ಕಾಮನ್ ವೆಲ್ತ್ ನಲ್ಲಿ ಕ್ರಿಕೆಟ್
ಕಾಮನ್ ವೆಲ್ತ್ ನಲ್ಲಿ ಕ್ರಿಕೆಟ್

ಕಾಮನ್ವೆಲ್ತ್ ಗೇಮ್ಸ್ T20: CWG 2022 ನಲ್ಲಿ ಕ್ರಿಕೆಟ್ ಎಷ್ಟು ವಿಭಿನ್ನ? ಇಲ್ಲಿದೆ ಮಾಹಿತಿ

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಅನ್ನು ಅಳವಡಿಸಲಾಗಿದ್ದು, ಸಾಮಾನ್ಯ ಕ್ರಿಕೆಟ್ ಗಿಂತ ಈ ಜಾಗತಿಕ ಕ್ರೀಡಾಕೂಟದಲ್ಲಿ ಆಡಿಸಲಾಗುತ್ತಿರುವ ಕ್ರಿಕೆಟ್ ಕೊಂಚ ವಿಭಿನ್ನ ಎಂದು ಹೇಳಲಾಗಿದೆ.

ಬರ್ಮಿಂಗ್ ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಅನ್ನು ಅಳವಡಿಸಲಾಗಿದ್ದು, ಸಾಮಾನ್ಯ ಕ್ರಿಕೆಟ್ ಗಿಂತ ಈ ಜಾಗತಿಕ ಕ್ರೀಡಾಕೂಟದಲ್ಲಿ ಆಡಿಸಲಾಗುತ್ತಿರುವ ಕ್ರಿಕೆಟ್ ಕೊಂಚ ವಿಭಿನ್ನ ಎಂದು ಹೇಳಲಾಗಿದೆ.

ಇಂದು ಕ್ರೀಡಾಕೂಟದ ಮೊದಲ ಕ್ರಿಕೆಟ್ ಪಂದ್ಯ ಮುಕ್ತಾಯವಾಗಿದ್ದು, ಭಾರತ ಮತ್ತು ಆಸ್ಚ್ರೇಲಿಯಾ ಮಹಿಳೆಯರ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಇಲ್ಲಿ ಸಾಮಾನ್ಯ ಕ್ರಿಕೆಟ್ ಟೂರ್ನಿಗಳಲ್ಲಿ ಬಳಸುವ ಸಮವಸ್ತ್ರಗಳಿಗಿಂತ ಇಲ್ಲಿ ಆಟಗಾರರು ತೊಟ್ಟಿದ್ದ ಸಮವಸ್ತ್ರ ಕೊಂಚ ಭಿನ್ನವಾಗಿತ್ತು. ಈ ಸಮವಸ್ತ್ರಗಳು ತಾವು ಪ್ರತಿನಿಧಿಸುವ ದೇಶವನ್ನು ಪ್ರತಿನಿಧಿಸುತ್ತಿದ್ದವೇ ಹೊರತು ಮಂಡಳಿಗಳನ್ನಲ್ಲ. ಹೀಗಾಗಿ ಇಲ್ಲಿ ಆಟಗಾರರು ಧರಿಸಿದ್ದ ಜರ್ಸಿಗಳ ಮೇಲೆ ಯಾವುದೇ ಕ್ರಿಕೆಟ್ ಮಂಡಳಿಯ ಲೋಗೋ ಅಥವಾ ಬ್ಯಾಡ್ಜ್ ಗಳಿರಲಿಲ್ಲ. 

ಹೈಬ್ರಿಡ್ ಪಿಚ್ ಬಳಕೆ
ಇನ್ನು ಇಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ಬದಲಿಗೆ ಪದಕಗಳನ್ನು ನೀಡಲಾಗುತ್ತದೆ. ಅಂತೆಯೇ ಇಲ್ಲಿ ಪಿಚ್ ಕೂಡ ವಿಭಿನ್ನವಾಗಿದ್ದು, ಇಲ್ಲಿ ಸಾಮಾನ್ಯ ಕ್ರಿಕೆಟ್ ಪಿಚ್ ಗಳ ಬದಲಿಗೆ ಹೈಬ್ರಿಡ್ ಪಿಚ್ ಗಳನ್ನು ಬಳಕೆ ಮಾಡಲಾಗುತ್ತದೆ. ಈ ಹೈಬ್ರಿಡ್ ಪಿಚ್ ನೈಸರ್ಗಿಕ ಹುಲ್ಲು ಮತ್ತು ಕೃತಕ ನಾರುಗಳ ಸಂಯೋಜನೆಯಾಗಿದೆ. ಈ ಪಿಚ್‌ಗಳು ನೈಸರ್ಗಿಕ ಕ್ರಿಕೆಟ್ ಪಿಚ್‌ಗಳಿಗಿಂತ ಹೆಚ್ಚು ಬೇಗ ಸವೆಯಬಹುದು ಎಂದು ಪಿಚ್ ಕ್ಯುರೇಟರ್ ಗಳು ಅಭಿಪ್ರಾಯಪಟ್ಟಿದ್ದಾರೆ. 

ನಿರ್ದಿಷ್ಟ ಸ್ಥಳದಲ್ಲಿ ವಿವಿಧ ಪಂದ್ಯಗಳಿಗೆ ಮೇಲ್ಮೈಯ ದೀರ್ಘಾವಧಿಯ ಬಳಕೆಗೆ ಅವಕಾಶ ನೀಡುತ್ತದೆ. ಎಡ್ಜ್‌ಬಾಸ್ಟನ್ 8 ದಿನಗಳ ಅಂತರದಲ್ಲಿ ಒಟ್ಟು 16 ಪಂದ್ಯಗಳನ್ನು ಆಯೋಜಿಸಲು ಸಜ್ಜಾಗಿರುವುದರಿಂದ ಅವು CWG 2022 ಗಾಗಿ ಬಳಕೆಯಲ್ಲಿವೆ. ಎರಡೂ ಪದಕಗಳ ಪಂದ್ಯಗಳು ಸಾಂಪ್ರದಾಯಿಕ ಕ್ರಿಕೆಟ್ ಪಿಚ್‌ಗಳಲ್ಲಿ ನಡೆಯಲಿವೆ.

ಪಂದ್ಯಾವಳಿಯ ರಚನೆ:
ವಿಶ್ವಕಪ್ ಟೂರ್ನಿಯಂತೆ ಇಲ್ಲಿ ಮೂರು ಅಥವಾ ನಾಲ್ಕು ಗುಂಪುಗಳ ಬದಲಿಗೆ ಟೂರ್ನಿಗೆ ಆಯ್ಕೆಯಾಗಿರುವ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೆಮಿಫೈನಲ್‌ನಲ್ಲಿ ಆಡುತ್ತವೆ. ಸೆಮಿಫೈನಲ್‌ನಲ್ಲಿ ಗೆದ್ದವರು ಚಿನ್ನದ ಪದಕಕ್ಕಾಗಿ ಫೈನಲ್‌ನಲ್ಲಿ ಆಡುತ್ತಾರೆ. ಸೆಮಿಫೈನಲ್‌ನಲ್ಲಿ ಸೋತವರು ಕಂಚಿನ ಪದಕಕ್ಕಾಗಿ 3ನೇ ಸ್ಥಾನದ ಪ್ಲೇ-ಆಫ್ ಅನ್ನು ಆಡುತ್ತಾರೆ. ಈ ಪಂದ್ಯಾವಳಿ ರಚನೆ ನಮ್ಮ ಐಪಿಎಲ್ ಟೂರ್ನಿ ರಚನೆಯನ್ನು ಹೋಲುತ್ತಿದೆ.
 

Related Stories

No stories found.

Advertisement

X
Kannada Prabha
www.kannadaprabha.com