ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲು: ಚೇತನ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಸಮತಿ ವಜಾ

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಫೈನಲ್‌ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಚೇತನ್ ಶರ್ಮಾ ನೇತೃತ್ವದ ನಾಲ್ವರು ಸದಸ್ಯರ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬಿಸಿಸಿಐ ಶುಕ್ರವಾರ ವಜಾಗೊಳಿಸಿದೆ.
ಚೇತನ್ ಶರ್ಮಾ
ಚೇತನ್ ಶರ್ಮಾ

ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಫೈನಲ್‌ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಚೇತನ್ ಶರ್ಮಾ ನೇತೃತ್ವದ ನಾಲ್ವರು ಸದಸ್ಯರ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬಿಸಿಸಿಐ ಶುಕ್ರವಾರ ವಜಾಗೊಳಿಸಿದೆ.

ಇಂದು ನಡೆದ ಮಹತ್ವದ ಸಭೆಯಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಸೇರಿದಂತೆ ಸಂಪೂರ್ಣ ಸಮಿತಿಯನ್ನೇ ವಜಾ ಮಾಡಲಾಗಿದ್ದು, ಈಗ ಹೊಸ ಆಯ್ಕೆ ಸಮಿತಿ ರಚಿಸಲು ಅರ್ಜಿ ಅಹ್ವಾನಿಸಿದೆ.

ಚೇತನ್(ಉತ್ತರ ವಲಯ), ಹರ್ವಿಂದರ್ ಸಿಂಗ್ (ಕೇಂದ್ರ ವಲಯ), ಸುನಿಲ್ ಜೋಶಿ (ದಕ್ಷಿಣ ವಲಯ) ಮತ್ತು ದೇಬಾಶಿಶ್ ಮೊಹಾಂತಿ(ಪೂರ್ವ ವಲಯ) ಅವರನ್ನು ಹಿರಿಯ ರಾಷ್ಟ್ರೀಯ ಆಯ್ಕೆ ಸಮತಿಯಿಂದ ವಜಾಗೊಳಿಸಲಾಗಿದೆ. ಅವರಲ್ಲಿ ಕೆಲವರನ್ನು 2020ರಲ್ಲಿ ಮತ್ತು ಕೆಲವರನ್ನು 2021ರಲ್ಲಿ ನೇಮಕ ಮಾಡಲಾಗಿತ್ತು.

ಇದೀಗ ಹೊಸ ಆಯ್ಕೆ ಸಮಿತಿ ರಚಿಸಲು ಬಿಸಿಸಿಐ ಅರ್ಹರಿಂದ ಅರ್ಜಿ ಅಹ್ವಾನಿಸಿದೆ. ಇಷ್ಟೇ ಅಲ್ಲ ಅರ್ಹತೆಗಳೇನು ಅನ್ನೋದನ್ನೂ ಸೂಚಿಸಿದೆ. ಬಿಸಿಸಿಐ ಹಿರಿಯರ ತಂಡದ ಆಯ್ಕೆ ಸಮಿತಿಗೆ ಸದಸ್ಯ ಹಾಗೂ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಹಾಕುವ ಅಭ್ಯರ್ಥಿಗಳು ಕನಿಷ್ಠ 7 ಟೆಸ್ಟ್ ಪಂದ್ಯ ಅಥವಾ, 30 ಪ್ರಥಮ ದರ್ಜೆ ಕ್ರಿಕೆಟ್ ಅಥವಾ 10 ಏಕದಿನ ಹಾಗೂ 20 ಪ್ರಥಮ ದರ್ಜೆ ಪಂದ್ಯ ಆಡಿರಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.

ಅರ್ಜಿ ಹಾಕುವ ಅಭ್ಯರ್ಥಿಗಳ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಕನಿಷ್ಠ 5 ವರ್ಷಗಳಾಗಿರಬೇಕು. ಕ್ರಿಕೆಟ್‌ನ ಯಾವುದೇ ಕಮಿಟಿಯಲ್ಲಿ ಸ್ಥಾನ ಹೊಂದಿರಬಾರದು ಎಂದು ಬಿಸಿಸಿಐ ಹೇಳಿದೆ. ಇನ್ನು 60 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು ನವೆಂಬರ್ 28 ಕೊನೆಯ ದಿನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com