ಬಾಂಗ್ಲಾ ವಿರುದ್ಧದ ಪಂದ್ಯದ ಗತಿಯನ್ನೇ ಬದಲಿಸಿತು ಕೆಎಲ್ ರಾಹುಲ್ ಎಸೆದ ಅದೊಂದು ಥ್ರೋ: ರನೌಟ್ ನ ವಿಡಿಯೋ ಇಲ್ಲಿದೆ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 5 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಸೋಲಿನ ಸುಳಿಯಲ್ಲಿ ಭಾರತವನ್ನು ರಕ್ಷಿಸಿದ್ದು ಕೆಎಲ್ ರಾಹುಲ್ ಎಂದರೆ ತಪ್ಪಾಗಲಾರದು. 
ಕೆಎಲ್ ರಾಹುಲ್ ಥ್ರೋ
ಕೆಎಲ್ ರಾಹುಲ್ ಥ್ರೋ

ಅಡಿಲೇಡ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 5 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಸೋಲಿನ ಸುಳಿಯಲ್ಲಿ ಭಾರತವನ್ನು ರಕ್ಷಿಸಿದ್ದು ಕೆಎಲ್ ರಾಹುಲ್ ಎಂದರೆ ತಪ್ಪಾಗಲಾರದು. 

ಹೌದು. ಪಂದ್ಯದಲ್ಲಿ ಕೆಎಲ್ ರಾಹುಲ್ ಮಾಡಿದ ಅಂದೊಂದು ರನೌಟ್ ಪಂದ್ಯದ ಗತಿಯನ್ನೇ ಬದಲಾಯಿಸಿತು. ಭಾರತ ನೀಡಿದ 185 ರನ್ ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಆರಂಭಿಕ ಆಟಗಾರರಾದ ಲಿಟನ್ ದಾಸ್ ಅದ್ಭುತ ಬ್ಯಾಟಿಂಗ್ ಮಾಡಿದ್ದ ಅವರು ಕೇವಲ 21 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿದರು. ಇನ್ನು ತಂಡ 7ನೇ ಓವರ್ ಮುಕ್ತಾಯಕ್ಕೆ ಭರ್ಜರಿ ವಿಕೆಟ್ ನಷ್ಟವಿಲ್ಲದೆ 66 ರನ್ ಪೇರಿಸಿತ್ತು. ಈ ವೇಳೆ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. 

ಈ ಹಂತದಲ್ಲಿ ಮೈದಾನಕ್ಕಿಳಿದ ಅಂಪೈರ್ ಗಳು ಬಾಂಗ್ಲಾ ಇನ್ನಿಂಗ್ಸ್ ಮೊಟಕುಗೊಳಿಸಿರು. ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಬಾಂಗ್ಲಾಗೆ 16 ಓವರ್ ನಲ್ಲಿ 151ರನ್ ಗಳ ಗುರಿ ನೀಡಲಾಯಿತು. ಈ ಹಂತದಲ್ಲಿ ಕಣಕ್ಕಿಳಿದ ಬಾಂಗ್ಲಾದೇಶಕ್ಕೆ ಆರಂಭದಲ್ಲೇ ಭಾರತ ಆಘಾತ ನೀಡಿತು. 60ರನ್ ಗಳಿಸಿ ಅಪಾಯಕಾರಿಯಾಗಿದ್ದ ಲಿಟನ್ ದಾಸ್ ರನ್ನು ಕೆಎಲ್ ರಾಹುಲ್ ರನೌಟ್ ಮಾಡಿದರು.  

ಅಶ್ವಿನ್ ಬೌಲಿಂಗ್ ನಲ್ಲಿ ನಜ್ಮುಲ್ ಶಾಂಟೊ ಡೀಪ್ ಮಿಡ್ ವಿಕೆಟ್ ಕಡೆ ಚೆಂಡನ್ನು ಬಾರಿಸಿದರು. ಈ ವೇಳೆ ಎರಡು ರನ್ ತೆಗೆದುಕೊಳ್ಳಲು ಮುಂದಾದಾಗ ಕೆಎಲ್ ರಾಹುಲ್ ಬೌಂಡರಿಯಿಂದ ವೇಗವಾಗಿ ಬಂದು ಸುಮಾರು 65 ಮೀಟರ್ ದೂರದಿಂದ ಚೆಂಡನ್ನು ನಾನ್ ಸ್ಟ್ರೈಕರ್ ತುದಿಯತ್ತ ಎಸೆದರು. ಚೆಂಡು ನೆರವಾಗಿ ಸ್ಟಂಪ್ ಗೆ ಬಡಿದಿದ್ದು ಲಿಟನ್ ದಾಸ್ ರನೌಟ್ ಆದರು. ಇದು ಪಂದ್ಯದ ಗತಿಯನ್ನು ಬದಲಿಸಿತು. ಇವರ ಬೆನ್ನಲ್ಲೇ ಮತ್ತೋರ್ವ ಆಟಗಾರ ನಜ್ಮಲ್ ಹುಸೇನ್ ಶಾಂತೋ ಕೂಡ 21 ರನ್ ಗಳಿಸಿ ಶಮಿ ಬೌಲಿಂಗ್ ನಲ್ಲಿ ಔಟಾದರು. 

ಈ ಹಂತದಲ್ಲಿ ಆರಿಫ್ ಹೊಸೈನ್ ಜೊತೆಗೂಡಿದ ನಾಯಕ ಶಕೀಬ್ ಅಲ್ ಹಸನ್ ಕೊಂಚ ಪ್ರತಿರೋಧ ತೋರಿದರಾದರೂ, ಅರ್ಶ್ ದೀಪ್ ಸಿಂಗ್ ಬೌಲಂಗ್ ನಲ್ಲಿ ಔಟಾಗಿದ್ದು ಬಾಂಗ್ಲಾದೇಶಕ್ಕೆ ನುಂಗಲಾರದ ತುತ್ತಾಯಿತು. ಇವರ ಬೆನ್ನಲ್ಲೇ ನಾಯಕ ಶಕೀಬ್ ಕೂಡ 13 ರನ್ ಗಳಿಸಿ ಮತ್ತೆ ಅರ್ಶ್ ದೀಪ್ ಸಿಂಗ್ ಬೌಲಿಂದ್ ನಲ್ಲಿ ಔಟಾದರು. ಇವರ ಬೆನ್ನಲ್ಲೇ 1ರನ್ ಗಳಿಸಿದ್ದ ಯಾಸಿರ್ ಅಲಿ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ನಲ್ಲಿ ಔಟಾದರು. ಬಳಿಕ 6 ರನ್ ಗಳಿಸಿದ್ದ ಮೊಸಾದಕ್ ಹುಸೇನ್ ಕೂಡ ಪಾಂಡ್ಯ ಬೌಲಿಂಗ್ ನಲ್ಲಿ ಔಟಾಗುವುದರೊಂದಿಗೆ ಬಾಂಗ್ಲಾದೇಶಕ್ಕೆ ಸೋಲಿನ ಭೀತಿ ಎದುರಾಗಿತ್ತು. ಈ ಹಂತದಲ್ಲಿ ಜೊತೆಗೂಡಿದ ನೂರುಲ್ ಹುಸೇನ್ ಮತ್ತು ಟಸ್ಕಿನ್ ಅಹ್ಮದ್ ಮತ್ತೆ ಬಾಂಗ್ಲಾ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು.

ಇವರ ಬೆನ್ನಲ್ಲೇ ಮತ್ತೋರ್ವ ಆಟಗಾರ ನಜ್ಮಲ್ ಹುಸೇನ್ ಶಾಂತೋ ಕೂಡ 21 ರನ್ ಗಳಿಸಿ ಶಮಿ ಬೌಲಿಂಗ್ ನಲ್ಲಿ ಔಟಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com