ಕೋವಿಡ್-19 ನೆಗೆಟಿವ್, ಟೀಂ ಇಂಡಿಯಾ ಸೇರಿದ ಕೋಚ್ ರಾಹುಲ್ ದ್ರಾವಿಡ್

ಕೊರೋನಾದಿಂದ ಗುಣಮುಖರಾದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಏಷ್ಯಾ ಕಪ್ 2022 ಟೂರ್ನಿಗಾಗಿ ದುಬೈ ತಲುಪಿದ್ದಾರೆ.
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ದುಬೈ: ಕೊರೋನಾದಿಂದ ಗುಣಮುಖರಾದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಏಷ್ಯಾ ಕಪ್ 2022 ಟೂರ್ನಿಗಾಗಿ ದುಬೈ ತಲುಪಿದ್ದಾರೆ. ಕೋವಿಡ್-19 ನೆಗೆಟಿವ್ ಪರೀಕ್ಷೆ ವರದಿ ಬಳಿಕ ಅವರು ಹೋಟೆಲ್ ನಲ್ಲಿ ಟೀಂ ಇಂಡಿಯಾ ಸೇರಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಇಂದು ಸಂಜೆ ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ- ಪಾಕಿಸ್ತಾನ ಮುಖಾಮುಖಿಯಾಗಲಿವೆ. ಕಳೆದ ವರ್ಷ ಹೀನಾಯ ಸೋಲಿನ ನಂತರ ಪ್ರತೀಕಾರ ತೀರಿಸಿಕೊಳ್ಳಲು ಉಭಯ ತಂಡಗಳು ಸಜ್ಜಾಗಿವೆ.   ದ್ರಾವಿಡ್ ಅನುಪಸ್ಥಿತಿಯಲ್ಲಿ ತಂಡದಲ್ಲಿದ್ದ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್, ಇಂಡಿಯಾ ಎ ತಂಡ ನೋಡಿಕೊಳ್ಳಲು ಬೆಂಗಳೂರಿಗೆ ಹಿಂತಿರುಗಲಿದ್ದಾರೆ. 

ಈ ವಾರದ ಆರಂಭದಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು.  ಏಷ್ಯಾ ಕಪ್ 2022 ಟೂರ್ನಿಯಾಗಿ ದುಬೈಗೆ ತೆರಳಲು ಟೀಂ ಇಂಡಿಯಾದ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com