ಟಿ20 ವಿಶ್ವಕಪ್ ಫೈನಲ್: ಸ್ಯಾಮ್ ಕರನ್ ಮಾರಕ ಬೌಲಿಂಗ್; ಪಾಕಿಸ್ತಾನವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಇಂಗ್ಲೆಂಡ್

ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು 137 ರನ್ ಪೇರಿಸಿದೆ.
ಪಾಕ್-ಇಂಗ್ಲೆಂಡ್ ಪಂದ್ಯ
ಪಾಕ್-ಇಂಗ್ಲೆಂಡ್ ಪಂದ್ಯ

ಮೆಲ್ಬರ್ನ್: ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು 137 ರನ್ ಪೇರಿಸಿದೆ.

ಮೆಲ್ಬರ್ನ್ ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜಾಸ್ ಬಟ್ಲರ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.  ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಆಂಗ್ಲ ಬೌಲರ್ ಗಳ ಕಾಡಿದರು.

ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದ ಮೊಹಮ್ಮದ್ ರಿಜ್ವಾನ್ 15 ಹಾಗೂ ಬಾಬರ್ ಅಜಾಂ 32 ರನ್ ಪೇರಿಸಿದರು. ಮೊಹಮ್ಮದ್ ಹ್ಯಾರಿಸ್ 8, ಶಾನ್ ಮಸೂದ್ 38, ಶದಾಬ್ ಖಾನ್  20 ರನ್ ಪೇರಿಸಿದ್ದು ಆ ಮೂಲಕ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 137 ರನ್ ಪೇರಿಸಿದ್ದು ಇಂಗ್ಲೆಂಡ್ ತಂಡಕ್ಕೆ 138 ರನ್ ಗಳ ಗುರಿ ನೀಡಿದೆ.

ಇನ್ನು ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಸ್ಯಾಮ್ ಕುರ್ರಾನ್ 3, ಅದಿಲ್ ರಶೀದ್ ಮತ್ತು ಕ್ರಿಸ್ ಜೋರ್ಡಾನ್ ತಲಾ 2 ವಿಕೆಟ್ ಪಡೆದಿದ್ದರೆ ಬೆನ್ ಸ್ಟೋಕ್ಸ್ 1 ವಿಕೆಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com