ಬಾಂಗ್ಲಾದೇಶಕ್ಕೆ ಜಯ
ಬಾಂಗ್ಲಾದೇಶಕ್ಕೆ ಜಯ

ಟಿ20 ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಬಾಂಗ್ಲಾದೇಶಕ್ಕೆ 3 ರನ್ ಗಳ ರೋಚಕ ಜಯ

ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಬಾಂಗ್ಲಾದೇಶ 3 ರನ್ ಗಳ ರೋಚಕ ಜಯ ದಾಖಲಿಸಿದೆ.
Published on

ಬ್ರಿಸ್ಬೇನ್: ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಬಾಂಗ್ಲಾದೇಶ 3 ರನ್ ಗಳ ರೋಚಕ ಜಯ ದಾಖಲಿಸಿದೆ.

ಟಿ20 ವಿಶ್ವಕಪ್ ಟೂರ್ನಿ ಇಂದು ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದ್ದು, ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹರಸಾಹಸ ಪಟ್ಟವು. ಅಂತಿಮವಾಗಿ 3ರನ್ ಗಳ ಅಂತರಗಲ್ಲಿ ಬಾಂಗ್ಲಾದೇಶ ತಂಡ ಜಯಗಳಿಸಿದೆ.

ಅಂತಿಮ ಓವರ್‌ನಲ್ಲಿ ಎರಡು ತಂಡಗಳಿಗೂ ಗೆಲ್ಲುವ ಅದ್ಭುತ ಅವಕಾಶವಿದ್ದರೂ ಜಿಂಬಾಬ್ವೆ ತಂಡ ಎಡವಿದ ಕಾರಣ ಕೇವಲ 3 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್‌ಗಳಲ್ಲಿ 150 ರನ್‌ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ಆರಂಭದಲ್ಲಿಯೇ ಆಘಾತಕ್ಕೆ ಒಳಗಾಗಿ ಸೋಲಿನ ದವಡೆಗೆ ಸಿಲುಕಿದ್ದರು ಕೂಡ ಸೀನ್ ವಿಲಿಯಮ್ಸ್ ಅದ್ಭುತ ಹೋರಾಟದ ಫಲವಾಗಿ ಚೇತರಿಸಿಕೊಂಡು ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬಾಂಗ್ಲಾ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ತಂಡ ಉತ್ತಮ ಆರಂಭವನ್ನು ಪಡೆಯಲು ವಿಫಲವಾಯಿತು. ನಜ್ಮುಲ್‌ ಹೊಸೈನ್‌ ಶಾಂಟೊ (71) ಅರ್ಧಶತಕ ಗಳಿಸಿ ತಮ್ಮ ತಂಡಕ್ಕೆ ನೆರವಾದರು.  ಇತರ ಆಟಗಾರರಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಬಾರದಿದ್ದರೂ ಕೆಲ ಸಾಧಾರಣ ಜೊತೆಯಾಟಗಳಲ್ಲಿ ಭಾಗಿಯಾಗಿ ತಂಡದ ಮೊತ್ತ 150ರ ಗಡಿ ತಲುಪಲು ನಜ್ಮುಲ್ ಹೊಸೈನ್ ಕಾರಣವಾದರು. ಅಂತಿಮವಾಗಿ 20 ಓವರ್ ಗಳಲ್ಲಿ ಬಾಂಗ್ಲಾದೇಶ ತಂಡ 7 ವಿಕೆಟ್ ನಷ್ಟಕ್ಕೆ 150ರನ್ ಕಲೆಹಾಕಿ ಜಿಂಬಾಬ್ವೆಗೆ ಗೆಲ್ಲಲು 151ರನ್ ಗಳ ಗುರಿ ನೀಡಿತು.

ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 147 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸೀನ್‌ ವಿಲಿಯಮ್ಸ್‌ ಹೋರಾಟ ನಡೆಸಿದರಾದರೂ, 8 ಎಸೆತಗಳಲ್ಲಿ 19 ರನ್ ಬೇಕಿದ್ದಾಗ ವಿಕೆಟ್‌ ಕೈಚೆಲ್ಲಿ ನಿರಾಸೆ ಮೂಡಿಸಿದರು. 42 ಎಸೆತಗಳಲ್ಲಿ 64 ರನ್‌ ಗಳಿಸಿದ್ದ ಅವರು, 19ನೇ ಓವರ್‌ನ 4ನೇ ಎಸೆತದಲ್ಲಿ ರನೌಟ್‌ ಆದರು. ಇದರೊಂದಿಗೆ ಜಿಂಬಾಬ್ವೆ ಜಯದ ಕನಸು ಕಮರಿತು. ಆ ಮೂಲಕ ಜಿಂಬಾಬ್ವೆ ಕೇವಲ 3 ರನ್ ಗಳ ಅಂತರದಲ್ಲಿ ಶರಣಾಯಿತು. ಈ ಜಯದೊಂದಿಗೆ ಬಾಂಗ್ಲಾ ತಂಡ 'ಬಿ' ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿತು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com