ಟಿ20 ವಿಶ್ವಕಪ್: ಸೆಮೀಸ್ ಲೆಕ್ಕಾಚಾರ ಅಂತಿಮ, ಫೈನಲ್ ಗಾಗಿ ಭಾರತ vs ಇಂಗ್ಲೆಂಡ್, ಪಾಕಿಸ್ತಾನ vs ನ್ಯೂಜಿಲೆಂಡ್ ಪೈಪೋಟಿ!

ಟಿ20 ವಿಶ್ವಕಪ್ ನಿರ್ಣಾಯಕ ಹಂತ ತಲುಪಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಸೆಮಿ ಫೈನಲ್ ಲೆಕ್ಕಾಚಾರ ಇದೀಗ ಅಂತಿಮವಾಗಿದೆ. ಜಿಂಬಾಬ್ವೆ ವಿರುದ್ಧ ಸೋಲಿನ ಬಳಿಕ ಟೂರ್ನಿಯಿಂದಲೇ ಬಹುತೇಕ ಔಟ್ ಆಗಿದ್ದ ಪಾಕಿಸ್ತಾನ ತಂಡ ಬಳಿಕ ಟೂರ್ನಿಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ಬಳಿಕ ಮತ್ತೆ ಪ್ರಶಸ್ತಿ ರೇಸ್ ಗೆ ಮರಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿಡ್ನಿ: ಟಿ20 ವಿಶ್ವಕಪ್ ನಿರ್ಣಾಯಕ ಹಂತ ತಲುಪಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಸೆಮಿ ಫೈನಲ್ ಲೆಕ್ಕಾಚಾರ ಇದೀಗ ಅಂತಿಮವಾಗಿದೆ. ಜಿಂಬಾಬ್ವೆ ವಿರುದ್ಧ ಸೋಲಿನ ಬಳಿಕ ಟೂರ್ನಿಯಿಂದಲೇ ಬಹುತೇಕ ಔಟ್ ಆಗಿದ್ದ ಪಾಕಿಸ್ತಾನ ತಂಡ ಬಳಿಕ ಟೂರ್ನಿಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ಬಳಿಕ ಮತ್ತೆ ಪ್ರಶಸ್ತಿ ರೇಸ್ ಗೆ ಮರಳಿದೆ.

ಭಾನುವಾರ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಸೋಲಿನ ನಂತರ ದಕ್ಷಿಣ ಆಫ್ರಿಕಾ ಪಂದ್ಯಾವಳಿಯಿಂದ ಹೊರಬಿದ್ದಿದ್ದು, ಟೂರ್ನಿಯಿಂದ ಹೊರಬೀಳುವ ಆತಂಕ ಎದುರಿಸುತ್ತಿದ್ದ ಪಾಕಿಸ್ತಾನ ಇದೀಗ ಸೆಮೀಸ್ ಕಣಕ್ಕೆ ಜಿಗಿದಿದೆ. ಅಂತೆಯೇ ಅಡಿಲೇಡ್ ಓವಲ್‌ನಲ್ಲಿ ಬಾಂಗ್ಲಾದೇಶವನ್ನು ಐದು ವಿಕೆಟ್‌ಗಳಿಂದ ಸೋಲಿಸಿದ ಪಾಕಿಸ್ತಾನವು ಬುಧವಾರ ಸಿಡ್ನಿಯಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ನ್ನು ಎದುರಿಸಲಿದೆ. ಇದಾದ ಒಂದು ದಿನದ ನಂತರ ಭಾರತವು ಅಡಿಲೇಡ್‌ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.

ರಣ ರೋಚಕವಾಗಿದ್ದ ಗ್ರೂಪ್ 2 ರ ಅಂತಿಮ ದಿನ
ಇನ್ನು ಈ ಹಿಂದಿನ ಎಲ್ಲ ಟಿ20 ವಿಶ್ವಕಪ್ ಟೂರ್ನಿಗಳಿಗೆ ಹೋಲಿಕೆ ಮಾಡಿದರೆ ಹಾಲಿ ವಿಶ್ವಕಪ್ ನಿಜಕ್ಕೂ ಕದನ ಕುತೂಹಲವಾಗಿತ್ತು. ಪ್ರತೀ ಪಂದ್ಯಗಳು ಪಂದ್ಯದ ಅಂತಿಮ ಎಸೆತವರೆಗೂ ಫಲಿತಾಂಶಕ್ಕಾಗಿ ಕಾಯುವಂತೆ ಮಾಡಿವೆ. ಪ್ರಮುಖವಾಗಿ ಇಂದು ಅಂದರೆ ಗ್ರೂಪ್ 2 ರ ಅಂತಿಮ ದಿನವು ಅಬ್ಬರದಿಂದ ಪ್ರಾರಂಭವಾಯಿತು. ಕೆಚ್ಚೆದೆಯ ಪ್ರದರ್ಶನ ತೋರಿದ ನೆದರ್ಲ್ಯಾಂಡ್ಸ್ ತಂಡ  ಟೆಂಬಾ ಬವುಮಾ ಅವರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 13 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ನೆದರ್ಲೆಂಡ್ ಟೂರ್ನಿಗೆ ಗೆಲುವಿನ ವಿದಾಯ ಹೇಳಿತಾದರೂ ಅಂತೆಯೇ ಪಾಕಿಸ್ತಾನದ ಸೆಮಿಫೈನಲ್ ಭರವಸೆಗೆ ಹೊಸ ಜೀವ ತುಂಬಿತು.

ಇನ್ನು ಇದೇ ಗುಂಪಿನಲ್ಲಿರುವ ಭಾರತ ತಂಡವು ಇಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 71ರನ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸುವ ಮೂಲಕ ಗುಂಪಿನಲ್ಲಿ ಆಗ್ರಸ್ಥಾನಿಯಾಗಿ ಸೆಮೀಸ್ ಹಂತಕ್ಕೇರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com