
ವಿಲಿಯಮ್ಸನ್-ಲಾಥಮ್
ಆಕ್ಲೆಂಡ್: ಭಾರತದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ನ್ಯೂಜಿಲೆಂಡ್ ತಂಡ ತವರಿನಲ್ಲಿ ಭರ್ಜರಿ ದಾಖಲೆ ನಿರ್ಮಿಸಿದೆ.
ಇಂದು ಆಕ್ಲೆಂಡ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 307ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಕೇವಲ 47.1 ಓವರ್ ನಲ್ಲಿಯೇ 309ರನ್ ಗಳಿಸಿ ಇನ್ನೂ 17 ಎಸೆತಗಳು ಬಾಕಿ ಇರುವಂತೆ ಜಯ ಗಳಿಸಿತು. ಕಿವೀಸ್ ಜಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಲಾಥಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಮಹತ್ತರ ಪಾತ್ರ ನಿರ್ವಹಿಸಿದರು. ಲಾಥಮ್ ಕೇವಲ 104 ಎಸೆತಗಳಲ್ಲಿ ಬರೊಬ್ಬರಿ 146ರನ್ ಚಚ್ಚಿದರೆ, ನಾಯಕ ವಿಲಿಯಮ್ಸನ್ 98 ಎಸೆತಗಳಲ್ಲಿ ಅಜೇಯ 94ರನ್ ಗಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.
ಇದನ್ನೂ ಓದಿ: 1st ODI: ಟೀಂ ಇಂಡಿಯಾ ನೀಡಿದ 307 ರನ್ ಗುರಿ ಭೇದಿಸಿದ ನ್ಯೂಜಿಲ್ಯಾಂಡ್; 7 ವಿಕೆಟ್ ಭರ್ಜರಿ ಜಯ!
ಈ ಪಂದ್ಯದ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ತವರಿನಲ್ಲಿ ಅಮೋಘ ದಾಖಲೆ ಬರೆದಿದ್ದು, ಇದು ಹಾಲಿ ಕ್ರಿಕೆಟ್ ಋತುವಿನಲ್ಲಿ ತವರಿನಲ್ಲಿ ನ್ಯೂಜಿಲೆಂಡ್ ಸಿಕ್ಕ 13ನೇ ಗೆಲುವಾಗಿದೆ. ಇದು ನ್ಯೂಜಿಲೆಂಡ್ ಪಾಲಿಗೆ ಶ್ರೇಷ್ಠ ಪ್ರದರ್ಶನದ ಋತುವಾಗಿದ್ದು, ಈ ಹಿಂದೆ 2015ರಲ್ಲಿ ನ್ಯೂಜಿಲೆಂಡ್ ತಂಡ ಜನವರಿಯಿಂದ ಡಿಸೆಂಬರ್ ವರೆಗೆ 12 ಪಂದ್ಯಗಳನ್ನು ಗೆದ್ದಿತ್ತು. ಇದಕ್ಕೂ ಮೊದಲು 2017ರ ಡಿಸೆಂಬರ್ ನಿಂದ 2018ರ ಫೆಬ್ರವರಿಗೆ 9 ಪಂದ್ಯಗಳಲ್ಲಿ ಜಯ ದಾಖಲಿಸಿತ್ತು. ಇದೀಗ ಫೆಬ್ರವರಿ 2019ರಿಂದ ಈ ವರೆಗೂ 13 ಪಂದ್ಯಗಳಲ್ಲಿ ಕಿವೀಸ್ ಪಡೆ ಜಯ ದಾಖಲಿಸಿ ದಾಖಲೆ ನಿರ್ಮಿಸಿದೆ.
STAT: Most successive ODI wins for New Zealand at home
13 wins: Feb 2019 - ongoing *
12 wins: Jan - Dec 2015
9 wins: Dec 2017 - Feb 2018