ಮೊಹಮ್ಮದ್ ಶಮಿಗೆ ಗಾಯ: ಬಾಂಗ್ಲಾದೇಶ ಏಕದಿನ ಸರಣಿಯಿಂದ ಹೊರಕ್ಕೆ
ಟೀಂ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಅವರ ಕೈ ಗಾಯವಾಗಿರುವ ಕಾರಣ ನಾಳೆಯಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಶನಿವಾರ ತಿಳಿಸಿವೆ.
Published: 03rd December 2022 02:46 PM | Last Updated: 03rd December 2022 04:49 PM | A+A A-

ಮೊಹಮ್ಮದ್ ಶಮಿ
ನವದೆಹಲಿ: ಟೀಂ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಅವರ ಕೈ ಗಾಯವಾಗಿರುವ ಕಾರಣ ನಾಳೆಯಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಶನಿವಾರ ತಿಳಿಸಿವೆ.
ಆಸ್ಟ್ರೇಲಿಯಾದಿಂದ ಮರಳಿದ ನಂತರ ತರಬೇತಿ ಅವಧಿಯಲ್ಲಿ ಅವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಡಿಸೆಂಬರ್ 14 ರಿಂದ ಚಿತ್ತಾಗಾಂಗ್ ನಲ್ಲಿ ಆರಂಭವಾಗಲಿರುವ ಎರಡು ಟಿ-20 ಸರಣಿಯಿಂದಲೂ ಶಮಿ ಹೊರಗುಳಿಯಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ಮುಗಿದ ನಂತರ ಆರಂಭವಾಗಿದ್ದ ತರಬೇತಿ ಅವಧಿಯಲ್ಲಿ ಗಾಯಗೊಂಡು ಮೊಹಮ್ಮದ್ ಶಮಿ ಬಳಲುತ್ತಿದ್ದು, ಎನ್ ಸಿಎ ವರದಿ ಕೇಳಿದ್ದು, ಡಿಸೆಂಬರ್ 1 ರಂದು ಟೀಂ ಇಂಡಿಯಾದೊಂದಿಗೆ ಬಾಂಗ್ಲಾದೇಶಕ್ಕೆ ತೆರಳುತ್ತಿಲ್ಲ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಮಿ ಯಾವ ರೀತಿಯ ಗಾಯದ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ: ಆಯ್ಕೆ ಸಮಿತಿ ವಜಾ ಹಿನ್ನಲೆ: ಕ್ರಿಕೆಟ್ ಸಲಹಾ ಸಮಿತಿಗೆ ನೂತನ ಸದಸ್ಯರ ನೇಮಕ ಮಾಡಿದ ಬಿಸಿಸಿಐ!
ಜೂನ್ ನಲ್ಲಿ ಓವೆಲ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಉಳಿಯಲು ಭಾರತ ಪ್ರತಿಯೊಂದು ಪಂದ್ಯ ಗೆಲ್ಲಬೇಕಾಗಿರುವುದರಿಂದ ಒಂದು ವೇಳೆ ಶಮಿ ಹೊರಗುಳಿದರೆ ಮುಂದೇನು ಎಂಬುದು ನಾಯಕ ರೋಹಿತ್ ಶರ್ಮಾ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಚಿಂತೆಯಾಗಿದೆ.
ಶಮಿ ಅನುಪಸ್ಥಿತಿ ಮೂರು ಏಕದಿನ ಪಂದ್ಯಗಳ ಮೇಲೆ ನಿಜವಾಗಿಯೂ ಪರಿಣಾಮ ಬೀರಲಿದೆ ಆದರೆ, ಟೆಸ್ಟ್ ನಿಂದಲೂ ಅವರು ಹೊರಗುಳಿಯುವ ಸಾಧ್ಯತೆಯಿದ್ದು, ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಶಮಿ ಟೆಸ್ಟ್ ಕ್ರಿಕೆಟ್ ನಲ್ಲಿ 60 ಪಂದ್ಯಗಳಲ್ಲಿ 216 ವಿಕೆಟ್ ಪಡೆದಿದ್ದಾರೆ.