3ನೇ ಏಕದಿನ: ಮಳೆಯಿಂದ ಪಂದ್ಯ ಸ್ಥಗಿತ, ಶತಕದಂಚಿನಲ್ಲಿ ಗಿಲ್, ಭಾರತ 225/3

ವೆಸ್ಟ್ ಇಂಡೀಸ್ ವಿರುದ್ಧ 3ನೇ ಏಕದಿನ ಪಂದ್ಯ ಮಧ್ಯದಲ್ಲಿಯೇ ಮಳೆಯಿಂದಾಗಿ ಸ್ಥಗಿತವಾಗಿದ್ದು, ಮಳೆ ಬಂದ ಹೊತ್ತಿಗೆ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 225ರನ್ ಗಳಿಸಿತ್ತು.
ಮಳೆಯಿಂದ ಪಂದ್ಯ ಸ್ಥಗಿತ
ಮಳೆಯಿಂದ ಪಂದ್ಯ ಸ್ಥಗಿತ

ಕ್ವೀನ್ಸ್ ಪಾರ್ಕ್ ಓವಲ್: ವೆಸ್ಟ್ ಇಂಡೀಸ್ ವಿರುದ್ಧ 3ನೇ ಏಕದಿನ ಪಂದ್ಯ ಮಧ್ಯದಲ್ಲಿಯೇ ಮಳೆಯಿಂದಾಗಿ ಸ್ಥಗಿತವಾಗಿದ್ದು, ಮಳೆ ಬಂದ ಹೊತ್ತಿಗೆ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 225ರನ್ ಗಳಿಸಿತ್ತು.

ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, 36 ಓವರ್ ಮುಕ್ತಾಯದ ವೇಳೆ ವರುಣನ ಸಿಂಚನದಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಮಳೆ ಅಡ್ಡಿಪಡಿಸುವ ಮೊದಲು ಭಾರತ 36 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತ್ತು. ನಾಯಕ ಶಿಖರ್ ಧವನ್ ಮತ್ತು ಶುಭ್‌ಮನ್ ಗಿಲ್ ವೈಯಕ್ತಿಕವಾಗಿ ಅರ್ಧಶತಕಗಳನ್ನು ಬಾರಿಸಿ ಭಾರತವನ್ನು 200 ರನ್ ಗಡಿ ದಾಟಿಸಿದರು. ಅಲ್ಲದೇ ಮೊದಲ ವಿಕೆಟ್‌ಗೆ 113 ರನ್‌ಗಳ ಜೊತೆಯಾಟ ನೀಡಿದರು. 

ಬಳಿಕ 68 ರನ್ ಗಳಿಸಿದ್ದ ಧವನ್ ವಾಲ್ಶ್ ಬೌಲಿಂಗ್ ನಲ್ಲಿ ಔಟಾದರೆ, ಬಳಿಕ ಬಂದ ಶ್ರೇಯಸ್ ಅಯ್ಯರ್ 44 ರನ್ ಗಳಿಸಿ ಹೊಸೈನ್ ಬೌಲಿಂಗ್ ನಲ್ಲಿ ಔಟಾದರು. 98 ರನ್ ಗಳಿಸಿ ಶತಕದಂಚಿನಲ್ಲಿರುವ ಶುಭ್ ಮನ್ ಗಿಲ್ ಮತ್ತು 6 ರನ್ ಗಳಿಸಿರುವ ಸಂಜು ಸ್ಯಾಮ್ಸನ್ ಕ್ರೀಸ್ ನಲ್ಲಿದ್ದಾರೆ.

ಇನ್ನು ವಿಂಡೀಸ್ ಪರ ಹೇಡನ್ ವಾಲ್ಶ್ 2 ಮತ್ತು ಹೊಸೈನ್ 1 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com