ಜಿಂಬಾಬ್ವೆ ಪ್ರವಾಸ: ಟೀಂ ಇಂಡಿಯಾ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ

ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಭಾರತ ಕ್ರಿಕೆಟ್ ನ ದಂತಕಥೆ ಹಾಗೂ ಹಾಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಪ್ರಸ್ತುತ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ರನ್ನು ಆಯ್ಕೆ ಮಾಡಲಾಗಿದೆ.
ವಿವಿಎಸ್ ಲಕ್ಷ್ಮಣ್
ವಿವಿಎಸ್ ಲಕ್ಷ್ಮಣ್

ನವದೆಹಲಿ: ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಭಾರತ ಕ್ರಿಕೆಟ್ ನ ದಂತಕಥೆ ಹಾಗೂ ಹಾಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಪ್ರಸ್ತುತ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ರನ್ನು ಆಯ್ಕೆ ಮಾಡಲಾಗಿದೆ.

ಮೂರು ಏಕದಿನ ಪಂದ್ಯಗಳನ್ನು ಒಳಗೊಂಡಿರುವ ಭಾರತದ ಜಿಂಬಾಬ್ವೆ ಪ್ರವಾಸಕ್ಕೆ ಕೋಚಿಂಗ್ ಸಿಬ್ಬಂದಿಯನ್ನು ಪ್ರಕಟಿಸಲಾಗಿದ್ದು, ಭಾರತದ ದಂತಕಥೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಪ್ರಸ್ತುತ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಜಿಂಬಾಬ್ವೆ ಪ್ರವಾಸಕ್ಕೆ ಮುಖ್ಯ ಕೋಚ್ ಪಾತ್ರವನ್ನು ವಹಿಸಲಿದ್ದಾರೆ.

ಆಗಸ್ಟ್ 27 ರಂದು ಪ್ರಾರಂಭವಾಗುವ ಏಷ್ಯಾ ಕಪ್‌ಗೆ ಮುಂಚಿತವಾಗಿ ರಾಹುಲ್ ದ್ರಾವಿಡ್‌ಗೆ ವಿರಾಮ ನೀಡಲಾಗಿದೆ. ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧದ ಬಹು ನಿರೀಕ್ಷಿತ ಘರ್ಷಣೆಯೊಂದಿಗೆ ಭಾರತದ ಅಭಿಯಾನ ಪ್ರಾರಂಭವಾಗುತ್ತದೆ. ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರಿಗೆ ವಿರಾಮ ನೀಡಲಾಗಿದ್ದು, ಅವರ ಸ್ಥಾನವನ್ನು ಹೃಷಿಕೇಶ್ ಕಾನಿಟ್ಕರ್ ಮತ್ತು ಸಾಯಿರಾಜ್ ಬಹುತುಲೆ ತುಂಬಲಿದ್ದಾರೆ.

ದ್ರಾವಿಡ್ ಅನುಪಸ್ಥಿತಿಯಲ್ಲಿ ಭಾರತದ ಐರ್ಲೆಂಡ್ ಪ್ರವಾಸದ ಸಮಯದಲ್ಲೂ ಲಕ್ಷ್ಮಣ್ ಮುಖ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದು, ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಒಂದು T20I ಪಂದ್ಯದಲ್ಲಿ ಲಕ್ಷ್ಮಣ್ ಟೀಂ ಇಂಡಿಯಾಗೆ ಮಾರ್ಗದರ್ಶನ ನೀಡಿದ್ದರು. ಬಹುತುಲೆ ಮತ್ತು ಸಿತಾಂಶು ಕೊಟಕ್ ಅವರು ಕೋಚಿಂಗ್ ವಿಭಾಗದ ಭಾಗವಾಗಿದ್ದರು. 

ಇದು ಸೀನಿಯರ್ ತಂಡದೊಂದಿಗೆ ಕೋಚಿಂಗ್ ಸಾಮರ್ಥ್ಯದಲ್ಲಿ ಇದು ಕಾನಿಟ್ಕರ್ ಅವರ ಮೊದಲ ಅಂತರರಾಷ್ಟ್ರೀಯ ನಿಯೋಜನೆಯಾಗಿದೆ. ಆದರೆ ಅವರು ಈ ವರ್ಷದ ಆರಂಭದಲ್ಲಿ U19 ವಿಶ್ವಕಪ್ ವಿಜೇತ ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದರು. ಭಾರತವು ಜಿಂಬಾಬ್ವೆ ವಿರುದ್ಧ ಆಗಸ್ಟ್ 18 ರಿಂದ 22 ರ ನಡುವೆ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com