ಧೋನಿ, ಸಚಿನ್ ಆಯ್ತು ಈಗ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಬಯೋಪಿಕ್: ಮೋಷನ್ ಪೋಸ್ಟರ್ ಬಿಡುಗಡೆ!
ಭಾರತದಲ್ಲಿ ಕ್ರೀಡಾಪಟುಗಳ ಬಯೋಪಿಕ್ ಗಳು ಹೊಸದೇನಲ್ಲ. ಆದಾಗ್ಯೂ, ಈ ಬಾರಿ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಅವರು ತಮ್ಮ ಬಯೋಪಿಕ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
Published: 25th July 2022 04:13 PM | Last Updated: 25th July 2022 04:15 PM | A+A A-

ಶೋಯಬ್ ಅಖ್ತರ್
ಮುಂಬೈ: ಭಾರತದಲ್ಲಿ ಕ್ರೀಡಾಪಟುಗಳ ಬಯೋಪಿಕ್ ಗಳು ಹೊಸದೇನಲ್ಲ. ಆದಾಗ್ಯೂ, ಈ ಬಾರಿ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಅವರು ತಮ್ಮ ಬಯೋಪಿಕ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
Rawalpindi Express Running against the odds ಸಿನಿಮಾದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ 46 ಟೆಸ್ಟ್‌ಗಳು, 163 ಏಕದಿನ ಸರಣಿಗಳು ಮತ್ತು 15 ಟಿ20ಐಗಳಲ್ಲಿ ಕ್ರಮವಾಗಿ ಮೂರು ಸ್ವರೂಪಗಳಲ್ಲಿ 178, 247 ಮತ್ತು 19 ವಿಕೆಟ್‌ಗಳನ್ನು ಪಡೆದಿದ್ದಾರೆ.
ಆದಾಗ್ಯೂ, ಅವರ ವಿಕೆಟ್‌ಗಳ ಸಂಖ್ಯೆಗಿಂತ ಅವರ ವೇಗವು ಎದುರಾಳಿ ಬ್ಯಾಟರ್‌ಗಳನ್ನು ಭಯಭೀತಗೊಳಿಸಿತು. ಅವರು 161kmph (vs ನ್ಯೂಜಿಲೆಂಡ್, 2002) ಕ್ರಿಕೆಟ್‌ನಲ್ಲಿ ವೇಗದ ಎಸೆತದಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: ನಾವು ಮಾಂಸ ತಿನ್ನುತ್ತೇವೆ, ಸಿಂಹಗಳಂತೆ ಬೇಟೆಯಾಡುತ್ತೇವೆ; ಆದರೆ ಟೀಂ ಇಂಡಿಯಾ ವೇಗಿಗಳಿಗೆ ಧಮ್ಮಿಲ್ಲ: ಅಖ್ತರ್
ಸುಂದರ ಪ್ರಯಾಣದ ಆರಂಭವಿದು. ನನ್ನ ಕಥೆ, ನನ್ನ ಜೀವನ, ನನ್ನ ಜೀವನಚರಿತ್ರೆ, 'Rawalpindi Express Running against the odds' ಬಿಡುಗಡೆಯನ್ನು ಪ್ರಕಟಿಸುತ್ತಿದ್ದೇನೆ, ನೀವು ಹಿಂದೆಂದೂ ಯೋಚಿಸದ ಸವಾರಿ ಇಲ್ಲಿದೆ. ಪಾಕಿಸ್ತಾನಿ ಕ್ರೀಡಾಪಟುವಿನ ಬಗ್ಗೆ ಮೊದಲ ವಿದೇಶಿ ಚಲನಚಿತ್ರ. ಕಾಂಟ್ರವರ್ಷಿಯಲ್ ಯುವರ್ಸ್ ಶೋಯೆಬ್ ಅಖ್ತರ್ ಎಂದು ವೇಗಿ ಶೋಯೆಬ್ ಅಖ್ತರ್ ಟ್ವೀಟ್ ಮಾಡಿದ್ದಾರೆ.
ಇನ್ನು ಮೋಷನ್ ಪೋಸ್ಟರ್ ವೇಳೆ ಸಿನಿಮಾವು 2023ರ ನವೆಂಬರ್ 16ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
Beginning of this beautiful journey. Announcing the launch of my story, my life, my Biopic,
— Shoaib Akhtar (@shoaib100mph) July 24, 2022
"RAWALPINDI EXPRESS - Running against the odds"
You're in for a ride you've never taken before. First foreign film about a Pakistani Sportsman.
Controversially yours,
Shoaib Akhtar pic.twitter.com/3tIgBLvTZn