ಪಾಕ್- ಇಂಗ್ಲೆಂಡ್ ಸರಣಿ: ಐಸಿಸಿಯಿಂದ ರಾವಲ್ಪಿಂಡಿ ಟ್ರಾಕ್ ಗೆ ಸರಾಸರಿಗಿಂತ ಕಳಪೆ ಶ್ರೇಯಾಂಕ

ಇಂಗ್ಲೆಂಡ್-ಪಾಕ್ ನಡುವಿನ ಮೊದಲ ಟೆಸ್ಟ್ ನಡೆದ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಮ್ ಗೆ ಐಸಿಸಿ ಸರಾಸರಿಗಿಂತಲೂ ಕೆಳಗಿನ ರೇಟಿಂಗ್ ನೀಡಿದೆ.
ಪಾಕಿಸ್ತಾನ- ಇಂಗ್ಲೆಂಡ್ ಪಂದ್ಯ (ಸಂಗ್ರಹ ಚಿತ್ರ)
ಪಾಕಿಸ್ತಾನ- ಇಂಗ್ಲೆಂಡ್ ಪಂದ್ಯ (ಸಂಗ್ರಹ ಚಿತ್ರ)

ದುಬೈ: ಇಂಗ್ಲೆಂಡ್-ಪಾಕ್ ನಡುವಿನ ಮೊದಲ ಟೆಸ್ಟ್ ನಡೆದ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಮ್ ಗೆ ಐಸಿಸಿ ಸರಾಸರಿಗಿಂತಲೂ ಕೆಳಗಿನ ರೇಟಿಂಗ್ ನೀಡಿದೆ.
 
ಬೌಲರ್ ಗಳಿಗೆ ಸಹಕಾರಿಯಾಗದೇ ಇದ್ದದ್ದಕ್ಕೆ ಐಸಿಸಿ ಈ ರೇಟಿಂಗ್ ನೀಡಿದೆ. ಈ ಪಂದ್ಯದಲ್ಲಿ 7 ಶತಕಗಳು ದಾಖಲಾಗಿದ್ದು, ಇಂಗ್ಲೆಂಡ್ ತಂಡ 74 ರನ್ ಗಳಿಂದ ಗೆದ್ದಿತ್ತು, ಪ್ರಾರಂಭದ ದಿನ ದಾಖಲೆಯ 506 ರನ್ ಗಳನ್ನು ಗಳಿಸಿತ್ತು. ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ನಷ್ತಕ್ಕೆ 657 ರನ್ ಗಳನ್ನು ಗಳಿಸಿ, ತಂಡದ ಮೂವರು ಆಟಗಾರರು 3 ಅಂಕಿಗಳ ರನ್ ಗಳಿಸಿದ್ದರು.

ಸರಾಸರಿಗಿಂತಲೂ ಕಳಪೆ ಶ್ರೇಯಾಂಕದ ಜೊತೆಗೆ ಈ ಪ್ರದೇಶಕ್ಕೆ ಮತ್ತೊಂದು ನಕಾರಾತ್ಮಕ ಅಂಶವೂ ಸೇರ್ಪಡೆಯಾಗಿದ್ದು, 8 ತಿಂಗಳಲ್ಲಿ 2ನೇ ಬಾರಿಗೆ ಡೀಮೆರಿಟ್ ಅಂಶ ಎದುರಿಸಿದೆ.

ಮಾರ್ಚ್ ನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಬಳಕೆ ಮಾಡಲಾಗಿದ್ದ ಪಿಚ್ಗ್ ಗೂ ಸರಾಸರಿಗಿಂತಲೂ ಕಡಿಮೆ ರೇಟಿಂಗ್ ನೀಡಲಾಗಿತ್ತು.

ಮ್ಯಾಚ್ ರೆಫರಿಯ ಐಸಿಸಿ ಎಲೀಟ್ ಸಮಿತಿಯ ಆಂಡಿ ಪೈಕ್ರಾಫ್ಟ್ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದು, ತುಂಬಾ ಸಮತಟ್ಟಾದ ಪಿಚ್ ಆಗಿತ್ತು, ಇದು ಹೆಚ್ಚು ಕಡಿಮೆ ಯಾವುದೇ ರೀತಿಯ ಬೌಲರ್ ಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ. ಇದೇ ಕಾರಣದಿಂದಾಗಿಯೇ ಉಭಯ ತಂಡದ ಬ್ಯಾಟ್ಸ್ ಮನ್ ಗಳುಬೃಹತ್ ಮೊತ್ತದ ಸ್ಕೋರ್ ದಾಖಲಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com