3ನೇ ಟಿ20: ದ.ಆಫ್ರಿಕಾ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ 228ರನ್ ಗಳ ಬೃಹತ್ ಗುರಿ!

ಭಾರತದ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ದ.ಆಫ್ರಿಕಾ ತಂಡ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಭಾರತಕ್ಕೆ 228ರನ್ ಗಳ ಬೃಹತ್ ಗುರಿ ನೀಡಿದೆ.
ರೋಸ್ಸೋ ಬ್ಯಾಟಿಂಗ್ ಅಬ್ಬರ
ರೋಸ್ಸೋ ಬ್ಯಾಟಿಂಗ್ ಅಬ್ಬರ

ಇಂದೋರ್: ಭಾರತದ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ದ.ಆಫ್ರಿಕಾ ತಂಡ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಭಾರತಕ್ಕೆ 228ರನ್ ಗಳ ಬೃಹತ್ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ರೋಸ್ಸೋ ಅಜೇಯ ಶತಕ ಹಾಗೂ ಕ್ವಿಂಟನ್ ಡಿಕಾಕ್ (68)ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227ರನ್ ಕಲೆ ಹಾಕಿತು. ಆ ಮೂಲಕ ಭಾರತಕ್ಕೆ ಗೆಲಲ್ಲು 228ರನ್ ಗಳ ಬೃಹತ್ ಗುರಿಯನ್ನು ನೀಡಿದೆ.

ಆರಂಭಿಕ ಆಘಾತದ ಹೊರತಾಗಿಯೂ ಭಾರತದ ವಿರುದ್ಧ ತಿರುಗಿ ಬಿದ್ದ ಹರಿಣಗಳು ಡಿಕಾಕ್ ಮತ್ತು ರೊಸ್ಸೋ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಚೇತರಿಸಿಕೊಂಡರು. ರೋಸ್ಸೋ ಕೇವಲ 48 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಮತ್ತು 7 ಬೌಂಡರಿ ಸಹಿತ ಶತಕ ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಡಿಕಾಕ್ 43 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 68 ರನ್ ಗಳಿಸಿ ರನೌಟ್ ಗೆ ಬಲಿಯಾದರು. ಸ್ಚಬ್ಸ್ (23 ರನ್) ಮತ್ತು ಮಿಲ್ಲರ್ (19 ರನ್) ಆಫ್ರಿಕಾ ರನ್ ಗಳಿಕೆಯನ್ನು 220 ಗಡಿ ದಾಟಿಸಿದರು. 

ಇನ್ನು ಭಾರತದ ಪರ ದೀಪಕ್ ಚಹರ್ ಮತ್ತು ಉಮೇಶ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com