2ನೇ ಏಕದಿನ ಪಂದ್ಯ: ಅಕ್ಸರ್ ಪಟೇಲ್ ಭರ್ಜರಿ ಬ್ಯಾಟಿಂಗ್; ಭಾರತಕ್ಕೆ 2 ವಿಕೆಟ್ ಗಳ ರೋಚಕ ಜಯ

ವೆಸ್ಟ್ ಇಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 2 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿ, ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ.
ಭಾರತಕ್ಕೆ ಜಯ
ಭಾರತಕ್ಕೆ ಜಯ

ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 2 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿ, ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ.

ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ತಂಡ ನೀಡಿದ 312 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ ಶುಭ್ ಮನ್ ಗಿಲ್ (43 ರನ್), ಶ್ರೇಯಸ್ ಅಯ್ಯರ್ (63 ರನ್), ಅಕ್ಸರ್ ಪಟೇಲ್ (ಅಜೇಯ 64 ರನ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ವಿಂಡೀಸ್ ವಿರುದ್ಧ 2 ವಿಕೆಟ್ ಗಳ ವಿರೋಚಿತ ಗೆಲುವು ಸಾಧಿಸಿದೆ.

ಅಂತಿಮ ಓವರ್ ನಲ್ಲಿ ಗೆಲ್ಲಲು ಮೂರು ಎಸೆತದಲ್ಲಿ 6 ರನ್ ಗಳ ಅಗತ್ಯವಿದ್ದಾಗ ಅಕ್ಸರ್ ಪಟೇಲ್ ಸಿಕ್ಸರ್ ಎತ್ತುವ ಮೂಲಕ ಭಾರತಕ್ಕೆ ರೋಚಕ ಜಯ ತಂದಿತ್ತರು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-0 ಅತರದಲ್ಲಿ ಗೆದ್ದು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ.

ಇನ್ನು ವಿಂಡೀಸ್ ಪರ ಜೋಸೆಫ್ ಮತ್ತು ಮೇಯರ್ಸ್ ತಲಾ 2 ವಿಕೆಟ್ ಪಡೆದರೆ, ಸೀಲ್ಸ್, ಶೆಫರ್ಡ್ ಮತ್ತು ಹೊಸೇನ್ ತಲಾ ಒಂದು ವಿಕೆಟ್ ಪಡೆದರು. ಅಂತಿಮ ಕ್ಷಣದವರೆಗೂ ವಿರೋಚಿತ ಬ್ಯಾಟಿಂಗ್ ಪ್ರದರ್ಶನ ತೋರಿದ ಅಕ್ಸರ್ ಪಟೇಲ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com