ಭಾರತ vs ನ್ಯೂಜಿಲೆಂಡ್ 2ನೇ ಏಕದಿನಕ್ಕೆ ಮಳೆ ಅಡ್ಡಿ; ಪಂದ್ಯ ರದ್ದು

ಭಾರತ-ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಪಂದ್ಯವನ್ನು ಅಂಪೈರ್ ಗಳು ರದ್ದು ಮಾಡಿದ್ದಾರೆ.
2ನೇ ಏಕದಿನಕ್ಕೆ ಮಳೆ ಅಡ್ಡಿ
2ನೇ ಏಕದಿನಕ್ಕೆ ಮಳೆ ಅಡ್ಡಿ

ಹ್ಯಾಮಿಲ್ಟನ್: ಭಾರತ-ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಪಂದ್ಯವನ್ನು ಅಂಪೈರ್ ಗಳು ರದ್ದು ಮಾಡಿದ್ದಾರೆ.

ಬೆಳಗ್ಗಿನಿಂದಲೂ ನಿರಂತರವಾಗಿ ಸುರಿದ ಮಳೆಯಿಂದಾಗಿ ಇಂದಿನ ಪಂದ್ಯ ರದ್ದಾಗಿದ್ದು, ಇಂದು ಇಡೀ ದಿನ ಕೇವಲ 12.5 ಓವರ್ ಮಾತ್ರ ಆಡಲು ಸಾಧ್ಯವಾಯಿತು. ಹೀಗಾಗಿ ಅನ್ಯ ಮಾರ್ಗವಿಲ್ಲದೇ ಅಂಪೈರ್ ಗಳು ಪಂದ್ಯವನ್ನು ರದ್ದು ಮಾಡಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಭಾರತ
ಟಾಸ್ ಸೋತರೂ ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ 5ನೇ ಓವರ್ ಬ್ಯಾಟಿಂಗ್ ಮಾಡುತ್ತಿದ್ದಾಗ ಮಳೆ ಅಡ್ಡಿ ಪಡಿಸಿತು. ಈ ವೇಳೆ ಭಾರತ 4.5 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 22 ರನ್ ಗಳಿಸಿತ್ತು. ಶುಭಮನ್ ಗಿಲ್ ಮತ್ತು ನಾಯಕ ಶಿಖರ್ ಧವನ್ ಕ್ರೀಸ್ ನಲ್ಲಿದ್ದರು. ಈ ವೇಳೆ ಸುರಿದ ಮಳೆ ನಿರಂತರ 3 ಗಂಟೆಗಳ ಕಾಲ ಸುರಿಯಿತು. ಬಳಿಕ ಮಳೆ ನಿಂತ ಹಿನ್ನಲೆಯಲ್ಲಿ ತಲಾ 29ಓವರ್ ಗಳಿಗೆ ಪಂದ್ಯವನ್ನು ಕಡಿತಗೊಳಿಸಿ ಆಟ ಮುಂದುವರೆಸಲಾಯಿತು.

ಆರಂಭಿಕ ಆಘಾತ ಎದುರಿಸಿದ ಭಾರತ
ಮಳೆ ನಿಂತ ಬಳಿಕ ಆಟ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಕೇವಲ 3 ರನ್ ಗಳಿಸಿದ್ದ ನಾಯಕ ಶಿಖರ್ ಧವನ್ ರನ್ನು ಮ್ಯಾಟ್ ಹೆನ್ರಿ ಔಟ್ ಮಾಡಿದರು. ಮತ್ತೊಂದು ತುದಿಯಲ್ಲಿ ಶುಭಮನ್ ಗಿಲ್ 31 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದು, ಧವನ್ ಬಳಿಕ ಕ್ರೀಸ್ ಗೆ ಆಗಮಿಸಿದ್ದ ಸೂರ್ಯ ಕುಮಾರ್ ಯಾದವ್ ಭಾರತಕ್ಕೆ ಅತ್ಯುತ್ತಮ ಜೊತೆಯಾಟ ನೀಡಿದರು.

ಈ ಜೋಡಿ  85 ರನ್ ಗಳ ಜೊತೆಯಾಟದೊಂದಿಗೆ ಉತ್ತಮವಾಗಿ ಆಡುತ್ತಿತ್ತು. ಈ ವೇಳೆ ಮತ್ತೆ ಮಳೆ ಅಡ್ಡಿ ಪಡಿಸಿ ಆಟ ನಿಂತಿತು. ಈ ವೇಳೆ ಗಿಲ್ 42 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 44ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದರೆ, ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದ ಸೂರ್ಯ ಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 3 ಸಿಕ್ಸರ್, 2 ಬೌಂಡರಿ ನೆರವಿನಿಂದ 34 ರನ್ ಗಳಿಸಿ ಭರ್ಜರಿಯಾಗಿ ಆಡುತ್ತಿದ್ದರು.

ಆದರೆ ಮಳೆಯಿಂದಾಗಿ ಇದೀಗ ಇಡೀ ಪಂದ್ಯವನ್ನು ರದ್ದು ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com