“ಐ ಲವ್ ವಿರಾಟ್”: ನಿವೃತ್ತಿಯ ನಂತರ ಕೊಹ್ಲಿ ಸಂದೇಶಕ್ಕೆ ಬೆನ್ ಸ್ಟೋಕ್ಸ್ ಪ್ರತಿಕ್ರಿಯೆ

ಏಕದಿನ ಕ್ರಿಕೆಟ್ ಗೆ ವಿದಾಯ ಹೇಳುತ್ತಿರುವುದಾಗಿ ಸೋಮವಾರ ಘೋಷಿಸಿದ ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ವಿರಾಟ್ ಕೊಹ್ಲಿಯನ್ನು ಪ್ರೀತಿಸುವುದಾಗಿ ಹೇಳಿದ್ದಾರೆ. 
ವಿರಾಟ್ - ಬೆನ್ ಸ್ಟೋಕ್ಸ್
ವಿರಾಟ್ - ಬೆನ್ ಸ್ಟೋಕ್ಸ್

ಲಂಡನ್: ಏಕದಿನ ಕ್ರಿಕೆಟ್ ಗೆ ವಿದಾಯ ಹೇಳುತ್ತಿರುವುದಾಗಿ ಸೋಮವಾರ ಘೋಷಿಸಿದ ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ವಿರಾಟ್ ಕೊಹ್ಲಿಯನ್ನು ಪ್ರೀತಿಸುವುದಾಗಿ ಹೇಳಿದ್ದಾರೆ. 

ಬೆನ್ ಸ್ಟೋಕ್ಸ್ ಅವರು ನಿವೃತ್ತಿ ಘೋಷಿಸಿದ ನಂತರ ವಿರಾಟ್ ಕೊಹ್ಲಿ ಸ್ಟಾರ್ ಆಲ್‌ರೌಂಡರ್‌ಗಾಗಿ ವಿಶೇಷ ಸಂದೇಶವನ್ನು ಪೋಸ್ಟ್ ಮಾಡಿದ್ದರು. ಸ್ಟೋಕ್ಸ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಕೊಹ್ಲಿ “ನಾನು ಆಡಿದ ಅತ್ಯಂತ ಸ್ಪರ್ಧಾತ್ಮಕ ಆಟಗಾರರು ನೀವು. ಗೌರವವಿದೆ,” ಎಂದು ಕೊಹ್ಲಿ ಕಾಮೆಂಟ್ ಮಾಡಿದ್ದಾರೆ. ಇದೀಗ ಕೊಹ್ಲಿ ಹೊಗಳಿಕೆಗೆ ಸ್ಟೋಕ್ಸ್ ಪ್ರತಿಕ್ರಿಯಿಸಿದ್ದಾರೆ.

“ನಾನು ವಿರಾಟ್ ಅನ್ನು ಪ್ರೀತಿಸುತ್ತೇನೆ. ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಆಟವನ್ನು ಆಡಿದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ ಕೆಳಗಿಳಿಯಲಿದ್ದಾರೆ. ಅವರು ಅಸಾಧಾರಣ ಆಟಗಾರ ಮತ್ತು ನಾನು ಅವರಂತವರ ವಿರುದ್ಧ ಆಡಿರುವುದನ್ನ ಸಂಪೂರ್ಣವಾಗಿ ಪ್ರೀತಿಸುತ್ತೇನೆ. ಆಟಕ್ಕೆ ಕೊಡುವ ಅವರ ಶಕ್ತಿ ಮತ್ತು ಬದ್ಧತೆಯನ್ನು ನಾನು ಅವರ ವಿರುದ್ಧ ಆಡಲು ಪ್ರಾರಂಭಿಸುವ ಮೊದಲೇ ಮೆಚ್ಚಿದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

50-ಓವರ್ ಫಾರ್ಮ್ಯಾಟ್‌ನಿಂದ ನಿವೃತ್ತಿ ಘೋಷಿಸಿ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದ ಸ್ಟೋಕ್ಸ್, ಎಲ್ಲಾ ಮೂರು ಸ್ವರೂಪದ ಆಟಗಳನ್ನು ಆಡಲು ನಾನು ಈಗ ಸಮರ್ಥನಲ್ಲ ಎಂದು ಹೇಳಿದ್ದರು. ಇಂಗ್ಲೆಂಡಿನ ಟೆಸ್ಟ್ ನಾಯಕನಾಗಿ ನೇಮಕಗೊಂಡ ಕೆಲವು ತಿಂಗಳ ನಂತರ ಸ್ಟೋಕ್ಸ್ ಈ ನಿರ್ಧಾರವನ್ನು ಪ್ರಕಟಿಸಿದರು.  ಸ್ಟೋಕ್ಸ್ ಇದುವರೆಗೆ ಇಂಗ್ಲೆಂಡ್ ಪರ 104 ODIಗಳನ್ನು ಆಡಿದ್ದಾರೆ, ಮೂರು ಶತಕಗಳು ಮತ್ತು 21 ಅರ್ಧ ಶತಕಗಳೊಂದಿಗೆ 2919 ರನ್ ಗಳಿಸಿದ್ದಾರೆ ಮತ್ತು 74 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಸ್ಟೋಕ್ಸ್, “ನಾನು ಮಂಗಳವಾರ ಡರ್ಹಾಮ್‌ನಲ್ಲಿ ಇಂಗ್ಲೆಂಡ್‌ಗಾಗಿ ನನ್ನ ಕೊನೆಯ ಪಂದ್ಯವನ್ನು ODI ಕ್ರಿಕೆಟ್‌ನಲ್ಲಿ ಆಡುತ್ತೇನೆ. ನಾನು ಈ ಸ್ವರೂಪದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com