ನ್ಯೂಜಿಲೆಂಡ್- ಭಾರತ ಮೊದಲ ಟಿ-20 ಪಂದ್ಯ ಆರಂಭಕ್ಕೆ ಮಳೆ ಅಡ್ಡಿ
ಭಾರತ - ನ್ಯೂಜಿಲೆಂಡ್ ನಡುವಿನ ಮೊದಲ ಟಿ-20 ಪಂದ್ಯ ಆರಂಭಕ್ಕೆ ಮಳೆ ಅಡ್ಡಿಯಾಗಿದೆ. ಟಿ-20 ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಸೋತ ಬಳಿಕ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ನಡೆಯುತ್ತಿದ್ದು, ಇಲ್ಲಿನ ಸ್ಕೈ ಕ್ರೀಡಾಂಗಣಕ್ಕೆ ಅಪಾರ ಸಂಖ್ಯೆಯಲ್ಲಿ ಭಾರತದ ಕ್ರಿಕೆಟ್ ಅಭಿಮಾನಿಗಳು ಆಗಮಿಸಿದ್ದಾರೆ.
Published: 18th November 2022 12:33 PM | Last Updated: 18th November 2022 12:44 PM | A+A A-

ಭಾರತದ ಕ್ರಿಕೆಟ್ ಅಭಿಮಾನಿಗಳು
ವೆಲ್ಲಿಂಗ್ ಟನ್: ಭಾರತ - ನ್ಯೂಜಿಲೆಂಡ್ ನಡುವಿನ ಮೊದಲ ಟಿ-20 ಪಂದ್ಯ ಆರಂಭಕ್ಕೆ ಮಳೆ ಅಡ್ಡಿಯಾಗಿದೆ. ಟಿ-20 ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಸೋತ ಬಳಿಕ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ನಡೆಯುತ್ತಿದ್ದು, ಇಲ್ಲಿನ ಸ್ಕೈ ಕ್ರೀಡಾಂಗಣಕ್ಕೆ ಅಪಾರ ಸಂಖ್ಯೆಯಲ್ಲಿ ಭಾರತದ ಕ್ರಿಕೆಟ್ ಅಭಿಮಾನಿಗಳು ಆಗಮಿಸಿದ್ದಾರೆ.
ಆದರೆ, ಮಳೆಯಿಂದ ಮೈದಾನ ಒದ್ದೆಯಾಗಿರುವುದರಿಂದ ಟಾಸ್ ವಿಳಂಬವಾಗಿದೆ. ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಈ ಪಂದ್ಯದ ನಾಯಕತ್ವ ವಹಿಸಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರಿಗೂ ವಿಶ್ರಾಂತಿ ನೀಡಲಾಗಿದೆ.
Crickets fans arrived at Sky Stadium in Wellington, New Zealand for #INDvsNZ 1st T20 match. Toss has been delayed due to a wet outfield. pic.twitter.com/fwYcRsnFYu
— ANI (@ANI) November 18, 2022
ನ್ಯೂಜಿಲೆಂಡ್ ನಲ್ಲಿ ಟೀಂ ಇಂಡಿಯಾ ಭಯಬಿಟ್ಟು ಆಟವಾಡಬೇಕಿದೆ ಎಂದು ಕೋಚ್ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಟಿ-20 ಮಾದರಿಯಲ್ಲಿ ಭಯ ಬಿಟ್ಟು ಸ್ವತಂತ್ರವಾಗಿ ಆಡಬೇಕಾದ ಅಗತ್ಯವಿದೆ. ಇದೇ ವೇಳೆ ತಂಡದ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವುದು ಪ್ರಮುಖವಾಗಿದೆ ಎಂದು ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್ ಸಲಹೆ ನೀಡಿದ್ದಾರೆ. ಟಿ-20 ವಿಶ್ವಕಪ್ ನಂತರ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ರಾಂತಿಯಲ್ಲಿದ್ದಾರೆ.