ಮಹಿಳಾ ಕ್ರಿಕೆಟ್ ಎಫ್ ಟಿಪಿ 2022-25: 27 ಏಕದಿನ ಪಂದ್ಯ, 36 ಟಿ20, 2 ಟೆಸ್ಟ್ ಪಂದ್ಯಗಳನ್ನಾಡಲಿರುವ ಭಾರತೀಯ ತಂಡ
ಭಾರತೀಯ ಮಹಿಳಾ ಕ್ರಿಕೆಟ್ ತಂಡ ಫ್ಯೂಚರ್ ಟೂರ್ಸ್ ಹಾಗೂ ಪ್ರೋಗ್ರಾಮ್ (ಎಫ್ ಟಿಪಿ) ಗಳಲ್ಲಿ ಬರೊಬ್ಬರಿ 65 ಪಂದ್ಯಗಳನ್ನಾಡಲಿವೆ.
Published: 17th August 2022 02:57 AM | Last Updated: 17th August 2022 01:39 PM | A+A A-

ಮಹಿಳಾ ಕ್ರಿಕೆಟ್
ದುಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಫ್ಯೂಚರ್ ಟೂರ್ಸ್ ಹಾಗೂ ಪ್ರೋಗ್ರಾಮ್ (ಎಫ್ ಟಿಪಿ) ಗಳಲ್ಲಿ ಬರೊಬ್ಬರಿ 65 ಪಂದ್ಯಗಳನ್ನಾಡಲಿವೆ.
ಐಸಿಸಿ ಮೇ.2022 ರಿಂದ ಏಪ್ರಿಲ್ 2025 ವರೆಗೆ ಮೂರು ವರ್ಷಗಳ ಯೋಜನೆಗಳನ್ನು ಪ್ರಕಟಿಸಿದೆ. ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 301 ಪಂದ್ಯಗಳು ನಡೆಯಲಿದ್ದು (7 ಟೆಸ್ಟ್, 135 ಏಕದಿನ ಪಂದ್ಯ ಹಾಗೂ 159 ಟಿ20) ಪಂದ್ಯಗಳು ನಡೆಯಲಿವೆ. ಈ ಅವಧಿಯಲ್ಲಿ ಭಾರತ 2 ಟೆಸ್ಟ್ ಗಳನ್ನು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನಾಡಲಿದ್ದು, 27 ಏಕದಿನ ಪಂದ್ಯಗಳು ಹಾಗೂ 36 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಲಿದೆ.
ಇದನ್ನೂ ಓದಿ: ಜಿಂಬಾಬ್ವೆ ಪ್ರವಾಸ: ಟೀಂ ಇಂಡಿಯಾ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ
ಮೇ.2022 ರಿಂದ ಎಫ್ ಟಿಪಿ ಪ್ರಾರಂಭವಾಗಿದ್ದು, ಭಾರತ ಈಗಾಗಲೇ 3 ಡಬ್ಲ್ಯುಒಡಿಐ ಗಳನ್ನು ಹಾಗೂ 3 ಡಬ್ಲ್ಯುಟಿ20ಐ ಗಳನ್ನು ಲಂಕಾ ವಿರುದ್ಧ ಆಡಿದೆ.
ಪಟ್ಟಿಯ ಪ್ರಕಾರ, ಭಾರತ ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ತಂಡಗಳಿಗೆ ಆತಿಥ್ಯ ವಹಿಸಲಿದ್ದು, ಆಸ್ಟ್ರೇಲಿಯ, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶಗಳಿಗೂ ಪ್ರವಾಸ ಕೈಗೊಳ್ಳಲಿದೆ.