಿದ್ದಾರೆ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com