ಹಿರಿಯ ಸ್ಪಿನ್ನರ್ ಅಶ್ವಿನ್‌ರನ್ನು ಯಾಕೆ ಆಯ್ಕೆ ಮಾಡಿಲ್ಲ: ಕೋಚ್ ದ್ರಾವಿಡ್‌ರನ್ನು ಪ್ರಶ್ನಿಸಿದ ಪಾಕ್ ಮಾಜಿ ಕ್ರಿಕೆಟಿಗ

ಇಂಗ್ಲೆಂಡ್ ವಿರುದ್ಧದ ಮರುನಿಗದಿತ ಐದನೇ ಟೆಸ್ಟ್‌ನಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡದಿರುವ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಪ್ರಶ್ನಿಸಿದ್ದಾರೆ.
ದ್ರಾವಿಡ್-ಕನೇರಿಯಾ
ದ್ರಾವಿಡ್-ಕನೇರಿಯಾ

ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮರುನಿಗದಿತ ಐದನೇ ಟೆಸ್ಟ್‌ನಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡದಿರುವ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಪ್ರಶ್ನಿಸಿದ್ದಾರೆ.

ಜೋ ರೂಟ್ (76*) ಮತ್ತು ಜಾನಿ ಬೈರ್‌ಸ್ಟೋವ್ (72*) ಅರ್ಧಶತಕಗಳಿಂದ ಇಂಗ್ಲೆಂಡ್ ಈಗ ಉತ್ತಮ ಸ್ಥಿಯಲ್ಲಿದ್ದು, ಸೋಮವಾರ ಭಾರತ ತಂಡ ವಿಕೆಟ್ ಪಡೆಯಲು ಹೆಣಗಾಡಿತು. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೆ ಸರಿಯಾದ ಆಯ್ಕೆ ಮಾಡದಿರುವುದಕ್ಕೆ ತಂಡ ಈಗ ಬೆಲೆ ತೆರುತ್ತಿದೆ ಎಂದು ಕನೇರಿಯಾ ಹೇಳಿದ್ದಾರೆ.

'ಎಡ್ಜ್‌ಬಾಸ್ಟನ್‌ನಲ್ಲಿ ಟೀಮ್ ಇಂಡಿಯಾ ಗೆಲುವಿನಿಂದ ಸೋಲಿನತ್ತ ಸಾಗುತ್ತಿದೆ. ರವಿಚಂದ್ರನ್ ಅಶ್ವಿನ್ ಹನ್ನೊಂದರ ಆಟದಲ್ಲಿ ಏಕೆ ಆಡುತ್ತಿಲ್ಲ. ಯಾರು ಈ ನಿರ್ಧಾರವನ್ನು ಮಾಡಿದರು. ದ್ರಾವಿಡ್ ಅವರೇ? ಸ್ವತಃ ಅವರೇ ಕೋಚ್ ಆಗಿ ಇಂಗ್ಲೆಂಡ್‌ನಲ್ಲಿ ತುಂಬಾ ಆಟ ಆಡಿದ್ದಾರೆ. ಇಂಗ್ಲೆಂಡ್ ನ ಹವಾಗುಣ ಅವರಿಗೆ ಚೆನ್ನಾಗಿ ಗೊತ್ತಿದೆ. ಇಂದು ಇಂಗ್ಲೆಂಡ್ ಬೇಸಿಗೆ. ಈಗ ಇಲ್ಲಿ ವಿಕೆಟ್‌ಗಳು ಕಾಯುತ್ತವೆ ಮತ್ತು ಒಣಗಿರುತ್ತವೆ. ಅಲ್ಲದೆ 3ನೇ ದಿನದಿಂದ ಚೆಂಡು ಸ್ಪಿನ್ ಆಗುತ್ತದೆ. ಸೀಮ್ ಇರುವಲ್ಲಿ ತೇವಾಂಶದ ಕಾರಣದಿಂದ ಅದು ತಿರುಗುತ್ತದೆ. ಬುಮ್ರಾ ಮಾತ್ರ ಅದ್ಭುತಗಳನ್ನು ಮಾಡಬಲ್ಲರು ಎಂದು ಕಾಣುತ್ತದೆ. ಭಾರತ ತಪ್ಪು ಮಾಡಿದೆ ಮತ್ತು ಅದರ ಬೆಲೆಯನ್ನು ತೆರುತ್ತದೆ' ಎಂದು ಕನೇರಿಯಾ ಕೂ ಮಾಡಿದ್ದಾರೆ.

ಸೋಮವಾರದ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಸ್ಕೋರ್ 259/3 ಎಂದಿತ್ತು, ರೂಟ್ ಮತ್ತು ಬೈರ್‌ಸ್ಟೋವ್ ಕ್ರೀಸ್‌ನಲ್ಲಿದ್ದರು. ಇಂಗ್ಲೆಂಡ್‌ಗೆ ಗೆಲುವಿಗೆ 119 ರನ್‌ಗಳ ಅವಶ್ಯಕತೆಯಿದ್ದು, ಭಾರತವು ಸರಣಿಯನ್ನು ವಶಪಡಿಸಿಕೊಳ್ಳಲು ಏಳು ವಿಕೆಟ್‌ಗಳನ್ನು ಪಡೆಯಬೇಕಾಗಿದೆ.

ಸೋಮವಾರದ ನಾಲ್ಕನೇ ದಿನದ ಅಂತಿಮ ಸೆಷನ್‌ನಲ್ಲಿ ಇವರಿಬ್ಬರು ರನ್‌ಗಳನ್ನು ಪೇರಿಸುವುದನ್ನು ಮುಂದುವರೆಸಿದ್ದರಿಂದ ಭಾರತೀಯ ವೇಗದ ಬೌಲಿಂಗ್ ದಾಳಿಯು ರೂಟ್ ಮತ್ತು ಬೈರ್ಟ್‌ಸೊವ್ ಅವರ ಇನ್-ಫಾರ್ಮ್ ಜೋಡಿಯ ವಿರುದ್ಧ ನಿಷ್ಪರಿಣಾಮಕಾರಿಯಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com