ಎದುರಾಳಿ ತಂಡದ ಬ್ಯಾಟರ್ ಗೆ ಹಾರ್ದಿಕ್ ಪಾಂಡ್ಯ ತನ್ನ ಬ್ಯಾಟ್ ನೀಡಿದ್ದೇಕೆ?

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಐರಿಶ್ ಬ್ಯಾಟ್ಸ್‌ಮನ್ ಹ್ಯಾರಿ ಟೆಕ್ಟರ್ ಅವರನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ಐಪಿಎಲ್‌ ಆಟಗಾರನಾಗಿ ನೋಡಲು ಇಷ್ಟಪಡುತ್ತೀನಿ ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
Updated on

ಡಬ್ಲಿನ್: ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಐರಿಶ್ ಬ್ಯಾಟ್ಸ್‌ಮನ್ ಹ್ಯಾರಿ ಟೆಕ್ಟರ್ ಅವರನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ಐಪಿಎಲ್‌ ಆಟಗಾರನಾಗಿ ನೋಡಲು ಇಷ್ಟಪಡುತ್ತೀನಿ ಎಂದು ಹೇಳಿದ್ದಾರೆ.

22ರ ಹರೆಯದ ಟೆಕ್ಟರ್, ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 33 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿ ಐರ್ಲೆಂಡ್ ತಂಡವನ್ನು 12 ಓವರ್‌ಗಳಲ್ಲಿ 108 ರನ್‌ಗಳಿಗೆ ಕೊಂಡೊಯ್ದಿದ್ದರು. ಆದರೂ ಭಾರತ 9.2 ಓವರ್‌ಗಳಲ್ಲಿ ಈ ಗುರಿಯನ್ನು ತಲುಪಿತ್ತು.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಂಡ್ಯ, ಐರಿಶ್ ಆಟಗಾರನಾದ ಟೆಕ್ಟರ್‌ನನ್ನು ಹೊಗಳಿದರು. ಭವಿಷ್ಯದಲ್ಲಿ ಅವರನ್ನು ಐಪಿಎಲ್‌ನಲ್ಲಿ ನೋಡಲು ಇಷ್ಟಪಡ್ತೇನಿ ಎಂದು ಪಾಂಡ್ಯ ಅಭಿಪ್ರಾಯಪಟ್ಟರು.

ಟೆಕ್ಟರ್ ಸಾಕಷ್ಟು ಉತ್ತಮ ಹೊಡೆತಗಳನ್ನು ನಮ್ಮ ವಿರುದ್ಧ ಆಡಿದ್ದಾರೆ. ಅವರಿಗೆ ಕೇವಲ 22 ವರ್ಷ. ಅವರು ಇನ್ನೂ ಸಿಕ್ಸರ್‌ಗಳನ್ನು ಬಾರಿಸಬಹುದಾಗಿದೆ. ಬಹುಶಃ ಐಪಿಎಲ್ ನ ಆಟಗಾರನಾಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ನಾನು ಬ್ಯಾಟ್ ಅನ್ನು ನೀಡಿದ್ದೇನೆ. ನನ್ನ ಶುಭ ಹಾರೈಕೆಗಳು ಅವನೊಂದಿಗಿವೆ ಎಂದು ಪಾಂಡ್ಯ ತಿಳಿಸಿದರು.

ಇದಕ್ಕೂ ಮುನ್ನ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಟೆಕ್ಟರ್ ತಮ್ಮ ಅಮೋಘ ಪ್ರದರ್ಶನದಿಂದಾಗಿ ಗಮನ ಸೆಳೆದಿದ್ದರು. ನ್ಯೂಜಿಲೆಂಡ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಟೆಕ್ಟರ್ ಐರ್ಲೆಂಡ್‌ನ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ನಮೀಬಿಯಾ ವಿರುದ್ಧ 101 ರನ್ ಗಳಿಸಿದ್ದರು.

ಟೆಕ್ಟರ್‌ಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ ಎಂದು ಹೇಳಿದ ಪಾಂಡ್ಯ, ಅವರನ್ನು ಸರಿಯಾಗಿ ನೋಡಿಕೊಳ್ಳಬೇಕು. ಸರಿಯಾದ ಮಾರ್ಗದರ್ಶನ ನೀಡಬೇಕು. ಜೀವನಶೈಲಿಯನ್ನು ಟೆಕ್ಟರ್ ಅರ್ಥಮಾಡಿಕೊಳ್ಳಬೇಕು. ಅಪಾಯದಲ್ಲಿರುವುದನ್ನು ಸಹ ಅರ್ಥಮಾಡಿಕೊಳ್ಳಬೇಕು. ಇದನ್ನೆಲ್ಲ ನಿಭಾಯಿಸಲು ಸಾಧ್ಯವಾದರೆ, ಟೆಕ್ಟರ್ ಐಪಿಎಲ್‌ನಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತದ ಕ್ರಿಕೆಟ್ ಲೀಗ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪಾಂಡ್ಯ ಹೇಳಿದರು.

ಭಾರತ ಮತ್ತು ಐರ್ಲೆಂಡ್ ನಡುವಿನ ಎರಡು ಟಿ20 ಪಂದ್ಯಗಳ ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯ ಮಂಗಳವಾರ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com