ಟಿ20 ವಿಶ್ವಕಪ್: ಫೈನಲ್ ಗೆ ಮಳೆ ಅಡ್ಡಿಯಾಗುವ ಆತಂಕ; ಪಂದ್ಯ ರದ್ದಾದರೆ ಇಂಗ್ಲೆಂಡ್-ಪಾಕಿಸ್ತಾನ ಜಂಟಿ ವಿಜೇತರೆಂದು ಘೋಷಣೆ?

ಐಸಿಸಿ ಟಿ20 ವಿಶ್ವಕಪ್ ಅಂತಿಮ ಹಂತ ತಲುಪಿದ್ದು, ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದ್ದು, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಜಂಟಿ ಚಾಂಪಿಯನ್ ಆಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಫೈನಲ್ ಗೆ ಮಳೆಕಾಟ
ಫೈನಲ್ ಗೆ ಮಳೆಕಾಟ

ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್ ಅಂತಿಮ ಹಂತ ತಲುಪಿದ್ದು, ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದ್ದು, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಜಂಟಿ ಚಾಂಪಿಯನ್ ಆಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಸ್ಟ್ರೇಲಿಯಾ ಹವಾಮಾನ ಇಲಾಖೆಯ ಪ್ರಕಾರ ಮೆಲ್ಬರ್ನ್ ನಲ್ಲಿ ಭಾನುವಾರ ಪಂದ್ಯ ನಡೆಯುವ ಅವಧಿ ವೇಳೆ ಶೇ.95ರಷ್ಟು ಭಾಗದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಸುಮಾರು 25 ಮಿಲಿಮೀಟರ್‌ ಮಳೆಯಾಗಲಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.  

ಭಾನುವಾರ ಮಳೆಯಾಗಿ ಪಂದ್ಯ ನಡೆಯದಿದ್ದರೆ ಸೋಮವಾರವನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ. ಆದರೆ ಆ ದಿನವೂ 5ರಿಂದ 10 ಮಿಲಿಮೀಟರ್‌ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಟೂರ್ನಿಯ ನಿಯಮಗಳ ಪ್ರಕಾರ ಅವಕಾಶ ಸಿಕ್ಕರೆ ಕನಿಷ್ಠ 10 ಓವರ್‌ಗಳ ಪಂದ್ಯ ಆಯೋಜಿಸಬಹುದು. ಇದಕ್ಕೆ ಆದ್ಯತೆ ನೀಡಲಾಗುವುದು. ಒಂದೊಮ್ಮೆ ಭಾನುವಾರ ಪಂದ್ಯವು ಆರಂಭವಾಗಿ ಮಳೆಯಿಂದ ಅರ್ಧಕ್ಕೆ ನಿಂತರೆ ಮರುದಿವಸ ಉಳಿದ ಭಾಗವನ್ನು ಮುಂದುವರಿಸಲಾಗುವುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 7ಕ್ಕೆ ಪಂದ್ಯ ಆರಂಭವಾಗಲಿದೆ.  2019ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಸೆಮಿಫೈನಲ್ ಪಂದ್ಯವು ಮಳೆಯಿಂದಾಗಿ ಎರಡು ದಿನಗಳಲ್ಲಿ ನಡೆದಿತ್ತು. 2002ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಣ ಫೈನಲ್ ಮಳೆಯಿಂದಾಗಿ ರದ್ದಾಗಿತ್ತು.  ಪ್ರಸ್ತುತ ಟೂರ್ನಿಯಲ್ಲಿ ಎಂ.ಸಿ.ಜಿಯಲ್ಲಿ ನಡೆದ ಮೂರು ಪಂದ್ಯಗಳು ಮಳೆಗೆ ರದ್ದಾಗಿದ್ದವು. ಮಳೆಯಿಂದಾಗಿ ಹಾಲಿ ಟೂರ್ನಿಯ ಚಿತ್ರಣವೇ ಬದಲಾಗಿತ್ತು. ಬಲಾಢ್ಯ ತಂಡಗಳೇ ಫಲಿತಾಂಶ ರಹಿತ ಪಂದ್ಯಗಳಿಂದ ಟೂರ್ನಿಯಿಂದ ಹೊರ ಬಿದ್ದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com