ಟಿ20 ವಿಶ್ವಕಪ್: ಇಂಗ್ಲೆಂಡ್ ಗೆಲುವು ಕಸಿದ ಮಳೆ: ಐರ್ಲೆಂಡ್ ಗೆ 5 ರನ್ ಗಳ ಜಯ
ಟಿ20 ವಿಶ್ವಕಪ್ ನ ಇಂದಿನ ಇಂಗ್ಲೆಂಡ್ vs ಐರ್ಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಐರ್ಲೆಂಡ್ ತಂಡ 5 ರನ್ ಗಳ ಅಂತರದ ಗೆಲುವು ಘೋಷಣೆ ಮಾಡಲಾಗಿದೆ.
Published: 26th October 2022 02:04 PM | Last Updated: 26th October 2022 02:04 PM | A+A A-

ಐರ್ಲೆಂಡ್ ಗೆ ಜಯ
ಮೆಲ್ಬೋರ್ನ್: ಟಿ20 ವಿಶ್ವಕಪ್ ನ ಇಂದಿನ ಇಂಗ್ಲೆಂಡ್ vs ಐರ್ಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಐರ್ಲೆಂಡ್ ತಂಡ 5 ರನ್ ಗಳ ಅಂತರದ ಗೆಲುವು ಘೋಷಣೆ ಮಾಡಲಾಗಿದೆ.
What an amazing win by Ireland against England
— SportsTiger (@sportstigerapp) October 26, 2022
(Credit: ICC)#T20WorldCup2022 #ENGvsIRE #T20WC2022 #T20WorldCup #T20worldcup22 #T20WC #T20IWorldCup2022 #T20Cricket #CricketWorldCup #Cricket pic.twitter.com/PDQ6ZGpZox
ಮೆಲ್ಬೋನ್ರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ನೀಡಿದ 158ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 14.3 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 105ರನ್ ಗಳಿಸಿತ್ತು. ಈ ವೇಳೆ ಮಳೆ ಆರಂಭವಾಗಿ ಪಂದ್ಯಕ್ಕೆ ಅಡ್ಡಿ ಪಡಿಸಿತು. ಹೀಗಾಗಿ ಅಂಪೈರ್ ಗಳ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ರನ್ ರೇಟ್ ಆಧಾರದ ಮೇಲೆ ಐರ್ಲೆಂಡ್ ತಂಡವನ್ನು ಐದು ರನ್ ಗಳ ಅಂತರದಲ್ಲಿ ವಿಜಯಿ ಎಂದು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಐಸಿಸಿ ಟಿ20 ವಿಶ್ವಕಪ್: ಲಂಕಾ ವಿರುದ್ಧ ಆಸ್ಟ್ರೇಲಿಯಾ 7 ವಿಕೆಟ್ ಗಳ ಭರ್ಜರಿ ಜಯ
ಡಕ್ವರ್ಥ್ ಲೂಯಿಸ್ ನಿಯಮದನ್ವಯ ಇಂಗ್ಲೆಂಡ್ ತಂಡ ಈ ಪಂದ್ಯ ಗೆಲ್ಲಲು 14.3 ಓವರ್ ನಲ್ಲಿ 110 ರನ್ ಗಳಿಸಬೇಕಿತ್ತು. ಆದರೆ 105 ರನ್ ಗಳಿಸಿದ್ದ ಹಿನ್ನಲೆಯಲ್ಲಿ ಐದು ರನ್ ಗಳ ಅಂತರದಲ್ಲಿ ಕ್ರಿಕೆಟ್ ಶಿಶು ಐರ್ಲೆಂಡ್ ಅನ್ನು ವಿಜಯಿ ಎಂದು ಘೋಷಣೆ ಮಾಡಲಾಗಿದೆ. ಆ ಮೂಲಕ ಇಂಗ್ಲೆಂಡ್ ತಂಡಕ್ಕೆ ತೀವ್ರ ಮುಖಭಂಗವಾದಂತಾಗಿದೆ.