ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅರೆಸ್ಟ್? ವೈರಲ್ ಫೋಟೋ ಹಿಂದಿನ ಅಸಲೀಯತ್ತೇನು?

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅರೆಸ್ಟ್ ಆಗಿದ್ದಾರಾ..? ಹೀಗೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಇದಕ್ಕೆ ಕಾರಣ ಅವರ ಈ ಒಂದೇ ಒಂದು ಫೋಟೋ...!!

ಗುವಾಹತಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅರೆಸ್ಟ್ ಆಗಿದ್ದಾರಾ..? ಹೀಗೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಇದಕ್ಕೆ ಕಾರಣ ಅವರ ಈ ಒಂದೇ ಒಂದು ಫೋಟೋ...!!

ಹೌದು.. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಪೊಲೀಸ್ ಅಧಿಕಾರಿಯೊಂದಿಗೆ ನಿಂತಿರುವ ಫೋಟೋ ಅವರ ಅಭಿಮಾನಿಗಳನ್ನು ಸಾಕಷ್ಟು ಕನ್ ಫ್ಯೂಸ್ ಮಾಡ್ತಿದೆ. ಭಾನುವಾರ ಗುವಾಹಟಿ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ T20 ಅಂತರಾಷ್ಟ್ರೀಯ ಪಂದ್ಯವನ್ನು ಆಯೋಜಿಸಿತ್ತು. ಈ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 16 ರನ್‌ಗಳ ಜಯದೊಂದಿಗೆ ಚೊಚ್ಚಲ ಸರಣಿ ಜಯ ದಾಖಲಿಸಿದೆ. ಆದಾಗ್ಯೂ, ಪಂದ್ಯ ಪ್ರಾರಂಭವಾಗುವ ಮೊದಲೇ ಭಾರತದ ನಾಯಕ ರೋಹಿತ್ ಶರ್ಮಾ ಅಸ್ಸಾಂ ಪೊಲೀಸ್ ಉಪ ಆಯುಕ್ತ ಪೊಂಜಿತ್ ದೋವಾರಾ ಅವರೊಂದಿಗೆ ಅಕ್ಕಪಕ್ಕದಲ್ಲಿ ನಿಂತಿರುವ ಚಿತ್ರವು ಅಂತರ್ಜಾಲದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಇದೇ ಫೋಟೋ ರೋಹಿತ್ ಶರ್ಮಾ ಅವರು ಬಂಧನವಾಗಿದೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಅದಕೆ ಸತ್ಯಾಂಶವೆಂದರೆ ರೋಹಿತ್ ಶರ್ಮಾ ಬಂಧನವಾಗಿಲ್ಲ.. ಬದಲಿಗೆ ಪಂದ್ಯ ಆರಂಭಕ್ಕೂ ಮುನ್ನ ಪೊಲೀಸ್ ಆಯುಕ್ತರು ರೋಹಿತ್ ಶರ್ಮಾರನ್ನು ಭೇಟಿ ಮಾಡಿ ಶುಭ ಹಾರೈಸಿದ್ದಾರೆ. ಪಂದ್ಯದ ಮೊದಲು ರೋಹಿತ್ ಶರ್ಮಾಗೆ ಶುಭ ಹಾರೈಸುವುದು ಕಮಿಷನರ್ ಅವರ ಸಿಹಿ ಸೂಚಕವಾಗಿದ್ದರೂ ಸಹ, ಹಲವಾರು ಇಂಟರ್ನೆಟ್ ಬಳಕೆದಾರರು ಚಿತ್ರವನ್ನು ತಪ್ಪಾಗಿ ಗ್ರಹಿಸಿದ್ದಾರೆ.  

ಭಾರತ ಕ್ರಿಕೆಟ್ ನಾಯಕನನ್ನು ಭಾನುವಾರ ಟಿ 20 ಐ ಮೊದಲು ಬಂಧಿಸಲಾಗಿದೆ ಎಂದು ಭಾವಿಸಿದ್ದರು. ನೀವು ಅವರನ್ನು ಬಂಧಿಸುತ್ತಿದ್ದೀರಿ ಎಂದು ನಾನು ಮೊದಲು ಭಾವಿಸಿದೆ, ಈ ಚಿತ್ರದಲ್ಲಿ ಯಾರೂ ನಗುತ್ತಿಲ್ಲವೇಕೆ?” ಎಂದು ಓರ್ವಬ್ಬ ಬಳಕೆದಾರ ಬರೆದಿದ್ದಾರೆ. ಅವರನ್ನು ಬಂಧಿಸಲಾಗಿದೆಯಂತೆ ಎಂದು ಇನ್ನೊಬ್ಬರು ಹೇಳಿದ್ದಾರೆ. “ನನ್ನ ಆರಾಧ್ಯ ರೋಹಿತ್ ನನ್ನು ಬಂಧಿಸಬೇಡಿ” ಎಂದು ಮೂರನೆಯವರು ತಮಾಷೆಯಾಗಿ ಕಾಮೆಂಟ್ ಮಾಡಿದರೆ, ನಾಲ್ಕನೆಯವನು “ಏಕೆ ಅಷ್ಟು ಗಂಭೀರವಾದ ರೋಹಿತ್? ನಿಮ್ಮನ್ನು ಇಲ್ಲಿ ಬಂಧಿಸಲಾಗಿದೆ ಅಥವಾ ಆರೋಪಿಯಾಗಿರುವಂತೆ ತೋರುತ್ತಿದೆ” ಎಂದು ಹೇಳಿದ್ದಾರೆ.

ಇನ್ನು ಈ ವೈರಲ್ ಫೋಟೋಗೆ ಪೊಲೀಸ್ ಆಯುತ್ಚ ಪೊಂಜಿತ್ ದೋವಾರಾ ಅವರು, ಬೆಸ್ಟ್ ಆಫ್ ಲಕ್. ಒಂದು ಶತಕ ಬಾರಿಸಲೇಬೇಕು ಎಂದು ಶೀರ್ಷಿಕೆ ನೀಡಿ ಶುಭ ಹಾರೈಸಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com