ಎಲ್ಲಾ ಫಾರ್ಮ್ಯಾಟ್ ಗಳಲ್ಲಿಯೂ 100 ಪಂದ್ಯಗಳನ್ನಾಡಿದ ಏಕೈಕ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರ

ಆ.28 ರಂದು ದುಬೈ ನಲ್ಲಿ ಭಾರತ- ಪಾಕಿಸ್ತಾನ ತಂಡಗಳು ಏಷ್ಯಾ ಕಪ್-2022 ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದು, ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರಿಗೆ ಟಿ20 ಫಾರ್ಮ್ಯಾಟ್ ನಲ್ಲಿ ಇದು 100 ನೇ ಪಂದ್ಯವಾಗಿರಲಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಅಬುಧಾಬಿ: ಆ.28 ರಂದು ದುಬೈ ನಲ್ಲಿ ಭಾರತ- ಪಾಕಿಸ್ತಾನ ತಂಡಗಳು ಏಷ್ಯಾ ಕಪ್-2022 ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದು, ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರಿಗೆ ಟಿ20 ಫಾರ್ಮ್ಯಾಟ್ ನಲ್ಲಿ ಇದು 100 ನೇ ಪಂದ್ಯವಾಗಿರಲಿದೆ.

ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಕ್ರಿಕೆಟ್ ನ ಎಲ್ಲಾ 3 ಫಾರ್ಮ್ಯಾಟ್ ಗಳಲ್ಲೂ 100 ಪಂದ್ಯಗಳನ್ನು ಪೂರೈಸಿದ ಏಕೈಕ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

2008 ರಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲು ಪ್ರಾರಂಭಿಸಿದರು. ಈ ವರೆಗಿನ 99 ಟಿ20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 3,308 ಪಂದ್ಯಗಳನ್ನಾಡಿದ್ದು, ಸರಾಸರಿ 50.12 ಹೊಂದಿದ್ದಾರೆ. ಟಿ20ಯಲ್ಲಿ ವಿರಾಟ್ ಕೊಹ್ಲಿ ಅವರ ವೈಯಕ್ತಿಕ ಉತ್ತಮ ಸ್ಕೋರ್ 94 ಆಗಿದ್ದು, 30 ಅರ್ಧಶತಕಗಳನ್ನು ಪೂರೈಸಿದ್ದಾರೆ.

2017-2021 ರ ನಡುವೆ 50 ಪಂದ್ಯಗಳನ್ನು ನಾಯಕನಾಗಿ ಮುನ್ನಡೆಸಿರುವ ಕೀರ್ತಿ ವಿರಾಟ್ ಕೊಹ್ಲಿಗೆ ಸಲ್ಲುತ್ತದೆ ಹಾಗೂ ಈ 50 ಪಂದ್ಯಗಳ ಪೈಕಿ 30 ಪಂದ್ಯಗಳನ್ನು ಗೆದ್ದಿದ್ದು 16 ಪಂದ್ಯಗಳನ್ನು ಸೋತಿದ್ದರೆ ಎರಡು ಪಂದ್ಯಗಳಲ್ಲಿ ಎದುರಾಳಿ ತಂಡದೊಂದಿಗೆ ಸಮಬಲ ಸಾಧಿಸಲಾಗಿತ್ತು. ಈ ಫಾರ್ಮೆಟ್ ನಲ್ಲಿ ವಿರಾಟ್ ಕೊಹ್ಲಿ ತಂಡದ ನಾಯಕನಾಗಿ ಶೇ.64.58 ರಷ್ಟು ಸರಾಸರಿ ಯಶಸ್ಸು ಹೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com