ವಿಂಡೀಸ್ ನೆಲದಲ್ಲಿ 39 ವರ್ಷಗಳ ಬಳಿಕ ಟೀಂ ಇಂಡಿಯಾ ಐತಿಹಾಸಿಕ ವೈಟ್‌ವಾಶ್ ಸಾಧನೆ

ಶಿಖರ್ ಧವನ್ ನೇತೃತ್ವದ ಭಾರತ ತಂಡ ಇತಿಹಾಸ ಸೃಷ್ಟಿಸಿದ್ದು, ಟೀಮ್ ಇಂಡಿಯಾ ವಿಂಡೀಸ್ ಅಂಗಳದಲ್ಲಿ ಮೊದಲ ವೈಟ್ ವಾಶ್ ಸರಣಿ ಜಯ ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ದುಬೈ: ಶಿಖರ್ ಧವನ್ ನೇತೃತ್ವದ ಭಾರತ ತಂಡ ಇತಿಹಾಸ ಸೃಷ್ಟಿಸಿದ್ದು, ಟೀಮ್ ಇಂಡಿಯಾ ವಿಂಡೀಸ್ ಅಂಗಳದಲ್ಲಿ ಮೊದಲ ವೈಟ್ ವಾಶ್ ಸರಣಿ ಜಯ ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಹೌದು..1983ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಭಾರತ ತಂಡ ದ್ವಿಪಕ್ಷೀಯ ODI ಸರಣಿಯನ್ನು ಆಡಲು ಪ್ರಾರಂಭಿಸಿದಾಗಿನಿಂದ, ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಒಳಗೊಂಡಿರುವ ಸರಣಿಯಲ್ಲಿ ಎರಡು ಬಾರಿ ODI ವಿಶ್ವಕಪ್ ಚಾಂಪಿಯನ್‌ ವಿಂಡೀಸ್ ಅನ್ನು ವೈಟ್‌ವಾಶ್ ಮಾಡಲು ಭಾರತಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಈ ಸಾಧನೆ ಭಾರತದಲ್ಲಿ ಈ ವರ್ಷಾರಂಭದಲ್ಲಿ ನಡೆದಿದ್ದ ಸರಣಿಯಲ್ಲಿ ಸಾಧ್ಯವಾಗಿತ್ತು. ಅಂದು ಭಾರತ ವಿಂಡೀಸ್ ವಿರುದ್ಧ ಮೊದಲ ವೈಟ್ ವಾಶ್ ಸರಣಿ ಗೆಲುವು ಸಾಧಿಸಿತ್ತು.

ಆದರೆ ವಿಂಡೀಸ್ ನೆಲದಲ್ಲಿ ಈ ಸಾಧನೆ ಟೀಂ ಇಂಡಿಯಾಗೆ ಕನಸಾಗಿಯೇ ಇತ್ತು. ಈ ಕನಸು ಇದೀಗ ನನಸಾಗಿದ್ದು ನಿನ್ನೆ ನಡೆದ ಮೂರನೇ ಏಕದಿನ ಪಂದ್ಯದಲ್ಲಿಯೂ ಭಾರತ ಗೆದ್ದು ಇತಿಹಾಸ ನಿರ್ಮಿಸಿದೆ. ಆ ಮೂಲಕ ಬರೊಬ್ಬರಿ 39 ವರ್ಷಗಳ ಬಳಿಕ ಭಾರತ ವಿಂಡೀಸ್ ನೆಲದಲ್ಲಿ ಅದೇ ತಂಡವನ್ನು ಮಣಿಸಿ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಅಂತೆಯೇ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ತಂಡವೊಂದರ ವಿರುದ್ಧ ಭಾರತದ ಮೊದಲ ಡಬಲ್ ವೈಟ್‌ವಾಶ್ ಸರಣಿ ಜಯವಾಗಿದೆ.

ಒಟ್ಟಾರೆ ಇದು ಏಕದಿನ ಸರಣಿಯಲ್ಲಿ ಭಾರತಕ್ಕೆ 13ನೇ ಕ್ಲೀನ್ ಸ್ವೀಪ್ ಆಗಿದ್ದು, ಬುಧವಾರದ ವಿಜಯವು ಜಿಂಬಾಬ್ವೆ ಮತ್ತು ಶ್ರೀಲಂಕಾವನ್ನು ಹೊರತುಪಡಿಸಿ ಭಾರತದ ಮೊದಲ ವಿದೇಶ ಸರಣಿ ವೈಟ್‌ವಾಶ್ ಆಗಿದೆ. ಭಾರತವು ಜಿಂಬಾಬ್ವೆಯಲ್ಲಿ (2013, 2015, ಮತ್ತು 2016)ಮೂರು ಬಾರಿ ODI ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದಿತ್ತು.  ಒಮ್ಮೆ ಶ್ರೀಲಂಕಾದಲ್ಲಿ  2017 ರಲ್ಲಿ ಇದೇ ಸಾಧನೆ ಮಾಡಿತ್ತು.

ಭಾರತಕ್ಕೂ ಮೊದಲು 2001ರಲ್ಲಿ ಜಿಂಬಾಬ್ವೆ ತಂಡ ಬಾಂಗ್ಲಾದೇಶದ ವಿರುದ್ಧ (ತವರಿನಲ್ಲಿ 4-0 ಮತ್ತು ಕೀನ್ಯಾದಲ್ಲಿ 3-0) ಮತ್ತು ಬಾಂಗ್ಲಾದೇಶ 2006 ರಲ್ಲಿ ಕೀನ್ಯಾ ವಿರುದ್ಧ ಇದೇ ರೀತಿ ಸಾಧನೆ ಮಾಡಿತ್ತು (3-0 ತವರಿನಲ್ಲಿ ಮತ್ತು ವಿದೇಶದಲ್ಲಿ).
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com